For Quick Alerts
  ALLOW NOTIFICATIONS  
  For Daily Alerts

  ಕೊರೊನಾ, ಪ್ರೆಗ್ನೆನ್ಸಿ ಮತ್ತು ಭಯದ ನಡುವೆ ಚಿತ್ರೀಕರಣ ಮಾಡಬೇಕಿತ್ತು: ಕರೀನಾ ಕಪೂರ್

  |

  ಬಾಲಿವುಡ್ ನಟಿ ಕರೀನಾ ಕಪೂರ್ ಕೊರೊನಾ ಮತ್ತು ಪ್ರೆಗ್ನೆನ್ಸಿ ನಡುವೆ ಚಿತ್ರೀಕರಣ ಮಾಡಿದ ಅನುಭವನ್ನು ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಮೀರ್ ಖಾನ್ ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಕರೀನಾ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಲಾಕ್ ಡೌನ್ ಗೂ ಮೊದಲು ಬಹುತೇಕ ಚಿತ್ರೀಕರಣ ಮುಗಿಸಿದ್ದ ಸಿನಿಮಾತಂಡ ಇದೀಗ ಸುಮಾರು 6 ನಂತರ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

  ಇದೀಗ ಕರೀನಾ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣ ಮುಗಿಸಿರುವ ಖುಷಿಯನ್ನು ನಟಿ ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ ಕರೀನಾ ಕಪೂರ್ ಇದೀಗ ಎರಡನೇ ಬಾರಿ ಗರ್ಭಿಣಿಯಾಗಿದ್ದಾರೆ. ಈ ಸಮಯದಲ್ಲಿ ಚಿತ್ರೀಕರಣ ಮಾಡುವುದು ಎಷ್ಟು ಕಷ್ಟವಾಗಿತ್ತು ಎನ್ನುವುದನ್ನು ಹೇಳಿದ್ದಾರೆ.

  IPLನಲ್ಲಿ ಅವಕಾಶ ಇದ್ಯಾ?: ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ನಟಿ ಕರೀನಾ ಪುತ್ರIPLನಲ್ಲಿ ಅವಕಾಶ ಇದ್ಯಾ?: ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ನಟಿ ಕರೀನಾ ಪುತ್ರ

  'ಎಲ್ಲಾ ಸುಂದರ ಪಯಣಗಳು ಕೊನೆಗೊಳ್ಳಬೇಕು. ಇಂದು ನಾನು ನನ್ನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ್ದೇನೆ.' ಎಂದು ಚಿತ್ರೀಕರಣ ಮುಗಿಸಿದ ಬಗ್ಗೆ ಹೇಳಿದ್ದಾರೆ. ನಂತರ ಚಿತ್ರೀಕರಣ ಮಾಡುವುದು ಎಷ್ಟು ಸವಾಲಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.

  'ನಿಜಕ್ಕೂ ತುಂಬಾ ಕಷ್ಟವಾಗಿತ್ತು. ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಪ್ರಗ್ನೆನ್ಸಿ ಮತ್ತೊಂದು ಕಡೆ ಭಯ ಇದೆಲ್ಲದರ ನಡುವೆ ಚಿತ್ರೀಕರಣ ಮಾಡಬೇಕಿತ್ತು. ಆದರೆ ಚಿತ್ರೀಕರಣದ ಉತ್ಸಾಹ ಕಮ್ಮಿ ಆಗಿರಲಿಲ್ಲ.ಸುರಕ್ಷಿತವಾಗಿ ಚಿತ್ರೀಕರಣ ಮುಗಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

  ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್. ಈ ಚಿತ್ರ ತುಂಬಾ ಇಷ್ಟಪಟ್ಟಿದ್ದ ಆಮೀರ್ ಖಾನ್ ಹಿಂದಿಗೆ ರಿಮೇಕ್ ಮಾಡಿ ತಾವೆ ನಟಿಸಿದ್ದಾರೆ. ಅಂದ್ಹಾಗೆ ಈ ಸಿನಿಮಾ ಆಮೀರ್ ಖಾನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ.

  English summary
  Kareena Kapoor Khan wraps Laal Singh Chaddha shoot. She says, And all journeys must come to an end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X