For Quick Alerts
  ALLOW NOTIFICATIONS  
  For Daily Alerts

  ಅಂತೂ ಬಾಲಿವುಡ್ ಮರ್ಯಾದೆ ಉಳೀತು: 'ಭೂಲ್ ಭುಲಯ್ಯ 2' 2ನೇ ದಿನದ ಕಲೆಕ್ಷನ್ ಸೂಪರ್!

  |

  'ಕೆಜಿಎಫ್ 2' ಸಿನಿಮಾ ಮುಂದೆ ನಿಲ್ಲುವುದಕ್ಕೆ ಪರದಾಡುತ್ತಿದ್ದ ಬಾಲಿವುಡ್‌ಗೆ ಕೊನೆಗೂ ಜೀವ ಬಂದಂತಾಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮುಂದೆ ಸೂಪರ್‌ಸ್ಟಾರ್‌ಗಳೇ ಅಖಾಡಕ್ಕೆ ಇಳಿದರೂ, ಸಿನಿಮಾವನ್ನು ಜಗ್ಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಬಾಲಿವುಡ್ ಮಂದಿ ಮುಜುಗರಕ್ಕೆ ಒಳಗಾಗಿದ್ದರು.

  'ಕೆಜಿಎಫ್ 2' ದರ್ಬಾರ್ ನಿಧಾನವಾಗಿ ತಣ್ಣಗಾಗುತ್ತಿದ್ದಂತೆ ಬಾಲಿವುಡ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದುವೇ 'ಭುಲ್ ಭುಲಯ್ಯ 2'. ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ನಟಿಸಿರುವ ಈ ಸಿನಿಮಾ ಮೊದಲ ದಿನದಿಂದಲೇ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದಕ್ಕೆ ಶುರುಮಾಡಿದೆ.

  'ಒಂದು ದಿನ ಯಾರಾದ್ರೂ ನಿನ್ನ ಬಯೋಪಿಕ್ ಮಾಡ್ತಾರೆ': ಸುಶಾಂತ್ ಸಿಂಗ್ ರಜಪೂತ್ ನೆನೆದ ಕಿಯಾರಾ!'ಒಂದು ದಿನ ಯಾರಾದ್ರೂ ನಿನ್ನ ಬಯೋಪಿಕ್ ಮಾಡ್ತಾರೆ': ಸುಶಾಂತ್ ಸಿಂಗ್ ರಜಪೂತ್ ನೆನೆದ ಕಿಯಾರಾ!

  ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಹಾಗೂ ಟಬು ಕಾಂಬಿನೇಷನ್ ವರ್ಕ್ ಆಗಿದೆ. ನಿರ್ದೇಶಕ ಅನೀಸ್ ಬಾಜ್ಮಿ ಹಾರರ್ ಕಾಮಿಡಿ ಪ್ರೇಕ್ಷಕರ ಮನಗೆದ್ದಿದೆ. 2007ರಲ್ಲಿ ತೆರೆಕಂಡಿದ್ದ 'ಭೂಲ್ ಭುಲಯ್ಯ' ಸಿನಿಮಾದ ಸೀಕ್ವೆಲ್ ಆಗಿದ್ದು, ಮೊದಲ ಎರಡು ದಿನಗಳ ಗಳಿಕೆ ಕಂಡು ಬಾಲಿವುಡ್ ಮಂದಿ ನಿಟ್ಟುಸಿರು ಬಿಡುವಂತಾಗಿದೆ.

  'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು?

  'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು?

  ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಶನಿವಾರ ( ಮೇ 22) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೊದಲ ದಿನಕ್ಕಿಂತ 28 ಪರ್ಸೆಂಟ್ ಏರಿಕೆಯಾಗಿದೆ. ವೀಕೆಂಡ್‌ನಲ್ಲಿ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ವೀಕೆಂಡ್‌ನ ಮೊದಲ ದಿನವೇ 'ಭೂಲ್ ಭುಲಯ್ಯ 2' ಸಿನಿಮಾ 18 ಕೋಟಿ ಕಲೆಕ್ಷನ್ ಮಾಡಿದೆ. ಇದು ಬಾಲಿವುಡ್‌ಗೆ ಕೊಂಚ ನಿರಾಳ ಎನಿಸಿದೆ.

  ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

  'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು?

  'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು?

  'ಭೂಲ್ ಭುಲಯ್ಯ 2' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ವಿಮರ್ಶಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಕಾರ್ತಿಕ್ ಆರ್ಯನ್ ಸಿನಿಮಾ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡಿತ್ತು. ಮೊದಲ ದಿನ 14.11 ಕೋಟಿ ಗಳಿಸಿದರೆ, ಎರಡನೇ ದಿನ 18 ಕೋಟಿ ಹೆಚ್ಚು ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಎರಡು ದಿನಗಳಲ್ಲಿ ಒಟ್ಟು 32 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

  ಕಾರ್ತಿಕ್‌ಗೆ ಸಿಕ್ಕ ಬಿಗ್ ಓಪನಿಂಗ್

  ಕಾರ್ತಿಕ್‌ಗೆ ಸಿಕ್ಕ ಬಿಗ್ ಓಪನಿಂಗ್

  ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್‌ ವೃತ್ತಿ ಬದುಕಿನಲ್ಲಿ ಇಷ್ಟು ದೊಡ್ಡ ಓಪನಿಂಗ್ ಸಿಕ್ಕಿರಲಿಲ್ಲ. ಈ ಹಿಂದೆ ಕಾರ್ತಿಕ್ ನಟಿಸಿದ ಸಿನಿಮಾಗಳು 14 ಕೋಟಿ ತಲುಪಿರಲಿಲ್ಲ. ಈ ಭಾರಿ ತನ್ನದೇ ಸಿನಿಮಾಗಳ ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಸಿನಿಮಾಗಳ ಮೊದಲ ದಿನದ ಗಳಿಕೆ ಹೀಗಿದೆ.

  ಬಿಗ್ ಓಪನಿಂಗ್ ಪಡೆದ ಕಾರ್ತಿಕ್ ಸಿನಿಮಾ

  2022 ಭೂಲ್ ಭುಲಯ್ಯ 2 14.11 ಕೋಟಿ
  2020 ಲವ್ ಆಜ್ ಕಲ್ 12.40 ಕೋಟಿ
  2019 ಪತಿ ಪತ್ನಿ ಔರ್ ವೋ 09.10 ಕೋಟಿ
  2019 ಲುಕ ಚುಪ್ಪಿ 08.01 ಕೋಟಿ
  2015 ಪ್ಯಾರ್‌ ಕಾ ಪಂಚ್‌ನಾಮ 06.80 ಕೋಟಿ

  ಹೆಚ್ಚು ಜನ ಹಿಂದಿ ಮಾತಾಡ್ತಿರೋದ್ರಿಂದ ದಕ್ಷಿಣದ ಸಿನಿಮಾ ರಿಮೇಕ್ ಆಗ್ತಿವೆ- ಕಿಯಾರಾ ಅಡ್ವಾಣಿಹೆಚ್ಚು ಜನ ಹಿಂದಿ ಮಾತಾಡ್ತಿರೋದ್ರಿಂದ ದಕ್ಷಿಣದ ಸಿನಿಮಾ ರಿಮೇಕ್ ಆಗ್ತಿವೆ- ಕಿಯಾರಾ ಅಡ್ವಾಣಿ

  ಕಂಗನಾಗೆ ಸೋಲು, ಕಾರ್ತಿಕ್‌ಗೆ ಗೆಲುವು

  ಕಂಗನಾಗೆ ಸೋಲು, ಕಾರ್ತಿಕ್‌ಗೆ ಗೆಲುವು

  ಕಂಗನಾ ರನೌತ್ ಅಭಿನಯದ 'ಧಾಕಡ್' ಸಿನಿಮಾ ಬಾಲಿವುಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿಲ್ಲ. ಮೊದಲ ಎರಡು ದಿನದ ಗಳಿಕೆ ಕಷ್ಟ ಪಟ್ಟ 1 ಕೋಟಿ ದಾಟಿದೆ. ಮೊದಲ ದಿನ 50 ಲಕ್ಷ ಹಾಗೂ ಎರಡನೇ ದಿನ 50 ಲಕ್ಷ ಗಳಿಕೆ ಕಂಡಿದೆ. ಹಾಗೇ ಮೂರನೇ ದಿನ ಭಾನುವಾರ ಕೂಡ 50 ಲಕ್ಷ ಗಳಿಸುಬಹುದೆಂಬ ನಿರೀಕ್ಷೆಯಿದೆ. ಈ ಮೂಲಕ 'ಧಾಕಡ್' ಸಿನಿಮಾದ ಗಳಿಕೆ ಮೊದಲ ವಾರದ ಅಂತ್ಯಕ್ಕೆ 1.50 ಕೋಟಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿದೆ.

  English summary
  Kartik Aaryan, Kiara Advani starrer Bhool Bhulaiyaa 2 Box Office Collection Day 2 Report,
  Sunday, May 22, 2022, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X