For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಇನ್‌ಸ್ಟಾಗ್ರಾಂಗೆ ಕಾಲಿಟ್ಟರು ಕರೀನಾ ಕಪೂರ್ ಖಾನ್

  |

  ಇನ್‌ಸ್ಟಾಗ್ರಾಂನಲ್ಲಿ ಇಲ್ಲದ ಸೆಲೆಬ್ರಿಟಿಯೇ ಇಲ್ಲ. ಅದರಲ್ಲಿಯೂ ಸಿನಿಮಾ ಮಂದಿಯಂತೂ ಇತ್ತೀಚೆಗೆ ಇನ್‌ಸ್ಟಾಗ್ರಾಂ ಅನ್ನು ಇತರೆ ಎಲ್ಲ ಸಾಮಾಜಿಕ ಮಾಧ್ಯಮಗಳಿಗಿಂತಲೂ ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ. ಅಭಿಮಾನಿಗಳನ್ನು ಸುಲಭವಾಗಿ ತಲುಪುವ ಮಾರ್ಗವಿದು.

  ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಹೆಸರಿನಲ್ಲಿಯೂ ಇನ್‌ಸ್ಟಾಗ್ರಾಂ ಖಾತೆಗಳಿದ್ದವು. ಅವೆಲ್ಲವೂ ಅವರ ಅಭಿಮಾನಿಗಳು ಸೃಷ್ಟಿಸಿದ್ದ ನಕಲಿ ಖಾತೆಗಳು. ಇತ್ತೀಚೆಗೆ ಬಂದ ನಟಿಯರೆಲ್ಲ ಇನ್‌ಸ್ಟಾದಲ್ಲಿ ಮಿಂಚುತ್ತಾ ವರ್ಷವೇ ಕಳೆದಿದ್ದರೆ, ಕರೀನಾ ಕಪೂರ್ ಖಾನ್ ಇದೀಗ ಇನ್‌ಸ್ಟಾಗ್ರಾಂ ಖಾತೆಗೆ ಕಾಲಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಕರೀನಾ ಕಪೂರ್ ಕೈಯಲ್ಲಿರುವ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!ಕರೀನಾ ಕಪೂರ್ ಕೈಯಲ್ಲಿರುವ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!

  ಕರೀನಾ ಪತಿ ಸೈಫ್ ಅಲಿ ಖಾನ್ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೂ ಇದುವರೆಗೂ ಕರೀನಾ ಹೊಸ ಮಾಧ್ಯಮದತ್ತ ಸುಳಿಯದಿದ್ದದ್ದು ಸೋಜಿಗ ಮೂಡಿಸಿತ್ತು. ಕೊನೆಗೂ ಅವರು ಅಭಿಮಾನಿಗಳಿಗೆ ಖುಷಿ ಸಂಗತಿ ನೀಡಿದ್ದಾರೆ.

  ಬುಧವಾರವಷ್ಟೇ ಕರೀನಾ ಇನ್‌ಸ್ಟಾದಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಬೆಕ್ಕೊಂದು ಪರದೆ ಮೇಲೆ ಓಡುವ ಚಿತ್ರವನ್ನು ಹಾಕಿ 'ಕಮಿಂಗ್ ಸೂನ್' ಎಂಬ ಶೀರ್ಷಿಕೆ ಹಾಕಿದ್ದರು. ಶುಕ್ರವಾರ ತಮ್ಮ ಎಡಿಟೆಡ್ ಚಿತ್ರದ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅದಕ್ಕೆ 'ಬೆಕ್ಕು ಚೀಲದಿಂದ ಹೊರಬಂದಿದೆ' ಎಂಬ ಕ್ಯಾಪ್ಷನ್ ನೀಡಿದ್ದಾರೆ.

  View this post on Instagram

  The cat's out of the bag. #HelloInstagram

  A post shared by Kareena Kapoor Khan (@kareenakapoorkhan) on

  ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?! ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!

  ಇನ್‌ಸ್ಟಾ ಖಾತೆಯಲ್ಲಿ ಕರೀನಾ ಪ್ರೊಫೈಲ್‌ಗೆ ಹೋದವರಿಗೆ ಮೂರು ಚಿತ್ರಗಳು ಮಾತ್ರ ಕಾಣಿಸುತ್ತವೆ. ಒಂದು ಬೆಕ್ಕು ಹೋಗುತ್ತಿರುವುದು, ಕರೀನಾ ಕುಳಿತಿರುವುದು ಮತ್ತು ಬೆಕ್ಕುಹೊರಬರುತ್ತಿರುವುದು. ಇನ್‌ಸ್ಟಾದಲ್ಲಿ ಹೀಗೆ ವಿಭಿನ್ನವಾಗಿ ಎಂಟ್ರಿಕೊಟ್ಟ ರೀತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಎರಡೇ ದಿನದಲ್ಲಿ ಕರೀನಾ ಎಂಟು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಗಳಿಸಿದ್ದಾರೆ.

  English summary
  Kareena Kapoor Khan has finally created the account on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X