For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಖಾನ್ ಗೆ ಕಮ್ಮಿ ಆಗಿಲ್ಲ ಬೇಡಿಕೆ: ಸಂಭಾವನೆ ದಿಢೀರ್ ಏರಿಕೆ.!

  By Harshitha
  |

  ಪಟೌಡಿ ನವಾಬ್, ನಟ ಸೈಫ್ ಅಲಿ ಖಾನ್ ಜೊತೆ ವಿವಾಹವಾದ ಬಳಿಕವೂ ಬಾಲಿವುಡ್ ನಲ್ಲಿ ಕರೀನಾ ಕಪೂರ್ ಸಕ್ರಿಯವಾಗಿದ್ದಾರೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗಿದ್ದರೂ, ಬಾಲಿವುಡ್ ಲೋಕದಲ್ಲಿ ನಟಿ ಕರೀನಾ ಕಪೂರ್ ಖಾನ್ ಗೆ ಕೊಂಚ ಕೂಡ ಬೇಡಿಕೆ ಕಮ್ಮಿ ಆಗಿಲ್ಲ.

  'ಭಜರಂಗಿ ಭಾಯಿಜಾನ್', 'ಕಿ ಅಂಡ್ ಕಾ', 'ಉಡ್ತಾ ಪಂಜಾಬ್' ನಂತಹ ಹಿಟ್ ಸಿನಿಮಾಗಳನ್ನ ಕರೀನಾ ಕಪೂರ್ ಕೊಟ್ಟಿದ್ದು ಮದುವೆ ಆದ್ಮೇಲೆಯೇ.!

  'ಉಡ್ತಾ ಪಂಜಾಬ್' ಬಳಿಕ ಎರಡು ವರ್ಷ ಬ್ರೇಕ್ ತೆಗೆದುಕೊಂಡು ಮುದ್ದಾದ ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್ 'ವೀರೇ ದಿ ವೆಡ್ಡಿಂಗ್' ಮೂಲಕ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದರು.

  ನಿರೀಕ್ಷಿಸಿದ ಮಟ್ಟಕ್ಕಿಂತ 'ವೀರೇ ದಿ ವೆಡ್ಡಿಂಗ್' ಸಿನಿಮಾ ಹೆಚ್ಚು ಕಲೆಕ್ಷನ್ ಮಾಡ್ತು. ಹೀಗಾಗಿ ನಟಿ ಕರೀನಾ ಕಪೂರ್ ಖಾನ್ ತನ್ನ ಸಂಭಾವನೆಯನ್ನ ದಿಢೀರ್ ಅಂತ ಏರಿಕೆ ಮಾಡಿದ್ದಾರೆ. ಮುಂದೆ ಓದಿರಿ...

  ಕರೀನಾ ಸಂಭಾವನೆ ಏರಿಕೆ.!

  ಕರೀನಾ ಸಂಭಾವನೆ ಏರಿಕೆ.!

  ಇಲ್ಲಿಯವರೆಗೂ ಚಿತ್ರವೊಂದಕ್ಕೆ 5 ರಿಂದ 7 ಕೋಟಿವರೆಗೂ ನಟಿ ಕರೀನಾ ಕಪೂರ್ ಖಾನ್ ಸಂಭಾವನೆ ಪಡೆಯುತ್ತಿದ್ದರು. ಆದ್ರೀಗ, 'ವೀರೇ ದಿ ವೆಡ್ಡಿಂಗ್' ಯಶಸ್ಸು ಗಳಿಸಿದ ಬಳಿಕ ಬರೋಬ್ಬರಿ 10 ಕೋಟಿಗೆ ತಮ್ಮ ಸಂಭಾವನೆಯನ್ನ ಕರೀನಾ ಕಪೂರ್ ಖಾನ್ ಹೈಕ್ ಮಾಡಿಕೊಂಡಿದ್ದಾರೆ.

  ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.! ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

  ಕರೀನಾ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು.!

  ಕರೀನಾ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು.!

  'ವೀರೇ ದಿ ವೆಡ್ಡಿಂಗ್' ಬಳಿಕ ಕರೀನಾ ಕಪೂರ್ ಖಾನ್ 'ಗುಡ್ ನ್ಯೂಸ್' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಶಾರುಖ್ ಖಾನ್ ಅಭಿನಯದ 'ಸಲ್ಯೂಟ್' ಹಾಗೂ ಕರಣ್ ಜೋಹರ್ ಪ್ರೊಡಕ್ಷನ್ ನಲ್ಲೂ ಕರೀನಾ ಕೆಲಸ ಮಾಡುವ ಸಾಧ್ಯತೆ ಇದೆ.

  ಗಗನಕ್ಕೇರಿತು ರಣ್ವೀರ್ ಸಿಂಗ್ ಸಂಭಾವನೆ: ಎಲ್ಲಾ 'ಪದ್ಮಾವತ್' ಕೃಪೆ.!ಗಗನಕ್ಕೇರಿತು ರಣ್ವೀರ್ ಸಿಂಗ್ ಸಂಭಾವನೆ: ಎಲ್ಲಾ 'ಪದ್ಮಾವತ್' ಕೃಪೆ.!

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಕರೀನಾ.!

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಕರೀನಾ.!

  ವರದಿಗಳ ಪ್ರಕಾರ, ಇಲ್ಲಿಯವರೆಗೂ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದವರು ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಕಂಗನಾ ರಣೌತ್. ಇದೀಗ ಇದೇ ಪಟ್ಟಿಗೆ ಕರೀನಾ ಕಪೂರ್ ಖಾನ್ ಲೇಟೆಸ್ಟ್ ಆಗಿ ಎಂಟ್ರಿಕೊಟ್ಟಿದ್ದಾರೆ.

  'ಪದ್ಮಾವತಿ' ಆಗಲು ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು.?'ಪದ್ಮಾವತಿ' ಆಗಲು ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು.?

  ದೀಪಿಕಾ-ಕಂಗನಾ ಸಂಭಾವನೆ ಎಷ್ಟು.?

  ದೀಪಿಕಾ-ಕಂಗನಾ ಸಂಭಾವನೆ ಎಷ್ಟು.?

  ದೀಪಿಕಾ ಚಿತ್ರವೊಂದಕ್ಕೆ 13 ಕೋಟಿ ಪಡೆಯುತ್ತಾರೆ. ಇನ್ನೂ ಕಂಗನಾ ಸಂಭಾವನೆ 11 ಕೋಟಿ ಮುಟ್ಟಿದೆ ಎನ್ನಲಾಗಿತ್ತು. ಇದೀಗ ಕರೀನಾ ಕಪೂರ್ ಸಂಭಾವನೆ 10 ಕೋಟಿಗೆ ಬಂದು ತಲುಪಿದೆ. ಕೆಲ ನಟರಿಗೆ ಹೋಲಿಸಿದರೆ, ಬಾಲಿವುಡ್ ನಲ್ಲಿ ಈ ಬೆಡಗಿಯರಿಗೆ ಸಂಭಾವನೆ ಹೆಚ್ಚು.! ನಂಬುವುದು ಕಷ್ಟ ಆದರೂ ಇದೇ ಸತ್ಯ.

  English summary
  According to the latest reports, Bollywood Actress Kareena Kapoor Khan to charge Rs.10 crore per Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X