»   » ಸೈಫ್ ಜೊತೆ ಮದುವೆ ಸ್ವತಃ ಕರೀನಾಗೇ ಡೌಟು!

ಸೈಫ್ ಜೊತೆ ಮದುವೆ ಸ್ವತಃ ಕರೀನಾಗೇ ಡೌಟು!

Posted By:
Subscribe to Filmibeat Kannada

ಈ ಮೊದಲು, ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮದುವೆ ಅಕ್ಟೋಬರ್ 16, 2012 ರಂದು ನಡೆಯಲಿದೆ ಎನ್ನಲಾಗಿತ್ತು. ಇಬ್ಬರ ಕುಟುಂಬಗಳೂ ಈಗಾಗಲೇ ಮದುವೆ ಅಕ್ಟೋಬರ್ ನಲ್ಲಿ ನಡೆಯಲಿದೆ ಎಂದು ತಯಾರಿ ಆರಂಭಿಸಿಯಾಗಿದೆ. ಆದರೆ ಕರೀನಾ ಈಗ ಮದುವೆ ಆಗಲೋ ಬೇಡಲೋ ಎಂದು ಯೋಚಿಸತೊಡಗಿದ್ದಾರೆ ಎಂಬ ಸುದ್ದಿ ಸ್ಫೊಟವಾಗಿದೆ. 

ಆದರೆ ಸ್ವತಃ ಕರೀನಾಗೆ ಸೈಫ್ ಜೊತೆ ಮದುವೆ ಆಗುವ ಬಗ್ಗೆ ಸಂಶಯವಿದೆ ಎನ್ನಲಾಗುತ್ತಿದೆ. ಮತ್ತೊಮ್ಮೆ ಯೋಚಿಸತೊಡಗಿದ್ದೇನೆ ಎಂದಿರುವ ಕರೀನಾ ಮಾತು ಈಗ ಮದುವೆ ಆಗುವ ಬಗ್ಗೆ ಎಲ್ಲರಲ್ಲೂ ಸಾಕಷ್ಟು ಸಂಶಯ ಮನೆಮೂಡುವಂತೆ ಮಾಡಿದೆ. ಅಕ್ಟೋಬರಿನಲ್ಲಿ ಮದುವೆ ನಡೆಯುವ ಬಗ್ಗೆ ಸೈಫ್ ಕೆಲವು ದಿನಗಳ ಹಿಂದೆಯೇ ಸಂಶಯ ವ್ಯಕ್ತಪಡಿಸಿದ್ದರು.

ಮದುವೆಯಾದರೆ ತಮ್ಮ ಫಿಲ್ಮ್ ಕೆರಿಯರ್ ಪ್ರಾಬ್ಲಂನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂಬುದು ಕರೀನಾಗೆ ಈಗ ಜ್ಞಾನೋದಯವಾಗಿದೆ. ಆ ಬಗ್ಗೆ ಈಗ ಕರೀನಾ ಗಂಭೀರವಾಗಿ ಯೋಚಿಸಲು ತೊಡಗಿದ್ದಾರೆ. ಏಕೆಂದರೆ ಇತ್ತೀಚಿಗಷ್ಟೇ ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂಬರುವ 'ರಾಮ್ ಲೀಲಾ' ಚಿತ್ರದಿಂದ ಕರೀನಾಗೆ ಗೇಟ್ ಪಾಸ್ ನೀಡಿದ್ದಾರೆ.

ಅದಕ್ಕೆ ಕಾರಣ, ಕರೀನಾ ಸದ್ಯದಲ್ಲೇ ಮದುವೆಯಾಗುತ್ತಿರುವುದು ಹಾಗೂ ಬನ್ಸಾಲಿಗೆ ಮದುವೆಯಾಗಿರುವ ನಟಿ ಜ್ಯೂಲಿಯಟ್ ಪಾತ್ರಕ್ಕೆ ಬೇಡದಿರುವುದು. ಇವೆಲ್ಲಾ ಬೆಳವಣಿಗೆಗಳು ಕರೀನಾಗೆ ಈಗ ಅರ್ಥವಾಗಿವೆ. ಈ ಮೊದಲು ಸೈಫ್ ಸರ್ವಸ್ವ ಅಂದುಕೊಂಡಿದ್ದ ಕರೀನಾ, ಈಗ ತಮ್ಮ ವೃತ್ತಿಜೀವನದ ಬಗ್ಗೆ ಯೋಚಿಸತೊಡಗಿದ್ದಾರೆ. ಈ ವೇಳೆ ಕರೀನಾ ಸೈಫ್ ಜೊತೆ ಮದುವೆ ಆಗುವುದೋ ಬೇಡವೋ ಎಂದು ಯೋಚಿಸತೊಡಗಿದ್ದಾರೆ.

ಈಗಾಗಲೇ ಕರೀನಾ ಹಾಗೂ ಶರ್ಮಿಳಾ ಇಬ್ಬರೂ ಲಂಡನ್ ತೆರಳಿ ಮದುವೆ ಶಾಪಿಂಗ್ ಮಾಡಿಯಾಗಿದೆ. ಮದುವೆಗೆ ಕರೆಯಬೇಕಾಗಿರುವ ಅತಿಥಿಗಳ ಲಿಸ್ಟ್ ಮಾಡಿಯಾಗಿದೆ. ಎರಡೂ ಕಡೆಯ ಕುಟುಂಬದವರೂ ಈ ಬಾಲಿವುಡ್ ಜನಪ್ರಿಯ ಸೆಲೆಬ್ರಿಟಿ ಜೋಡಿ ಮದುವೆಗೆ ಕಾದು ಕುಳಿತಿವೆ. ಬಲ್ಲ ಮೂಲಗಳ ಪ್ರಕಾರ ಮದುವೆ ಅಕ್ಟೋಬರಿನಲ್ಲಿ ನಡೆಯುವುದು ಡೌಟು, ಈ ವರ್ಷದೊಳಗೆ ನಡೆಯಬಹುದಷ್ಟೇ! (ಏಜೆನ್ಸೀಸ್)

English summary
It has been said that Kareena Kapoor is not sure about the October wedding with Saif Ali Khan and she is having second thoughts about it. Kareena Kapoor thinks that her career will suffer because of her marriage.
 
Please Wait while comments are loading...