For Quick Alerts
  ALLOW NOTIFICATIONS  
  For Daily Alerts

  ಕಂಗನಾಗೆ ಮೂರನೇ ಬಾರಿ ಸಮನ್ಸ್ ನೀಡಿದ ಮುಂಬೈ ಪೊಲೀಸರು

  |

  ಕೋಮು ಉದ್ವಿಗ್ನತೆಯನ್ನು ಹರಡುವ ಉದ್ದೇಶದಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ.

  ನವೆಂಬರ್ 23 ರಂದು ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಬುಧವಾರ ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯವಾಗಿ ಬಾಂದ್ರಾ ಪೊಲೀಸರ ಮುಂದೆ ಹಾಜರಾಗುವಂತೆ ಮೂರನೇ ಸಲ ಹೇಳಲಾಗುತ್ತಿದೆ. ಮುಂದೆ ಓದಿ...

  ಮೂರನೇ ನೋಟಿಸ್

  ಮೂರನೇ ನೋಟಿಸ್

  ಸೋಶಿಯಲ್ ಮೀಡಿಯಾದ ಮೂಲಕ ದ್ವೇಷ ಹರಡಿಸುವಂತಹ ಟ್ವೀಟ್ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಕಂಗನಾ ಮತ್ತು ಸಹೋದರಿ ವಿರುದ್ಧ ಕೇಸ್ ದಾಖಲಾಗಿದ್ದು, ಈ ಹಿಂದೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಎರಡು ಸಲವೂ ಕಂಗನಾ ವಿಚಾರಣೆಗೆ ಹಾಜರಾಗಿಲ್ಲ. ಈ ಹಿಂದೆ ಅಕ್ಟೋಬರ್ 21 ಹಾಗೂ ನವೆಂಬರ್ 3 ರಂದು ಸಮನ್ಸ್ ನೀಡಿದ್ದರು. ನವೆಂಬರ್ 15ರ ನಂತರ ನಾನು ಬರಲಿದ್ದೇನೆ ಎಂದು ಹೇಳಿದ್ದರು.

  ಕಂಗನಾ ಮತ್ತು ಸಹೋದರಿಗೆ ಮತ್ತೊಂದು ಕಂಟಕ: ಮತ್ತೊಂದು ತನಿಖೆಗೆ ಕೋರ್ಟ್ ಆದೇಶಕಂಗನಾ ಮತ್ತು ಸಹೋದರಿಗೆ ಮತ್ತೊಂದು ಕಂಟಕ: ಮತ್ತೊಂದು ತನಿಖೆಗೆ ಕೋರ್ಟ್ ಆದೇಶ

  ಎಫ್‌ ಐ ಆರ್ ದಾಖಲಿಸಲು ಕೋರ್ಟ್ ಸೂಚನೆ

  ಎಫ್‌ ಐ ಆರ್ ದಾಖಲಿಸಲು ಕೋರ್ಟ್ ಸೂಚನೆ

  ವಕೀಲರೊಬ್ಬರು ಕಂಗನಾ ರಣೌತ್ ಹಾಗೂ ರಂಗೋಲಿ ಅವರ ಟ್ವೀಟ್‌ಗಳು ದ್ವೇಷಗಳನ್ನು ಹರಡುತ್ತಿರುವ ಬಗ್ಗೆ, ಉದ್ರೇಕಕಾರಿ ಟ್ವೀಟ್‌ಗಳನ್ನು ಮಾಡುತ್ತಿರುವ ಬಗ್ಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

  ಕಂಗನಾ ರಣೌತ್‌ಗೆ ಮುಂಬೈ ಪೊಲೀಸರಿಂದ ಸಮನ್ಸ್: ಶುರುವಾಯ್ತು ಆತಂಕಕಂಗನಾ ರಣೌತ್‌ಗೆ ಮುಂಬೈ ಪೊಲೀಸರಿಂದ ಸಮನ್ಸ್: ಶುರುವಾಯ್ತು ಆತಂಕ

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada
  ಕರ್ನಾಟಕದಲ್ಲೂ ಎಫ್ ಐ ಆರ್?

  ಕರ್ನಾಟಕದಲ್ಲೂ ಎಫ್ ಐ ಆರ್?

  ಈ ಕಡೆ ಕರ್ನಾಟಕದಲ್ಲೂ ನಟಿ ಕಂಗನಾ ರಣಾವತ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ರೈತರನ್ನು ಬಯೋತ್ಪಾದಕರೆಂದು ಹೇಳಿರುವುದನ್ನು ಪ್ರಶ್ನಿಸಿ ವಕೀಲರೊಬ್ಬರು ತುಮಕೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಎಫ್ ಐ ಆರ್ ದಾಖಲಿಸುವಂತೆ ಸೂಚಿಸಿತ್ತು. ಈ ಪ್ರಕರಣದಲ್ಲಿ ನಟಿ ಕಂಗನಾ ಸ್ಪಷ್ಟನೆ ನೀಡಬೇಕಿದೆ.

  English summary
  Objectionable comments: Actress Kangana Ranaut and her sister Rangoli Chandel summoned by Mumbai police again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X