For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ 2 ಬಿಡುಗಡೆ ದಿನಾಂಕ ಬಹಿರಂಗ!

  By ಜೇಮ್ಸ್ ಮಾರ್ಟಿನ್
  |

  ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರು ಬಹಿರಂಗಪಡಿಸಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಆಗಸ್ಟ್ 28, 2017 ರಂದು ಚಿತ್ರ ತೆರೆಗೆ ಬರಲಿದೆ ಎಂದಿದ್ದಾರೆ.

  ಅಲ್ಲಿಗೆ 'ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ? ' ಎಂಬ ಬಹುನಿರೀಕ್ಷಿತ ಪ್ರಶ್ನೆಗೆ ಉತ್ತರ ಕಾಣುವ ದಿನಾಂಕ ಪ್ರೇಕ್ಷಕರಿಗೆ ಸಿಕ್ಕಿದ್ದಂತಾಗಿದೆ. ಈ ಮುಂಚೆ ಆಗಸ್ಟ್ 14 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿತ್ತು. ಬಹುಶಃ ಮೊದಲು ತೆಲುಗು ವರ್ಷನ್ ರಿಲೀಸ್ ಮಾಡಿ ಹಿಂದಿ ವರ್ಷನ್ ಆಗಸ್ಟ್ 28ಕ್ಕೆ ತೆರೆಗೆ ತರಬಹುದು ಎಂಬ ಸುದ್ದಿ ಇದೆ.[ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ !]

  ಧರ್ಮ ಹಾಗೂ ಅರ್ಕ ಪ್ರೊಡಕ್ಷನ್ ನಿರ್ಮಾಣದ ಈ ಐತಿಹಾಸಿಕ ಚಿತ್ರದ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ತುಂಬಾ ಕಾತುರದಿಂಡ ಕಾದಿದ್ದಾರೆ.

  ಐನೂರು ಕೋಟಿ ರು ಗೂ ಮೀರಿದ ಆದಾಯ ಗಳಿಕೆ ಕಂಡ ಮೊದಲ ಭಾಗದಲ್ಲಿ ಪ್ರಭಾಸ್, ರಾಣಾ ದಗ್ಗುಭಾತಿ, ಅನುಷ್ಕಾ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಕೃಷ್ಣ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದರು.['ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!]

  ಬಾಹುಬಲಿ ಚಿತ್ರ ನೋಡಿದವರು ಕ್ಲೈಮ್ಯಾಕ್ಸ್ ನಂತರ ತಲೆಕೆಡಿಸಿಕೊಳ್ಳದೆ ಸುಮ್ಮನಿರಲ್ಲ. ನಾಯಕ ಶಿವುಡುಗೆ ಮಾಹಿಷ್ಮತಿ ಸಾಮ್ರಾಜ್ಯದ ಕಥೆ ಹೇಳುವ ಕಟ್ಟಪ್ಪ ಕೊನೆಗೆ ನೀಡುವ ಟ್ವಿಸ್ಟ್ ಎಲ್ಲರನ್ನು ಚಕಿತಗೊಳಿಸುತ್ತದೆ. ಜೊತೆಗೆ ಎಲ್ಲರ ಮನದಲ್ಲೂ ಕಟ್ಟಕಡೆಗೆ ಉಳಿಯುವ ಪ್ರಶ್ನೆ "ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ?".

  ಈಗ ಇದೇ ಪ್ರಶ್ನೆ ಚಿತ್ರ ಬಿಡುಗಡೆಯಾದಾಗಿನಿಂದಲೂ ಸಿನಿರಸಿಕರ ತಲೆ ಕೊರೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಾಹುಬಲಿ ದಿ ಬಿಗನಿಂಗ್ ಚಿತ್ರದ ಅಂತಿಮ ದೃಶ್ಯ ಪ್ರೇಕ್ಷಕರನ್ನು ಕುತೂಹಲದ ಹಂತಕ್ಕೆ ಮುಟ್ಟಿಸುತ್ತದೆ. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ ಎಂಬುದನ್ನು ತಿಳಿಯಲು 2017ರ ತನಕ ಕಾಯಲೇಬೇಕಿದೆ.

  (ಫಿಲ್ಮೀಬಿಟ್ ಕನ್ನಡ)

  English summary
  The SS Rajamouli directorial film Baahubali 2's release date has been announced by the makers and Baahubali : The Conclusion will be releasing on 28th April, 2017. The movie produced by Dharma Productions and AA films. Movie has Prabhas, Anushka Shetty, Tamannah Bhatia and Rana Daggubati in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X