For Quick Alerts
  ALLOW NOTIFICATIONS  
  For Daily Alerts

  ಕಂಗನಾ ಹಾಟ್ & ಸೆಕ್ಸಿ ಫೋಟೋ ವೈರಲ್: ಯೂರೋಪ್‌ನಲ್ಲಿ 'ಕ್ವೀನ್' ಪಾರ್ಟಿ

  |

  ಅದ್ಯಾಕೋ ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಹಿರಂಗವಾಗಿ ಬಾಲಿವುಡ್ ಪ್ರಭಾವಿ ನಟ-ನಿರ್ಮಾಪಕರ ವಿರುದ್ಧ ಕಂಗನಾ ಗುಡುಗಿದ್ದರು. ಅದಾದ ಮೇಲೆ ಕಂಗನಾ ವಿರುದ್ಧ ಹಲವು ಕೇಸ್‌ಗಳು ಸಹ ದಾಖಲಾಗಿವೆ.

  ಚಿತ್ರಸಾಹಿತಿ, ಬರಹಗಾರ ಜಾವೇದ್ ಅಖ್ತರ್ ವಿರುದ್ಧ ಕಂಗನಾ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆ ಜಾವೇದ್ ಅಖ್ತರ್ ನಟಿಯ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿದ್ದರು. ಈ ಕೇಸ್‌ನಲ್ಲಿ ಇದುವರೆಗೂ ನ್ಯಾಯಾಲಯಕ್ಕೆ ಹಾಜರಾಗದ ನಟಿಯ ಮೇಲೆ ಕೋರ್ಟ್‌ ಸಹ ಕೋಪಗೊಂಡಿತ್ತು. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿಲ್ಲ ಅಂದ್ರೆ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿತ್ತು.

  ಹೊಳೆಯುವುದೆಲ್ಲಾ ಚಿನ್ನವಲ್ಲ; ರಾಜ್ ಕುಂದ್ರ ಬಗ್ಗೆ ಕಂಗನಾ ವ್ಯಂಗ್ಯಹೊಳೆಯುವುದೆಲ್ಲಾ ಚಿನ್ನವಲ್ಲ; ರಾಜ್ ಕುಂದ್ರ ಬಗ್ಗೆ ಕಂಗನಾ ವ್ಯಂಗ್ಯ

  ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಂಗನಾ ರಣಾವತ್ ಚಿತ್ರೀಕರಣ, ಪಾರ್ಟಿ ಅಂತ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ಧಾಕಡ್ ಸಿನಿಮಾ ಶೂಟಿಂಗ್ ಮುಗಿಸಿರುವ ಕಂಗನಾ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದ ಪ್ರಮುಖ ಕೇಂದ್ರಬಿಂದುವಾಗಿದೆ. ಮುಂದೆ ಓದಿ...

  ಯೂರೋಪ್‌ನಲ್ಲಿ ಕಂಗನಾ

  ಯೂರೋಪ್‌ನಲ್ಲಿ ಕಂಗನಾ

  ಧಾಕಡ್ ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ತೆರಳಿದ್ದ ಕಂಗನಾ ರಣಾವತ್ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸಿನಿಮಾ ಮುಗಿಸಿದ ಖುಷಿಗಾಗಿ ಪಾರ್ಟಿ ಮಾಡಿದ ಕಂಗನಾ ಸ್ಟೈಲಿಶ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಕಂಗನಾ ಸಖತ್ ಹಾಟ್ ಹಾಗು ಸೆಕ್ಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  ಸ್ಪೈ ಥ್ರಿಲ್ಲರ್ ಸಿನಿಮಾ

  ಸ್ಪೈ ಥ್ರಿಲ್ಲರ್ ಸಿನಿಮಾ

  ರಂಜನೀಶ್ ಘಾಯ್ ನಿರ್ದೇಶನದಲ್ಲಿ ಧಾಕಡ್ ತಯಾರಾಗಿದ್ದು, ಇದು ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ.

  ನಾನು ಬಿಟ್ಟಿದ್ದನ್ನು ಬೇಡುತ್ತಿದ್ದಳು, ಬಿ ಗ್ರೇಡ್ ನಟಿ: ತಾಪ್ಸಿ ವಿರುದ್ಧ ಮತ್ತೆ ಸಿಡಿದೆದ್ದ ಕಂಗನಾನಾನು ಬಿಟ್ಟಿದ್ದನ್ನು ಬೇಡುತ್ತಿದ್ದಳು, ಬಿ ಗ್ರೇಡ್ ನಟಿ: ತಾಪ್ಸಿ ವಿರುದ್ಧ ಮತ್ತೆ ಸಿಡಿದೆದ್ದ ಕಂಗನಾ

  ನಿರ್ದೇಶನಕ್ಕೆ ತಯಾರಿ

  ನಿರ್ದೇಶನಕ್ಕೆ ತಯಾರಿ

  ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಅಧರಿಸಿ ಸಿನಿಮಾ ಮಾಡಲು ಕಂಗನಾ ಸಜ್ಜಾಗಿದ್ದು, ಈ ಚಿತ್ರವನ್ನು ಖುದ್ದು ಅವರೇ ಡೈರೆಕ್ಟ್ ಮಾಡಲಿದ್ದಾರೆ. ಈ ಸಿನಿಮಾ 'ಎಮರ್ಜೆನ್ಸಿ' ಎಂದು ಹೆಸರಿಟ್ಟಿದ್ದು, ಅದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಸುಮಾರು ವರ್ಷದಿಂದ ಸ್ಕ್ರಿಪ್ಟ್ ಕೆಲಸ ಮಾಡಿದ್ದು, ಇತ್ತೀಚಿಗಷ್ಟೆ ಲುಕ್ ಟೆಸ್ಟ್ ಸಹ ಮಾಡಿದ್ದರು.

  'ತಲೈವಿ' ಬಿಡುಗಡೆಯಾಗಬೇಕಿದೆ

  'ತಲೈವಿ' ಬಿಡುಗಡೆಯಾಗಬೇಕಿದೆ

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಬಯೋಪಿಕ್ 'ತಲೈವಿ' ರಿಲೀಸ್‌ಗಾಗಿ ಕಾಯುತ್ತಿದೆ. ಈಗಾಗಲೇ ಎರಡು ಸಲ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಕೋವಿಡ್ ಕಾರಣದಿಂದ ಹಿಂದಕ್ಕೆ ಸರಿದಿದೆ. ಎಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡಿದ್ದು, ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ನಾಸರ್, ಅರವಿಂದ್ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಷ್ಟೇ ಅಲ್ಲದೇ ಮತ್ತಷ್ಟು ಚಿತ್ರಗಳು ಕಂಗನಾ ಬಳಿ ಇದೆ. 'ಮಣಿಕರ್ಣಿಕಾ' ಸಿನಿಮಾ ಹಿಟ್ ಆದ್ಮೇಲೆ ಭಾಗ 2 ಎರಡು ಮಾಡುವುದಾಗಿ ಘೋಷಿಸಿದ್ದಾರೆ. 'ತೇಜಸ್' ಎನ್ನುವ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. 'ದಿ ಲೆಜೆಂಡ್ ಆಫ್ ದಿಡ್ಡಾ' ಪ್ರಾಜೆಕ್ಟ್ ಸಹ ಕಂಗನಾ ಕೈಯಲ್ಲಿದೆ. ಹೀಗೆ, ಒಂದು ಕಡೆ ಸಿನಿಮಾಗಳು, ಇನ್ನೊಂದೆಡೆ ವೈಯಕ್ತಿಕ ವಿಚಾರದ ವಿವಾದಗಳು 'ಕ್ವೀನ್' ಖ್ಯಾತಿಯ ಸುತ್ತ ಸುತ್ತಿಕೊಂಡಿದೆ.

  ಬಾಲಿವುಡ್ ಮುಖ ಬಯಲು ಮಾಡುವೆ

  ಬಾಲಿವುಡ್ ಮುಖ ಬಯಲು ಮಾಡುವೆ

  ರಾಜ್ ಕುಂದ್ರಾ ಬಂಧನದ ನಂತರ ಟ್ವೀಟ್ ಮಾಡಿದ ಕಂಗನಾ ಪರೋಕ್ಷವಾಗಿ ಶಿಲ್ಪಾ ಶೆಟ್ಟಿ ಪತಿಗೆ ಟಾಂಗ್ ಕೊಟ್ಟಿದ್ದರು. "ಇದಕ್ಕೆ ನಾನು ಚಿತ್ರರಂಗವನ್ನು ಗಟ್ಟರ್ ಎಂದು ಕರೆದಿದ್ದು. ಹೊಳೆಯುವುದೆಲ್ಲಾ ಚಿನ್ನವಲ್ಲ. ನನ್ನ ನಿರ್ಮಾಣದಲ್ಲಿ ಬರ್ತಿರುವ ಟಿಕು ವೆಡ್ಸ ಶೆರು ಸಿನಿಮಾದಲ್ಲಿ ಬಾಲಿವುಡ್ ಬಗ್ಗೆ ಬಹಿರಂಗ ಪಡಿಸುವೆ. ಇಂತ ಸೃಜನಶೀಲ ಉದ್ಯಮದಲ್ಲಿ ನಮಗೆ ಬಲವಾದ ಮೌಲ್ಯ ವ್ಯವಸ್ಥೆ ಮತ್ತು ಆತ್ಮಸಾಕ್ಷಿಯ ಅಗತ್ಯವಿದೆ" ಎಂದು ಬರೆದುಕೊಂಡಿದ್ದರು.

  English summary
  Bollywood actress Kangana Ranaut has wrapped up her new movie Dhaakad in Europe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X