»   » ಟೀಸರ್: 'ಕ್ವೀನ್' ಕಂಗನಾಳ ಹೊಸ ಅವತಾರ 'ಸಿಮ್ರಾನ್'

ಟೀಸರ್: 'ಕ್ವೀನ್' ಕಂಗನಾಳ ಹೊಸ ಅವತಾರ 'ಸಿಮ್ರಾನ್'

Posted By:
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಫೆಬ್ರವರಿಯಲ್ಲಿ ತೆರೆಕಂಡ 'ರಂಗೂನ್' ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ನೆಲಕಚ್ಚಿತು. ಆದ್ರೆ 'ಕ್ವೀನ್' ಕಂಗನಾ ಈಗ ಮತ್ತೆ ಎಲ್ಲರ ಹೃದಯ ಕದಿಯುವ ಮುದ್ದಾದ ನೋಟದೊಂದಿಗೆ ಹಿಂದಿರಿಗಿದ್ದಾರೆ.[ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್]

ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿ ವಿಜೇತೆಯಾದ ಕಂಗನಾ ರನೌತ್ 'ಸಿಮ್ರಾನ್' ಹೆಸರಿನ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಕಂಗನಾ 'ಕ್ವೀನ್' ಚಿತ್ರದಲ್ಲಿನ ಅಭಿನಯಕ್ಕಿಂತ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಚಿತ್ರತಂಡ ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

Kangana Ranaut Starrer 'Simran' teaser released

'ಸಿಮ್ರಾನ್' ಚಿತ್ರದ ಟೀಸರ್ ನಲ್ಲಿನ ಕಂಗನಾ ಅಭಿನಯ, ಅವರು ಕಾಣಿಸಿಕೊಂಡಿರುವ ವಿವಿಧ ಗೆಟಪ್ ಗಳನ್ನು ನೋಡಿದರೆ ಎಂತಹವರಿಗೂ ನಗು ಬರುತ್ತದೆ. ಅಲ್ಲದೇ ಅವರ ಹೊಸ ಚಿತ್ರದ ಬಗ್ಗೆ ಹೆಚ್ಚು ಭರವಸೆ ಮೂಡುತ್ತದೆ. ಕಾರಣ ಅವರು ಬಣ್ಣ ಹಚ್ಚಿರುವ ಎಲ್ಲಾ ಗೆಟಪ್ ಗಳಲ್ಲಿಯೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.[ಕಂಗನಾ ರ 'ಕ್ವೀನ್' ಕನ್ನಡಕ್ಕೆ ರಿಮೇಕ್]

ಅಂದಹಾಗೆ ಕಂಗನಾ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿರುವ 'ಸಿಮ್ರಾನ್' ಚಿತ್ರಕ್ಕೆ ಹನ್ಸಲ್ ಮೆಹ್ರಾ ಆಕ್ಷನ್ ಕಟ್ ಹೇಳುತ್ತಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. 'ಸಿಮ್ರಾನ್' ಚಿತ್ರ ಸೆಪ್ಟೆಂಬರ್ 15 ರಂದು ತೆರೆಕಾಣಲಿದೆ. ಕಂಗನಾ ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಬೋಲ್ಡ್ ಆಗಿ ನಟಿಸಿರುವ 'ಸಿಮ್ರಾನ್' ಟೀಸರ್ ನೋಡಲು ಕ್ಲಿಕ್ ಮಾಡಿ.

English summary
The first teaser of Kangana Ranaut's Simran is out and strangely her cute antics might remind you of Queen and Tanu Weds Manu. Here you can watch 'Simran' teaser

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada