ಎರಡು ಕೋಟಿ ಕೇಳಿದ ಕಂಗನಾ ವಿರುದ್ಧ ಹರಿಹಾಯ್ದ ಬಿಎಂಸಿ

ಅಕ್ರಮ ನಿರ್ಮಾಣ ಎಂಬ ಆರೋಪದ ಮೇಲೆ ಕಂಗನಾ ರಣೌತ್‌ ರ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಯು ಒಡೆದು ಹಾಕಿದೆ. ಈ ಘಟನೆ ಸಾಕಷ್ಟು ಬಿಸಿ-ಬಿಸಿ ಚರ್ಚೆ ಹುಟ್ಟುಹಾಕಿದೆ.

ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ನೊಟೀಸ್ ನೀಡಿದ್ದ ಮುಂಬೈ ಮಹಾನಗರ ಪಾಲಿಕೆ ಕಂಗನಾ ಅವರ ಕಚೇರಿ ಕಟ್ಟಡವನ್ನು ಒಡೆದುಹಾಕಿತ್ತು. ಇದನ್ನು ಕಂಗನಾ ಸೇರಿದಂತೆ ಹಲವರು ಕಟುವಾಗಿ ಖಂಡಿಸಿದ್ದರು.

ತಮ್ಮ ಕಟ್ಟಡವನ್ನು ಒಡೆದಿದ್ದಕ್ಕೆ ವಿರುದ್ಧವಾಗಿ ಬಿಎಂಸಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಂಗನಾ, ಬಿಎಂಸಿಯು ತಮಗೆ ಎರಡು ಕೋಟಿ ನಷ್ಟ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಗೆ ನ್ಯಾಯಾಲಯಕ್ಕೆ ಬಿಎಂಸಿಯು ಉತ್ತರ ನೀಡಿದೆ.

ಎರಡು ಕೋಟಿ ಬೇಡಿಕೆ ನ್ಯಾಯಾಂಗ ನಿಂದನೆ: ಬಿಎಂಸಿ

ಎರಡು ಕೋಟಿ ಬೇಡಿಕೆ ನ್ಯಾಯಾಂಗ ನಿಂದನೆ: ಬಿಎಂಸಿ

ನ್ಯಾಯಾಲಯಕ್ಕೆ ಉತ್ತರಿಸಿರುವ ಬಿಎಂಸಿ, 'ಕಂಗನಾ ಅವರ ಎರಡು ಕೋಟಿ ಬೇಡಿಕೆ, ಕಾನೂನು ಪ್ರಕ್ರಿಯೆಯ ನಿಂದನೆ ಆಗಿದೆ. ಕಾನೂನು, ನಿಯಮ ಪಾಲನೆ ಮಾಡಿದ್ದಕ್ಕೆ ದಂಡ ಪಾವತಿಸಲು ಕೇಳುವುದು ಕಾನೂನು ನಿಂದನೆ' ಎಂದಿದ್ದಾರೆ.

ಕಂಗನಾ ಗೆ ದಂಡ ಹಾಕಿ: ಬಿಎಂಸಿ ಮನವಿ

ಕಂಗನಾ ಗೆ ದಂಡ ಹಾಕಿ: ಬಿಎಂಸಿ ಮನವಿ

ಅಷ್ಟೇ ಅಲ್ಲದೆ, ಕಂಗನಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸಿ, ಇಂಥಹಾ ಅರ್ಜಿ ಸಲ್ಲಿಸಿ ಬಾಂಬೆ ಹೈಕೋರ್ಟ್‌ನ ಸಮಯ ವ್ಯರ್ಥ ಮಾಡಿದ್ದಕ್ಕೆ ಕಂಗನಾ ಮೇಲೆ ದಂಡ ಹೇರಬೇಕು ಎಂದು ಬಿಎಂಸಿ ಮನವಿ ಮಾಡಿದೆ.

ಸೆಪ್ಟೆಂಬರ್ 9 ರಂದು ಕಚೇರಿಯ ಒಂದು ಭಾಗ ಒಡೆಯಲಾಯಿತು

ಸೆಪ್ಟೆಂಬರ್ 9 ರಂದು ಕಚೇರಿಯ ಒಂದು ಭಾಗ ಒಡೆಯಲಾಯಿತು

ಸೆಪ್ಟೆಂಬರ್ 9 ರಂದು ಬಿಎಂಸಿಯು ಕಂಗನಾರ ಕಚೇರಿಯ ಒಂದು ಭಾಗವನ್ನು ಒಡೆದುಹಾಕಿತ್ತು. ಅದೇ ದಿನ ನ್ಯಾಯಾಲಯದಿಂದ ತಡೆ ಆಜ್ಞೆಯನ್ನು ಕಂಗನಾ ತಮ್ಮ ವಕೀಲರ ಮುಖಾಂತರ ತಂದಿದ್ದರು. ಹಾಗಾಗಿ ಕಚೇರಿ ಒಡೆಯುವ ಕಾರ್ಯವನ್ನು ಬಿಎಂಸಿ ಅರ್ಧಕ್ಕೆ ಕೈಬಿಟ್ಟಿತು.

Recommended Video

ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ

ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ

ಕಂಗನಾ ರಣೌತ್, ಮುಂಬೈ ಅನ್ನು 'ಪಾಕ್ ಆಕ್ರಮಿತ ಕಾಶ್ಮೀರ' ಎಂದಿದ್ದರು. ಇದಕ್ಕೆ ಅಧಿಕಾರದಲ್ಲಿರುವ ಶಿವಸೇನಾ ಪಕ್ಷದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಂಗನಾ ಸಹ ಶಿವಸೇನೆ ಹಿರಿಯ ಮುಖಂಡರೊಬ್ಬರಿಗೆ ಸವಾಲು ಎಸೆದಿದ್ದರು. ಈ ಘಟನಾವಳಿಗಳ ನಂತರ ಕಂಗನಾ ರ ಕಚೇರಿಯನ್ನು ಬಿಎಂಸಿ ಒಡೆಯಿತು.

More from Filmibeat

English summary
BMC said to Bombay high court that Kangana Ranaut's 2 crore demand is abuse of law. Court must fine her for wasting court's time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X