»   » ಆಕ್ಷನ್ ಮಾಡಲು ಹೋಗಿದ್ದ ನಟಿ ಕಂಗನಾ ಕಾಲಿಗೆ ಗಾಯ

ಆಕ್ಷನ್ ಮಾಡಲು ಹೋಗಿದ್ದ ನಟಿ ಕಂಗನಾ ಕಾಲಿಗೆ ಗಾಯ

Posted By:
Subscribe to Filmibeat Kannada

ಬಾಲಿವುಡ್ ನಟಿ ಕ್ವೀನ್ ಕಂಗನಾ ಶೂಟಿಂಗ್ ವೇಳೆ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಬಾಲಿವುಡ್ ನ ಬಹುದೊಡ್ಡ ಸಿನಿಮಾದ ಚಿತ್ರೀಕರಣ ಮಾಡುತ್ತಿರುವ ಕಂಗನಾ ಎರಡನೇ ಬಾರಿ ಶೂಟಿಂಗ್ ಸೆಟ್ ನಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.

ಹೌದು, 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಲ್ಲಿ ನಟಿಸುತ್ತಿರುವ ಕಂಗನಾ, ಆಕ್ಷನ್ ದೃಶ್ಯದ ವೇಳೆ ಗಾಯಗೊಂಡಿದ್ದಾರೆ. ಜೋಧಪುರ್ ಕೋಟೆಯಲ್ಲಿ ಫೈಟಿಂಗ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಂಗನಾ ಕಾಲಿಗೆ ಪೆಟ್ಟಾಗಿದೆ.

ಕಂಗನಾ-ಹೃತಿಕ್ ಜಗಳದಿಂದ ಬಾಲಿವುಡ್ ನಟನ ಅಫೇರ್ ಸುದ್ದಿ ಬಹಿರಂಗ.!

Kangana Ranaut injured while shooting of Manikarnika

ಕತ್ತಿವರಸೆ ಚಿತ್ರೀಕರಣದ ವೇಳೆ ಕಂಗನಾ ಗಾಯಮಾಡಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿಶ್ರಾಂತಿಗಾಗಿ ಕಂಗನಾ ಮುಂಬೈಗೆ ತೆರಳಿದ್ದಾರೆಂದು ಚಿತ್ರ ತಂಡ ತಿಳಿಸಿದೆ.

ಇದಕ್ಕು ಮುಂಚೆ ಹೈದರಾಬಾದ್‌ ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣವಾಗುತ್ತಿದ್ದ ಸಂದರ್ಭದಲ್ಲೂ ಕೂಡ ಕಂಗನಾ ತೀವ್ರವಾಗಿ ಗಾಯಗೊಂಡಿದ್ದರಂತೆ.

ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಕಂಗನಾ ಹಣೆ ಮೇಲೆ 15 ಹೊಲಿಗೆ

Kangana Ranaut injured while shooting of Manikarnika

ಅಂದ್ಹಾಗೆ, ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕೆ.ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಮಣಿಕರ್ಣಿಕಾ, ಝಾನ್ಸಿ ರಾಣಿಯ ಕಥೆಯಾಗಿದ್ದು, ಈ ಚಿತ್ರಕ್ಕಾಗಿ ಕಂಗನಾ ಸಾಕಷ್ಟು ತಯಾರಿ ನಡೆಸಿದ್ದಾರೆ. ಕತ್ತಿ ವರಸೆ ತರಬೇತಿ ಕೂಡ ಪಡೆದಿದ್ದಾರೆ.

ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್

English summary
Kangana Ranaut injured while shooting of Manikarnika in Jodhpur, rushed to hospital. ಬಾಲಿವುಡ್ ನಟಿ ಕಂಗನಾ, 'ಮಣಿಕರ್ಣಿಕಾ' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada