»   » 'ಕೇಸರಿ' ಫೋಟೋ ಎಡವಟ್ಟು: ಟ್ರೋಲ್ ಆದ ಕರಣ್ ಜೋಹರ್.!

'ಕೇಸರಿ' ಫೋಟೋ ಎಡವಟ್ಟು: ಟ್ರೋಲ್ ಆದ ಕರಣ್ ಜೋಹರ್.!

Posted By:
Subscribe to Filmibeat Kannada

ಕುಂತ್ರೂ, ನಿಂತ್ರೂ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಸೆಲೆಬ್ರಿಟಿಗಳು, ಅಲ್ಲಿ ಏನೇ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು. ಯಾಕಂದ್ರೆ, ಸ್ವಲ್ಪ ಎಡವಟ್ಟು ಆದರೂ, ಜನ ತರಾಟೆಗೆ ತೆಗೆದುಕೊಳ್ಳದೇ ಸುಮ್ಮನೆ ಇರಲ್ಲ.

ಮುಖ ಮೂತಿ ನೋಡದೆ ಕೆಲವರು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಾರೆ, ಇನ್ನೂ ಕೆಲವರು ಲೇವಡಿ ಮಾಡುತ್ತಾರೆ. ಹಲವರು ಮಂಗಳಾರತಿ ಎತ್ತುತ್ತಾರೆ. ಸದ್ಯ ಬಾಲಿವುಡ್ ನ ಖ್ಯಾತ ಫಿಲ್ಮ್ ಮೇಕರ್ ಕರಣ್ ಜೋಹರ್ ಗೆ ಇಂಥದ್ದೇ ಪರಿಸ್ಥಿತಿ ಎದುರಾಗಿದೆ.

ಪರಿಣಿತಿ ಛೋಪ್ರಾ ಫೋಟೋ ಹಾಕುವ ಬದಲು ಅಕ್ಷಯ್ ಕುಮಾರ್ ಫೋಟೋ ಹಾಕಿದ್ದಕ್ಕೆ, ಟ್ವೀಟಿಗರು ಕರಣ್ ಜೋಹರ್ ಕಾಲೆಳೆಯುತ್ತಿದ್ದಾರೆ. ಸಂಪೂರ್ಣ ವಿವರ ಫೋಟೋ ಸ್ಲೈಡ್ ಗಳಲ್ಲಿ...

'ಕೇಸರಿ'

ಕರಣ್ ಜೋಹರ್ ಹಾಗೂ ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮುಂದಿನ ಚಿತ್ರವೇ 'ಕೇಸರಿ'. ಈ ಚಿತ್ರದ ನಾಯಕಿ ಪರಿಣಿತಿ ಛೋಪ್ರಾ ಎಂದು ಕರಣ್ ಜೋಹರ್ ಟ್ವಿಟ್ಟರ್ ನಲ್ಲಿ ಘೋಷಿಸಿದರು.

ಪ್ರಭಾಸ್ 'ಆಗಲ್ಲ' ಎಂದು ಬಿಟ್ಟ ಪಟ್ಟಿಯಲ್ಲಿ ಕರಣ್ ಜೋಹರ್ ಚಿತ್ರವೂ ಒಂದು.?

ಫೋಟೋ ಎಡವಟ್ಟು

''ಕೇಸರಿ' ಚಿತ್ರದ ನಾಯಕಿ ಪರಿಣಿತಿ ಛೋಪ್ರಾ'' ಎಂದು ಕರಣ್ ಜೋಹರ್ ಟ್ವೀಟ್ ಮಾಡಿದರು. ಸಾಲದಕ್ಕೆ, 'ಕೇಸರಿ' ಚಿತ್ರದ ಅಕ್ಷಯ್ ಕುಮಾರ್ ಲುಕ್ ರಿವೀಲ್ ಮಾಡಿದರು.

ಪರಿಣಿತಿ ಫೋಟೋ ಹಾಕ್ಬೇಕಿತ್ತು.!

''ಕೇಸರಿ' ಚಿತ್ರದ ನಾಯಕಿ ಪರಿಣಿತಿ ಛೋಪ್ರಾ'' ಅಂತ ಹೇಳಿದ್ಮೇಲೆ ಪರಿಣಿತಿ ಛೋಪ್ರಾ ಫೋಟೋ ಹಾಕ್ಬೇಕಿತ್ತು. ಅಕ್ಷಯ್ ಕುಮಾರ್ ಯಾಕೆ ಬೇಕಾಗಿತ್ತು ಎಂದು ಟ್ವೀಟಿಗರು ಲೇವಡಿ ಮಾಡಲು ಆರಂಭಿಸಿದರು.

ಟ್ರೋಲ್ ಶುರು

ಕರಣ್ ಜೋಹರ್ ಟ್ವೀಟ್ ಗೆ ಟ್ವೀಟಿಗರು ಟ್ರೋಲ್ ಮಾಡಿದ ರೀತಿ ಇದು.!

ಎಚ್ಚೆತ್ತ ಕರಣ್ ಜೋಹರ್

ಪರಿಣಿತಿ ಛೋಪ್ರಾ ಫೋಟೋಗಳನ್ನು ಹಾಕಿ ಅದಕ್ಕೆ ಅಕ್ಷಯ್ ಕುಮಾರ್ ಅಂತ ಕರೆಯಲು ಶುರು ಮಾಡಿದಾಗ ಕರಣ್ ಜೋಹರ್ ಎಚ್ಚೆತ್ತು ಮಗದೊಂದು ಟ್ವೀಟ್ ಮಾಡಿದರು.

ಕ್ಷಮೆ ಕೇಳಿದ ಕರಣ್ ಜೋಹರ್

''ಕೇಸರಿ' ಚಿತ್ರದ ಬಗ್ಗೆ ಮಾತನಾಡಿದ ಕಾರಣ, 'ಕೇಸರಿ' ಚಿತ್ರದ ಫೋಟೋ ಹಾಕಿದೆ. ಈ ಬಗ್ಗೆ ಕ್ಷಮೆ ಇರಲಿ'' ಎಂದು ಕೇಳುತ್ತಾ ಪರಿಣಿತಿ ಛೋಪ್ರಾ ಅವರ ಫೋಟೋವನ್ನ ಹಾಕಿದರು ಕರಣ್ ಜೋಹರ್. ಆದರೂ ಕಾಲೆಳೆಯುವವರ ಸಂಖ್ಯೆ ಕಮ್ಮಿ ಆಗಲಿಲ್ಲ.

ಅಕ್ಷಯ್ ಕುಮಾರ್ ಪತ್ನಿ ಪಾತ್ರ

ಅಂದ್ಹಾಗೆ, 'ಕೇಸರಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪತ್ನಿಯಾಗಿ ಪರಿಣಿತಿ ಛೋಪ್ರಾ ಅಭಿನಯಿಸಲಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ.

English summary
Bollywood Film Maker Karan Johar gets trolled on Social Media for sharing Akshay Kumar's photo to announce Parineeti Chopra's name in 'Kesari'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X