»   » ಬರ್ತ್ ಡೆ ರಾತ್ರಿ ಕರೀನಾ, ಸೈಫ್ ಪಯಣ ಎಲ್ಲಿಗೆ ಗೊತ್ತೇ?

ಬರ್ತ್ ಡೆ ರಾತ್ರಿ ಕರೀನಾ, ಸೈಫ್ ಪಯಣ ಎಲ್ಲಿಗೆ ಗೊತ್ತೇ?

Posted By:
Subscribe to Filmibeat Kannada

ನಟಿ ಕರೀನಾ ಕಪೂರ್ ಹುಟ್ಟುಹಬ್ಬ ಅಂದರೆ ಸಾಮಾನ್ಯವೇ? ಬಾಲಿವುಡ್ ನಲ್ಲಿ ಈ ಕರೀನಾ ಕಪೂರ್ ಖಾಂದಾನ್ ಭಾರಿ ಜೋರಾಗಿಯೇ ಸಾಗುತ್ತಿದೆ. ಈಗಂತೂ ಕರೀನಾ ತಮ್ಮ ಬರಲಿರುವ ಬಹುನಿರೀಕ್ಷಿತ ಚಿತ್ರ 'ಹೀರೋಯಿನ್' ಪ್ರಚಾರಕಾರ್ಯದಲ್ಲಿ ಬಿಜಿ. ಐಶ್ವರ್ಯಾ ರೈ ಮಾಡಬೇಕಿದ್ದ ಈ ಪಾತ್ರ ಐಶೂ ಗರ್ಭಿಣಿಯಾದ ನಿಮಿತ್ತ ಕರೀನಾ ಮಡಿಲಿಗೆ ಯಾವಾಗ ಬಿತ್ತೋ, ಅಂದಿನಿಂದ ಪಕ್ಕಾ ಐಶ್ವರ್ಯಾ ರೈ ಆಗಲು ಯತ್ನಿಸುತ್ತಿದ್ದಾರೆ ಕರೀನಾ.

ಇಂಥ ಕರೀನಾ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಇದೇ ತಿಂಗಳು 21 ಕ್ಕೆ (ಸೆಪ್ಟೆಂಬರ್ 21) ಕರೀನಾ ಹುಟ್ಟುಹಬ್ಬವಿದ್ದು ಅದನ್ನವರು ಅದೆಲ್ಲಿ ಆಚರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ಕುತೂಹಲದ ವಿಷಯ. ಆದರೆ ಏನನ್ನು ಮರೆತರೂ, ಕರೀನಾರನ್ನು ಹಾಗೂ ಅವರ ಹುಟ್ಟುಹಬ್ಬವನ್ನು ಮರೆಯದ ಸೈಫ್, ಆ ಕುತೂಹಲಕ್ಕೂ ಕಲ್ಲು ಹಾಕಿದ್ದಾರೆ. ಅಂದರೆ ಕರೀನಾ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಲಾಗುವುದು ಎಂಬ ಗುಟ್ಟುನ್ನು ಬಯಲು ಮಾಡಿದ್ದಾರೆ.

ಕರೀನಾ ಹುಟ್ಟುಹಬ್ಬದಂದು ಅವರನ್ನು ಗೋವಾಗೆ ಕರೆದುಕೊಂಡು ಹೋಗಲು ಸೈಫ್ ನಿರ್ಧರಿಸಿದ್ದಾರೆ. ಈಗಾಗಲೇ ಮದುವೆಯವರೆಗೂ ಬಂದಿರುವ ಪ್ರೇಮಪಕ್ಷಿಗಳು ಹುಟ್ಟುಹಬ್ಬದಂದು ಮನೆಯಲ್ಲಿ ಕುಳಿತಿರುತ್ತಾರಾ? ಸಾಧ್ಯವೇ ಇಲ್ಲ. ಆದರೆ ಅವರು ವಿದೇಶಗಳನ್ನು ಬಿಟ್ಟು ಗೋವಾಗೆ ಬರುತ್ತಿರುವುದು ವಿಶೇಷ ಲೇಟೆಸ್ಟ್ ನ್ಯೂಸ್ ಅಷ್ಟೇ! ಆಶ್ಚರ್ಯವೆಂದರೆ, ಅಂದೇ (ಸೆಪ್ಟೆಂಬರ್ 21) ಕರೀನಾ ನಟನೆಯ 'ಹೀರೋಯಿನ್' ಚಿತ್ರದ ಬಿಡುಗಡೆ.

ಆದರೆ ವೃತ್ತಿಪರತೆಯನ್ನು ಮರೆಯದ ಕರೀನಾ ಅದಕ್ಕೂ ಮೊದಲು ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ಕಮಿಟ್ ಮೆಂಟ್ ಗಳನ್ನು ಮುಗಿಸಿಯೇ ಗೋವಾಗೆ ಹೋಗಲಿದ್ದಾರಂತೆ. ಜೊತೆಗೆ ಸೈಫ್ ಕೂಡ ಸಿನಿಮಾ ಉದ್ಯಮವನ್ನು ಬಲ್ಲ ನಟರಾಗಿರುವುದರಿಂದ ಚಿತ್ರದ ಪ್ರಚಾರಕ್ಕೆ ತೊಂದರೆಯಾಗದಂತೆ ಹುಟ್ಟುಹಬ್ಬದ ದಿನ 'ರಾತ್ರಿ' ಕರೀನಾರನ್ನು ಗೋವಾಗೆ ಕರೆದೊಯ್ಯಲಿದ್ದಾರಂತೆ. ಹೀಗಾಗಿ ಹುಟ್ಟುಹಬ್ಬದ 'ರಾತ್ರಿ' ಕರೀನಾ ಪಾಲಿಗೆ ವಿಶೇಷವಾಗಲಿದೆ. ಸೈಫ್ ಪಾಲಿಗೂ ಎಂಬುದು ಗಮನದಲ್ಲಿರಲಿ... (ಏಜೆನ್ಸೀಸ್)

English summary
Kareena Kapoor, who is busy with the promotions of her upcoming film Heroine, will celebrate her birthday in Goa. It was Saif Ali Khan idea.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada