For Quick Alerts
  ALLOW NOTIFICATIONS  
  For Daily Alerts

  ಕಂಗನಾ ಇನ್ಸ್ಟಾಗ್ರಾಂ ಖಾತೆ ಹ್ಯಾಕ್: ತಾಲಿಬಾನ್ ಪೋಸ್ಟ್ ಡಿಲೀಟ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯ ನಿಷ್ಕ್ರಿಯವಾದ ಮೇಲೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಅನೇಕ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನಟಿ ಹಲವು ರೀತಿಯಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ಇದೀಗ, ಕಂಗನಾ ರಣಾವತ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎಂಬ ವಿಚಾರ ಹೊರಬಿದ್ದಿದೆ.

  ತಮ್ಮ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎಂದು ಖುದ್ದು ಕಂಗನಾ ಪೋಸ್ಟ್ ಹಾಕಿದ್ದಾರೆ. ಕಳೆದ ರಾತ್ರಿ ಚೀನಾದಲ್ಲಿ ನನ್ನ ಖಾತೆಯ ಲಾಗ್ ಇನ್ ಆಗಿ ಬಳಕೆ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

  ನಟಿ ಖುಷ್ಬೂ ಟ್ವಿಟ್ಟರ್ ಖಾತೆ ಹ್ಯಾಕ್: ಯಾರೆಲ್ಲಾ ಖಾತೆಗಳು ಹ್ಯಾಕ್ ಆಗಿತ್ತು?ನಟಿ ಖುಷ್ಬೂ ಟ್ವಿಟ್ಟರ್ ಖಾತೆ ಹ್ಯಾಕ್: ಯಾರೆಲ್ಲಾ ಖಾತೆಗಳು ಹ್ಯಾಕ್ ಆಗಿತ್ತು?

  ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ನಂತರ ಅಲ್ಲಿ ನಡೆಯುತ್ತಿರುವ ಹಿಂಸೆ, ಕ್ರೌರ್ಯಗಳನ್ನು ಖಂಡಿಸಿ ಕಂಗನಾ ಪೋಸ್ಟ್‌ಗಳನ್ನು ಹಾಕಿದ್ದರು. ಅದೆಲ್ಲವೂ ಡಿಲೀಟ್ ಆಗಿದೆ ಎಂದು ಕಂಗನಾ ತಿಳಿಸಿದ್ದಾರೆ. ಈ ಬಗ್ಗೆ ಪೋಸ್ಟ್‌ನಲ್ಲಿ ಆಕ್ರೋಶ ಹೊರಹಾಕಿರುವ ಕಂಗನಾ 'ಇದು ಅಂತಾರಾಷ್ಟ್ರೀಯ ಪಿತೂರಿ' ಎಂದು ಟೀಕಿಸಿದ್ದಾರೆ. ಮುಂದೆ ಓದಿ...

  ಚೀನಾದಲ್ಲಿ ಇನ್ಸ್ಟಾಗ್ರಾಂ ಖಾತೆ ಲಾಗ್ ಇನ್ ಆಗಿದೆ

  ಚೀನಾದಲ್ಲಿ ಇನ್ಸ್ಟಾಗ್ರಾಂ ಖಾತೆ ಲಾಗ್ ಇನ್ ಆಗಿದೆ

  ''ಕಳೆದ ರಾತ್ರಿ ಯಾರೋ ಚೀನಾದಲ್ಲಿ ನನ್ನ ಇನ್ಸ್ಟಾಗ್ರಾಂ ಖಾತೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ನನಗೆ ಅಲರ್ಟ್ ಬಂತು. ಆಮೇಲೆ ಇದ್ದಕ್ಕಿದ್ದಂತೆ ಮೆಸೆಜ್ ಮಾಯಾವಾಯಿತು. ಬೆಳಗ್ಗೆ ನೋಡಿದ್ರೆ ತಾಲಿಬಾನ್ ಹಿಂಸಾಚಾರದ ಕುರಿತು ನಾನು ಪೋಸ್ಟ್ ಮಾಡಿದ್ದ ಎಲ್ಲವೂ ಡಿಲೀಟ್ ಆಗಿದೆ. ನಂತರ ಇನ್ಸ್ಟಾಗ್ರಾಂಗೆ ಕರೆ ಮಾಡಿದ ಮೇಲೆ ನನ್ನ ಖಾತೆ ನಿಷ್ಕ್ರಿಯಗೊಂಡಿದೆ. ನಾನು ಪೋಸ್ಟ್ ಹಾಕಲು ಪ್ರಯತ್ನಿಸುತ್ತಿದ್ದರೂ ಅದು ಮತ್ತೆ ಮತ್ತೆ ಲಾಗ್ ಔಟ್ ಆಗುತ್ತಿದೆ. ಆಮೇಲೆ ನನ್ನ ಸಹೋದರಿ ಮೊಬೈಲ್ ತೆಗೆದುಕೊಂಡು ನನ್ನ ಖಾತೆಯಲ್ಲಿ ಈ ಸ್ಟೋರಿ ಹಾಕಿದೆ. ನನ್ನ ತಂಗಿಯ ಮೊಬೈಲ್‌ನಲ್ಲಿ ನಾನು ಇನ್ಸ್ಟಾಗ್ರಾಂ ಬಳಸುತ್ತೇನೆ. ಇದು ಬಹುದೊಡ್ಡ ಅಂತಾರಾಷ್ಟ್ರೀಯ ಪಿತೂರಿ'' ಎಂದಿದ್ದಾರೆ.

  ವಿಶ್ವಕ್ಕೆ ಚೀನಾ ಕೊರೊನಾ ಹಂಚಿದೆ

  ವಿಶ್ವಕ್ಕೆ ಚೀನಾ ಕೊರೊನಾ ಹಂಚಿದೆ

  ತಾಲಿಬಾನ್ ಮತ್ತು ಅಫ್ಘಾನಿಸ್ತಾನರ ನಡುವಿನ ಉದ್ವಿಗ್ನತೆಯ ಬಗ್ಗೆಯೂ ಕಂಗನಾ ಪೋಸ್ಟ್ ಹಾಕಿ, "ತಾಲಿಬಾನಿಗಳು ಮತ್ತು ಅಫ್ಘಾನಿಸ್ತಾನಿಯರ ನಡುವಿನ ಸಂಘರ್ಷವು ದಶಕಗಳಷ್ಟು ಹಳೆಯದು. ಚೀನಾ ಪ್ರಪಂಚದ ಮೇಲೆ ಕೊರೊನಾ ವೈರಸ್ ಹರಿಯ ಬಿಟ್ಟು ನಂತರ, ಈಗ ಅಮೆರಿಕದ ರಾಜಕೀಯ ನೋಡಲಾಗುತ್ತಿಲ್ಲ'' ಎಂದು ಟೀಕಿಸಿದ್ದಾರೆ.

  ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಕಂಗನಾ ರಣಾವತ್ ಡೇಟಿಂಗ್?ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಕಂಗನಾ ರಣಾವತ್ ಡೇಟಿಂಗ್?

  ಬಾಯ್‌ಫ್ರೆಂಡ್ ಬಗ್ಗೆ ಅಪಪ್ರಚಾರ

  ಬಾಯ್‌ಫ್ರೆಂಡ್ ಬಗ್ಗೆ ಅಪಪ್ರಚಾರ

  ಎರಡು ದಿನಗಳಿಂದ ಕಂಗನಾ ರಣಾವತ್ ಬಾಯ್‌ಫ್ರೆಂಡ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್, ''ಕಂಗನಾ ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಇದು ಲವ್ ಜಿಹಾದ್ ಇರಬಹುದೇ?'' ಎಂದು ಫೋಟೋ ಸಮೇತ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದರು. ಅಷ್ಟರಲ್ಲೇ ಈ ಪೋಸ್ಟ್ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಕಂಗನಾ ಪರ ವಕೀಲರು, ''ಈ ಫೋಟೋದಲ್ಲಿರುವುದು ಕಂಗನಾ ಅವರ ಮ್ಯಾನೇಜರ್ ರಿಜ್ವಾನ್ ಸಯ್ಯದ್, ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ವೇಳೆ ಕ್ಲಿಕ್ಕಿಸಿರುವ ಫೋಟೋಗಳು, ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ'' ಎಂದಿದ್ದರು.

  ಕಂಗನಾ ರಣಾವತ್ ಸಿನಿಮಾಗಳು

  ಕಂಗನಾ ರಣಾವತ್ ಸಿನಿಮಾಗಳು

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಬಯೋಪಿಕ್ 'ತಲೈವಿ' ರಿಲೀಸ್‌ಗಾಗಿ ಕಾಯುತ್ತಿದೆ. ಇತ್ತೀಚಿಗಷ್ಟೆ ಧಾಕಡ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಅಧರಿಸಿ ಸಿನಿಮಾ ಮಾಡಲು ಕಂಗನಾ ಸಜ್ಜಾಗಿದ್ದು, ಈ ಚಿತ್ರವನ್ನು ಖುದ್ದು ಅವರೇ ಡೈರೆಕ್ಟ್ ಮಾಡಲಿದ್ದಾರೆ. ಇದಷ್ಟೇ ಅಲ್ಲದೇ ಮತ್ತಷ್ಟು ಚಿತ್ರಗಳು ಕಂಗನಾ ಬಳಿ ಇದೆ. 'ಮಣಿಕರ್ಣಿಕಾ' ಸಿನಿಮಾ ಹಿಟ್ ಆದ್ಮೇಲೆ ಭಾಗ 2 ಎರಡು ಮಾಡುವುದಾಗಿ ಘೋಷಿಸಿದ್ದಾರೆ. 'ತೇಜಸ್' ಎನ್ನುವ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. 'ದಿ ಲೆಜೆಂಡ್ ಆಫ್ ದಿಡ್ಡಾ' ಪ್ರಾಜೆಕ್ಟ್ ಸಹ ಕಂಗನಾ ಕೈಯಲ್ಲಿದೆ.

  English summary
  Bollywood actress Kangana Ranaut's Instagram Account hacked in china.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X