»   » ಕರೀನಾ ಕಪೂರ್ ಸದ್ಯದಲ್ಲೇ ಭಾರತದ ಪ್ರಧಾನ ಮಂತ್ರಿ

ಕರೀನಾ ಕಪೂರ್ ಸದ್ಯದಲ್ಲೇ ಭಾರತದ ಪ್ರಧಾನ ಮಂತ್ರಿ

Posted By:
Subscribe to Filmibeat Kannada

ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಪ್ರಧಾನ ಮಂತ್ರಿಯಾಗಲಿದ್ದಾರೆ. ನಟಿ ಕರೀನಾ ಕಪೂರ್ ಇನ್ನೂ ರಾಜಕೀಯಕ್ಕೇ ಧುಮಕಿಲ್ಲ, ಆಗಲೇ ಪ್ರಧಾನಿಯಾಗಲಿದ್ದಾರಾ? ಹೀಗದು ಪ್ರಶ್ನಿಸುವ ಅಗತ್ಯವಿಲ್ಲ. ಕಾರಣ, ಕರೀನಾ ಕಪೂರ್ ಚಿತ್ರನಟಿ. ಅವರು ಯಾವಾಗ ಏನೂ ಬೇಕಾದರೂ ಆಗಬಹುದು. ಆದರೆ ತೆರೆಯ ಮೇಲೆ ಅಷ್ಟೇ!

ಇತ್ತೀಚಿಗಷ್ಟೇ ಸಂಜಲ್ ಲೀಲಾ ಬನ್ಸಾಲಿಯ ರಾಮ್ ಲೀಲಾ ಚಿತ್ರದಿಂದ ಹೊರಬಂದಿರುವ ಕರೀನಾ, ಸದ್ಯದಲ್ಲೇ ಪ್ರಕಾಶ್ ಝಾ ನಿರ್ದೇಶನದ 'ರಾಜನೀತಿ 2' ರಲ್ಲಿ ನಟಿಸಲಿದ್ದಾರೆ. ಅದು ಅತಿಂಥ ಪಾತ್ರವಲ್ಲ, ಪ್ರಧಾನ ಮಂತ್ರಿ ಪಾತ್ರ. ಕರೀನಾ ಖುಷಿಯಾಗಿದ್ದಾರೆ. ಅವರ ಅಭಿಮಾನಿಗಳಂತೂ ಸಖತ್ ಖುಷಿಯಾಗಿದ್ದಾರೆ.

ಮಾಧ್ಯಮವೊಂದಕ್ಕೆ ಬಂದ ಸುದ್ದಿಯ ಪ್ರಕಾರ, ರಾಜಕೀಯ ಕಥಾಹಂದರವುಳ್ಳ 'ರಾಜನೀತಿ 2' ಚಿತ್ರದಲ್ಲಿ ನಟಿ ಕರೀನಾ ಕಪೂರ್ ಮಹಿಳಾ ಪ್ರಧಾನ ಮಂತ್ರಿಯಾಗಿ ಅಭಿನಯಿಸಲಿದ್ದಾರೆ. ಈ ವರ್ಷದ ಕೊನೆಯ ಹೊತ್ತಿಗೆ ಈ ಚಿತ್ರ ತೆರೆಗೆ ಬರಲಿದ್ದು ಅಷ್ಟರೊಳಗೆ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಹೀರೋಯಿನ್' ಚಿತ್ರ ತೆರೆಕಾಣಲಿದೆ.

ಸುದ್ದಿಮೂಲಗಳ ಪ್ರಕಾರ, ಪ್ರಕಾಶ್ ಝಾ ಈಗಾಗಲೇ ಈ ಪಾತ್ರದ ಬಗ್ಗೆ ಕರೀನಾ ಜೊತೆ ಮಾತನಾಡಿದ್ದಾರೆ. ಕರೀನಾ ಕೂಡ ಈ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ ಕರಾರು ಪತ್ರಕ್ಕೆ ಸಹಿ ಹಾಕುವುದಷ್ಟೇ ಬಾಕಿ. ಪ್ರಕಾಶ ಝಾರಿಗೆ ಕರೀನಾ ಕಪೂರ್ ಅವರನ್ನು ಸೂಚಿಸಿದ್ದು ಅಜಯ್ ದೇವಗನ್ ಎಂಬುದು ಸುದ್ದಿಮೂಲದಿಂದ ಸಿಕ್ಕ ಮಾಹಿತಿ.

ಕರೀನಾ ಒಪ್ಪಿರುವುದಷ್ಟೇ ಅಲ್ಲ, ಸಂಬಂಧಪಟ್ಟ ಚಿತ್ರತಂಡದ ಸದಸ್ಯರಿಗೆ ಪ್ರಪಂಚದಲ್ಲಿ ಮಹಿಳಾ ಪ್ರಧಾನ ಮಂತ್ರಿಗಳಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಈ ಮೊದಲು ಆಗಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಹೇಳಿದ್ದಾರೆ. ಏಕೆಂದರೆ ಈ ಪಾತ್ರದಲ್ಲಿ ಅವರು ತಮ್ಮ ಎಂದಿನ ಗ್ಲಾಮರ್ ಬಳಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಇಂತಹ ಪಾತ್ರಕ್ಕೆ ಅಗತ್ಯವಿರುವ ಮಾಹಿತಿ ಹಾಗೂ ವಾಸ್ತವಾಂಶಗಳನ್ನು ತಿಳಿದಕೊಂಡ ಮೇಲಷ್ಟೇ ತಾವು ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂಬುದನ್ನು ಕರೀನಾ ಚೆನ್ನಾಗಿ ಅರಿತಿದ್ದಾರೆ. ಇದು ಕರೀನಾ ಅವರ ವೃತ್ತಿಪರತೆಯನ್ನು ತೋರಿಸುವುದಷ್ಟೇ ಅಲ್ಲ, ಪಾತ್ರಕ್ಕೆ ಅತ್ಯಗತ್ಯವಾಗಿರುವ ಸಿದ್ಧತೆಗಳನ್ನು ಅವರು ಹೇಗೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿಗೂ ಬೆಳಕು ಬೀರಿದೆ. (ಏಜೆನ್ಸೀಸ್)

English summary
Kareena Kapoor, who is in the limelight for walking out of Sanjay Leela Bhansali's Ram Leela, will play the role of Indian prime minister in Rajneeti 2.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada