»   » ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಕಂಗನಾ ಹಣೆ ಮೇಲೆ 15 ಹೊಲಿಗೆ

ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಕಂಗನಾ ಹಣೆ ಮೇಲೆ 15 ಹೊಲಿಗೆ

Posted By:
Subscribe to Filmibeat Kannada

ಸ್ವಲ್ಪದರಲ್ಲಿಯೇ ನಟಿ ಕಂಗನಾ ಅಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ತಮ್ಮ ಕಣ್ಣಿಗೆ ಬೀಳುತ್ತಿದ್ದ ಭಾರಿ ಪೆಟ್ಟಿನಿಂದ ನಟಿ ಕಂಗನಾ ತಪ್ಪಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಭಾರಿ ಗಂಡಾಂತರದಿಂದ ಬಚಾವ್ ಆಗಿರುವ ಕಂಗನಾ ಹಣೆ ಮೇಲೆ ಬರೋಬ್ಬರಿ 15 ಹೊಲಿಗೆ ಹಾಕಲಾಗಿದೆ.

'ಮಣಿಕಾರ್ನಿಕಾ - ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಂಭವಿಸಿದ ಅವಘಡದಿಂದಾಗಿ ಇಂದು ನಟಿ ಕಂಗನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಮುಂದೆ ಓದಿರಿ...

ಅಸಲಿಗೆ ಆಗಿದ್ದೇನು.?

'ಮಣಿಕಾರ್ನಿಕಾ - ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಶೂಟಿಂಗ್ ನಲ್ಲಿ ನಟಿ ಕಂಗನಾ ಪಾಲ್ಗೊಂಡಿದ್ದರು. ಕತ್ತಿವರಸೆ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ನಟ ನಿಹಾರ್ ಪಾಂಡ್ಯ ಜೊತೆ ಕಂಗನಾ ಕತ್ತಿವರಸೆ ಮಾಡಲು ಆರಂಭಿಸಿದರು. ಆಗಲೇ, ಅವಘಡ ನಡೆದಿದ್ದು.

ಹೇಗಾಯ್ತು.?

ಕತ್ತಿವರಸೆ ಮಾಡುವಾಗ ನಟಿ ಕಂಗನಾ ಟೈಮಿಂಗ್ ಮಿಸ್ ಮಾಡಿದರು. ಹೀಗಾಗಿ ನಿಹಾಲ್ ಪಾಂಡ್ಯ ರವರ ಕತ್ತಿ ಕಂಗನಾ ಹಣೆಗೆ ತಾಕಿತು. ಕತ್ತಿ ಚೂಪಾಗಿದ್ದ ಪರಿಣಾಮ ಕಂಗನಾ ಹುಬ್ಬುಗಳ ಮಧ್ಯೆ ರಕ್ತ ಚಿಮ್ಮಿತು.

ಹಣೆಗೆ 15 ಹೊಲಿಗೆ

ಕಂಗನಾ ಹಣೆಗೆ ಪೆಟ್ಟು ಬಿದ್ದಿದ್ರಿಂದಾಗಿ ತಕ್ಷಣ ಅವರನ್ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಸದ್ಯ ತೀವ್ರ ನಿಗಾ ಘಟಕದಲ್ಲಿ ಕಂಗನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಗನಾ ಹಣೆಗೆ 15 ಹೊಲಿಗೆ ಹಾಕಲಾಗಿದೆ.

ಡ್ಯೂಪ್ ಬೇಡ ಎಂದಿದ್ದರಂತೆ.!

ಕತ್ತಿವರಸೆ ಸನ್ನಿವೇಶಕ್ಕೆ ಡ್ಯೂಪ್/ಬಾಡಿ ಡಬಲ್ಲಿಂಗ್ ಬೇಡ. ಸ್ವತಃ ತಾವೇ ಕಲಿತು ಮಾಡುವುದಾಗಿ ಕಂಗನಾ ಚಿತ್ರತಂಡಕ್ಕೆ ತಿಳಿಸಿದ್ದರಂತೆ. ಅದರಂತೆ ಅನೇಕ ಬಾರಿ ಈ ಸನ್ನಿವೇಶವನ್ನ ರಿಹರ್ಸಲ್ ಮಾಡಲಾಗಿತ್ತಂತೆ. ಆದರೆ ಇಂದು ಕಂಗನಾ ಟೈಮಿಂಗ್ ಮಿಸ್ ಮಾಡಿದ್ದರಿಂದಾಗಿ ಅವಘಡ ಸಂಭವಿಸಿದೆ.

ಕಾಸ್ಮೆಟಿಕ್ ಸರ್ಜರಿ ಮಾಡಬಹುದು

ಹುಬ್ಬುಗಳ ಮಧ್ಯೆ ಕತ್ತಿ ಇರಿತ ಸ್ವಲ್ಪ ಆಳವಾಗಿ ಇರುವ ಕಾರಣ 15 ಹೊಲಿಗೆ ಹಾಕಲಾಗಿದೆ. ಸ್ವಲ್ಪ ದಿನ ಕಳೆದ ಬಳಿಕ ಕಾಸ್ಮೆಟಿಕ್ ಸರ್ಜರಿ ಮಾಡಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

English summary
Bollywood Actress Kangana Ranaut injured on the sets of 'Manikarnika' while she was shooting sword fight sequence.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada