For Quick Alerts
  ALLOW NOTIFICATIONS  
  For Daily Alerts

  ರಾಜ್ಯೋತ್ಸವದಂದೇ 'ಕಾಂತಾರ' ಹೆಸರಲ್ಲಿ ಮತ್ತೊಂದು ದಾಖಲೆ: 'ಕೆಜಿಎಫ್' ರೆಕಾರ್ಡ್ ಬ್ರೇಕ್!

  |

  ಕನ್ನಡಿಗರಿಗೆ ರಾಜ್ಯೋತ್ಸವದ ಸಂಭ್ರಮ. ಅದೇ 'ಕಾಂತಾರ' ಸಿನಿಮಾಗೆ ದಾಖಲೆ ಮುರಿದ ಖುಷಿ. ಎರಡೂ ಒಟ್ಟೊಟ್ಟಿಗೆ ಕನ್ನಡಿಗರ ಪಾಲಾಗಿದೆ. ಕನ್ನಡದ ಕೀರ್ತಿ ಪತಾಕೆಯನ್ನು ದೇಶದ ಉದ್ದಗಲ್ಲೂ ಹಬ್ಬಿಸುವಲ್ಲಿ ಕನ್ನಡ ಸಿನಿಮಾಗಳು ಮಹತ್ವ ಪಾತ್ರ ವಹಿಸಿವೆ.

  ಅದರಲ್ಲೂ ಈ ವರ್ಷ ರಿಲೀಸ್ ಆದ ಕನ್ನಡ ಸಿನಿಮಾಗಳು ಮಹತ್ತರ ಸಾಧನೆಯನ್ನು ಮಾಡಿವೆ. 'ಕೆಜಿಎಫ್ 2', 'ಜೇಮ್ಸ್', 'ವಿಕ್ರಾಂತ್ ರೋಣ', '777 ಚಾರ್ಲಿ' ಈಗ 'ಕಾಂತಾರ' ಪರಭಾಷೆಯ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ.

  ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!

  'ಕೆಜಿಎಫ್ ಚಾಪ್ಟರ್ 1' ಶುರುವಾದ ಕನ್ನಡ ಚಿತ್ರರಂಗ ಆರ್ಭಟ 'ಕಾಂತಾರ'ವರೆಗೂ ಮುಂದುವರೆದಿದೆ. ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಾ ಮುಂದುವರೆಯುತ್ತಿರೋ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್' ದಾಖಲೆಯನ್ನು ಹಿಂದಿಕ್ಕಿದೆ.

  ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ದರ್ಬಾರ್

  ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ದರ್ಬಾರ್

  'ಕಾಂತಾರ' ಸಿನಿಮಾವನ್ನು ಹಿಂದಿ ಡಬ್ ಮಾಡಿ ರಿಲೀಸ್ ಮಾಡಿದಾಗ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಮೊದಲ ದಿನ ಸಿನಿಮಾ ಗಳಿಕೆ ಆಶಾದಾಯಕವಾಗಿ ಇರಲಿಲ್ಲ. ಆದ್ರೀಗ ಎರಡನೇ ವಾರಕ್ಕೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪ್ರತಿ ದಿನ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಒಂದೊಂದೇ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. 'ಕಾಂತಾರ' ಸಿನಿಮಾದ ಕ್ರೇಜ್ ನೋಡಿ ಬಾಲಿವುಡ್ ಮಂದಿನೇ ದಂಗಾಗಿ ಹೋಗಿದ್ದಾರೆ. ಈ ಕನ್ನಡ ಸಿನಿಮಾ ಮುಂದೆ ಬಾಲಿವುಡ್ ಸಿನಿಮಾಗಳೂ ಕೂಡ ನಿಲ್ಲುತ್ತಿಲ್ಲ.

  'ಕೆಜಿಎಫ್' ಸೈಡ್ ಹಾಕಿದ 'ಕಾಂತಾರ'

  'ಕೆಜಿಎಫ್' ಸೈಡ್ ಹಾಕಿದ 'ಕಾಂತಾರ'

  ಬಾಲಿವುಡ್‌ನಲ್ಲಿ ಕನ್ನಡದ ಕಹಳೆ ಊದಿದ ಸಿನಿಮಾ 'ಕೆಜಿಎಫ್ ಚಾಪ್ಟರ್ 1'. ಇಲ್ಲಿಂದ ಕನ್ನಡ ಸಿನಿಮಾಗಳ ಆರ್ಭಟ ಇನ್ನೂ ಮುಂದುವರೆದಿದೆ. ಬಾಲಿವುಡ್ ಹಂಗಾಮದ ವರದಿಯ ಪ್ರಕಾರ, ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಲೈಫ್‌ ಟೈಮ್ ಕಲೆಕ್ಷನ್ 44.09 ಕೋಟಿ ರೂಪಾಯಿ. ಈ ಗಳಿಕೆಯನ್ನು ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಮುರಿದು ಹಾಕಿದೆ. ಇದೂವರೆಗೂ 'ಕಾಂತಾರ' ಹಿಂದಿ ಬೆಲ್ಟ್‌ಗಳಲ್ಲಿ ಸುಮಾರು 45.15 ಕೋಟಿ ಕಲೆ ಹಾಕಿದೆ. ಈ ಮೂಲಕ 'ಕೆಜಿಎಫ್ ಚಾಪ್ಟರ್ 1' ಸಿನಿಮಾದ ದಾಖಲೆಯನ್ನು ಉಡೀಸ್ ಮಾಡಿದೆ. ಈ ವಾರದೊಳಗೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' 50 ಕೋಟಿ ಲೂಟಿ ಮಾಡಲಿದೆ.

  ಮಂಕಾದ ಬಾಲಿವುಡ್ ಸಿನಿಮಾಗಳು

  ಮಂಕಾದ ಬಾಲಿವುಡ್ ಸಿನಿಮಾಗಳು

  ರಿಷಬ್ ಶೆಟ್ಟಿ 'ಕಾಂತಾರ' ಅಬ್ಬರಕ್ಕೆ ಬಾಲಿವುಡ್‌ನ ಸೂಪರ್‌ಸ್ಟಾರ್ ಸಿನಿಮಾಗಳೇ ಮಂಕಾಗಿವೆ. ಕಂಟೆಂಟ್ ಇರುವ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಆಯುಷ್ಮಾನ್ ಖುರಾನಾ ಸಿನಿಮಾ 'ಡಾಕ್ಟರ್ ಜಿ' ಕೂಡ ಸೈಡಿಗೆ ಸರಿದು ಬಿಟ್ಟಿದೆ. ಹಾಗೇ ಪರಿಣಿತಿ ಚೋಪ್ರಾ ಅಭಿನಯದ ಸಿನಿಮಾ ಕೋಡ್ ನೇಮ್ ಎಲ್ಲಿ ಹೋಯ್ತು ಅನ್ನೋದೇ ಗೊತ್ತಾಗಿಲ್ಲ. ಈಗ ಬೆಳಕಿನ ಹಬ್ಬಕ್ಕೆ ರಿಲೀಸ್ ಆಗಿದ್ದ, 'ರಾಮ್ ಸೇತು' ಹಾಗೂ 'ಥ್ಯಾಂಕ್ ಗಾಡ್' ಕೂಡ ಕಲೆಕ್ಷನ್ ವಿಷಯದಲ್ಲಿ ಹಿಂದೆ ಬಿದ್ದಿದೆ.

  300 ಕೋಟಿ ಕ್ಲಬ್ ಸೇರುವುದ್ಯಾವಾಗ?

  300 ಕೋಟಿ ಕ್ಲಬ್ ಸೇರುವುದ್ಯಾವಾಗ?

  ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ'ಗೆ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ರಾಜ್ಯ, ದೇಶ ಅಷ್ಟೇ ಅಲ್ಲ. ವಿದೇಶದಲ್ಲಿಯೂ 'ಕಾಂತಾರ' ಸಿನಿಮಾಗೆ ಭರ್ಜರಿ ಗಳಿಕೆ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ 'ಕಾಂತಾರ' ಸಿನಿಮಾ 300 ಕೋಟಿ ಕ್ಲಬ್ ಸೇರಲಿದೆ ಅನ್ನೋ ಲೆಕ್ಕಾಚಾರ ಹಾಕಿದ್ದಾರೆ. ಇಲ್ಲಿವರೆಗೂ ಸುಮಾರು 289 ಕೋಟಿ ರೂಪಾಯಿ. ಗಳಿಕೆ ಕಂಡಿದ್ದು, ಈ ವಾರದೊಳಗೆ 300 ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

  ಹಾಲಿವುಡ್ ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದ 'ಕಾಂತಾರ': 16ನೇ ದಿನದ ಕಲೆಕ್ಷನ್ ಎಷ್ಟು?ಹಾಲಿವುಡ್ ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದ 'ಕಾಂತಾರ': 16ನೇ ದಿನದ ಕಲೆಕ್ಷನ್ ಎಷ್ಟು?

  English summary
  Kantara Hindi Best KGF 1 Hindi Lifetime Box Office Sets New Record, Know More.
  Tuesday, November 1, 2022, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X