For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್, ಪ್ರಿಯಾಂಕಾ ಮಧ್ಯೆ ಅದೇನಾಯ್ತು?

  |

  ಕರಣ್ ಜೋಹರ್ ಮತ್ತು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅಂಗಳದ ಜಗಳಕಾಯುವ ಜೋಡಿ ಎಂದೇ ಪ್ರಸಿದ್ಧರು. ಈ ಜೋಡಿ ಅದೆಷ್ಟು ಬಾರಿ ಕಿತ್ತಾಡಿದ್ದಾರೋ ಮತ್ತೆ ಅದೆಷ್ಟು ಬಾರಿ ಒಂದಾಗಿದ್ದಾರೋ ಅವರಿಬ್ಬರಿಗೂ ಗೊತ್ತಿರಲಿಕ್ಕಿಲ್ಲ. ಆದರೆ ಒಂದಂತೂ ಸತ್ಯ. ಪ್ರಿಯಾಂಕಾ ಜೊತೆ ಕಿತ್ತಾಡಿರುವುದಕ್ಕೆ ಕರಣ್ ಜೋಹರ್ ಅವರಿಗೆ ಈಗ ಪಶ್ಚಾತ್ತಾಪವಾಗಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

  ಈ ಮೊದಲು ಸಾಕಷ್ಟು ಬಾರಿ ಕಿತ್ತಾಡಿದ್ದ ಕರಣ್ ಜೋಹರ್, ಇತ್ತೀಚಿಗೊಮ್ಮೆ ಟ್ವಿಟ್ಟರಿನಲ್ಲಿ ಪ್ರಿಯಾಂಕಾ ಚೋಪ್ರಾಗೆ "ಎಲುಬಿಲ್ಲದವಳು" ಎಂದು ಕರೆದು ಅವಮಾನ ಮಾಡಿದ್ದರು. ಆದರೆ ಈ ಬಗ್ಗೆ ಈಗ ಪಶ್ಚಾತ್ತಾಪಪಟ್ಟಿರುವ ಕರಣ್ ಜೋಹರ್, ಬಹಿರಂಗವಾಗಿ ಪ್ರಿಯಾಂಕಾ ಕ್ಷಮೆ ಕೋರಿದ್ದಾರೆ. ಅದನ್ನು ಮರೆತುಬಿಡುವಂತೆ ಪ್ರಿಯಾಂಕಾಗೆ ಮನವಿ ಮಾಡಿದ್ದಾರೆ. ಕರಣ್ ಜೋಹರ್, ಪ್ರಿಯಾಂಕಾ ಮಧ್ಯೆ ಅದೇನಾಯ್ತು? ಉತ್ತರ ನಂತರ ಸಿಕ್ಕಿದೆ.

  ಸಂದರ್ಶನವೊಂದರಲ್ಲಿ "ನಾನು ಪ್ರಿಯಾಂಕಾಗೆ ಫೋನ್ ಮಾಡಿ ಕೋಪದಲ್ಲಿ ಬಯ್ದುಬಿಟ್ಟಿದ್ದೇನೆ. ಪ್ರೆಷರ್ ಕುಕ್ಕರ್ ನಂತಿತ್ತು ಆಗಿನ ನನ್ನ ಸ್ಥಿತಿ. ಹೀಗಿರುವಾಗ ನಾನು ಕಾಲ್ ಮಾಡಿದ್ದೇ ಮೊದಲನೆ ತಪ್ಪು. ಬಯ್ದಿದ್ದು ಎರಡನೇ ತಪ್ಪು. ನಂತರ ನನಗೆ ಅದರ ಅರಿವಾಯ್ತು. ಪ್ರಿಯಾಂಕಾಗೆ ಫೋನ್ ಮಾಡಿದ ನಾನು ನಾನೀಗ 40 ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನಗೆ ನಿನ್ನ ಜೊತೆ ಭಾವನಾತ್ಮಕ ಸಂಬಂಧವಿದೆ.

  ನನ್ನ ಈ ಮೊದಲಿನ ಮಾತಿನಿಂದ ನಿನಗೆ ನೋವಾಗಿರಬಹುದು. ದಯವಿಟ್ಟು ಏನೂ ಅಂದುಕೊಳ್ಳಬೇಡ. ನನ್ನ ವೈಯಕ್ತಿಕ ಜೀವನದ ಸಾಕಷ್ಟು ಕಹಿ ಘಟನೆಗಳನ್ನು ನಾನು ನಿನ್ನೊಂದಿಗೆ ಹಂಚಿಕೊಂಡಿದ್ದೇನೆ. ನಾನು ನಿನಗಿಂತ ವಯಸ್ಸಿನಲ್ಲಿ ದೊಡ್ಡವನು. ನಾನು ಮೇಚ್ಯೂರ್ಡ್ ಆಗಬೇಕಿದೆ, ಆಗುತ್ತೇನೆ ಎಂದಿದ್ದೇನೆ" ಎಂದಿದ್ದಾರೆ ಕರಣ್ ಜೋಹರ್. ಹೇಗಿದೆ ನೋಡಿ ಈ ಜೋಡಿ! ಈಗಲಾದರೂ ಕರಣ್ ಎಚ್ಚೆತ್ತುಕೊಂಡಿದ್ದಾರೆ. ಪ್ರಿಯಾಂಕಾಗೆ ಖುಷಿಯಾಗಿರಬಹುದು ಅಲ್ವಾ? ಬಾಲಿವುಡ್ ಕಡೆಯಿಂದ ಇನ್ನೂ ಏನೇನ್ ಸುದ್ದಿ ಕೇಳ್ಬೇಕೋ! (ಏಜೆನ್ಸೀಸ್)

  English summary
  Karan Johar and Priyanka Chopra fight is one of the most famous fights of Bollywood. But Karan regrets fighting with Priyanka and says that he overacted.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X