For Quick Alerts
  ALLOW NOTIFICATIONS  
  For Daily Alerts

  'ಥಗ್ಸ್ ಆಫ್ ಹಿಂದೂಸ್ತಾನ್' ನಾಯಕಿ ಯಾರು? ಉತ್ತರಿಸಿದ ಅಮೀರ್ ಖಾನ್

  By Suneel
  |

  ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬರಲಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಹಲವು ತಿಂಗಳುಗಳಿಂದ ಉತ್ತರ ಸಿಕ್ಕಿರಲಿಲ್ಲ. ಯಾಕಂದ್ರೆ ಚಿತ್ರದ ಲೀಡಿಂಗ್ ಲೇಡಿಯಾಗಿ ಅಭಿನಯಿಸಲಿರುವ ಬಗ್ಗೆ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್]

  ಅಲ್ಲದೇ ಕೆಲವು ದಿನಗಳ ಹಿಂದೆ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಇಬ್ಬರು ನಟಿಯರು ಅಭಿನಯಿಸಲಿದ್ದಾರೆ. ಅದರಲ್ಲಿ ಒಬ್ಬರು 'ಥಗ್ಸ್' ಆಗಿಯೂ ನಟಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದ ನಂತರ ಚಿತ್ರದಲ್ಲಿ ಯಾವ ನಟಿ ಅಮೀರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಈ ಕ್ಯೂರಿಯಾಸಿಟಿಗೆ ಈಗ ಅಮೀರ್ ಖಾನ್ ರವರೇ ಬ್ರೇಕ್ ಹಾಕಿದ್ದು, ಚಿತ್ರದಲ್ಲಿ 'ಥಗ್' ಆಗಿ ಕಾಣಿಸಿಕೊಳ್ಳಲಿರುವ ನಟಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

  ಅಮೀರ್ ಜೊತೆ ರೊಮ್ಯಾನ್ಸ್ ಮಾಡಲಿರುವ ನಟಿ ಯಾರು?

  ಅಮೀರ್ ಜೊತೆ ರೊಮ್ಯಾನ್ಸ್ ಮಾಡಲಿರುವ ನಟಿ ಯಾರು?

  'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಕತ್ರಿನಾ ಕೈಫ್ ಲೇಡಿ 'ಥಗ್' ಆಗಿ ಬಣ್ಣಹಚ್ಚಲಿದ್ದಾರೆ. ಈ ಬಗ್ಗೆ ಸ್ವತಃ ಅಮೀರ್ ಖಾನ್ ಇತ್ತೀಚೆಗೆ " ಫೈನಲಿ ನಮ್ಮ ಚಿತ್ರಕ್ಕೆ ಲಾಸ್ಟ್ ಥಗ್ ಆಗಿ ಕತ್ರಿನಾ ಕೈಫ್ ಅವರನ್ನು ಸ್ವಾಗತಿಸಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

  ಅಮೀರ್ ಖಾನ್ ಮತ್ತು ಕತ್ರಿನಾ ಕೈಫ್

  ಅಮೀರ್ ಖಾನ್ ಮತ್ತು ಕತ್ರಿನಾ ಕೈಫ್

  ಈ ಹಿಂದೆ ಕತ್ರಿನಾ ಕೈಫ್ 2013 ಡಿಸೆಂಬರ್ ನಲ್ಲಿ ತೆರೆಕಂಡ 'ಧೂಮ್ 3' ಚಿತ್ರದಲ್ಲಿ ಅಮೀರ್ ಖಾನ್ ಜೊತೆ ನಟಿಸಿದ್ದರು.

  ಆಕ್ಷನ್ ದೃಶ್ಯಗಳಲ್ಲಿ ಫಾತಿಮಾ ಸನಾ ಶೇಖ್

  ಆಕ್ಷನ್ ದೃಶ್ಯಗಳಲ್ಲಿ ಫಾತಿಮಾ ಸನಾ ಶೇಖ್

  ಡಿಎನ್ಎ ವರದಿ ಪ್ರಕಾರ, ನಟಿ ಫಾತಿಮಾ ಸನಾ ಶೇಖ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಮತ್ತು ಕತ್ತಿ ಯುದ್ಧ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಥೆಯ ಪ್ರಕಾರ ಅಮೀರ್ ಖಾನ್ ರವರು ಕತ್ರಿನಾ ಕೈಫ್ ಪ್ರೀತಿಯಲ್ಲಿ ಬೀಳುತ್ತಾರೆ" ಎಂದು ತಿಳಿದಿದೆ.

  ಬ್ರಿಟಿಷ್ ಗರ್ಲ್ ಆಗಿ ಕತ್ರಿನಾ ಕೈಫ್?

  ಬ್ರಿಟಿಷ್ ಗರ್ಲ್ ಆಗಿ ಕತ್ರಿನಾ ಕೈಫ್?

  "'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕೆ ಇಬ್ಬರು ನಟಿಯರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಭಾರತದ ಮಹಿಳೆಯ ಪಾತ್ರದಲ್ಲಿ ಅಮೀರ್ ಖಾನ್ ಗುಂಪಿನಲ್ಲಿ ಫಾತಿಮಾ ಸನಾ ಶೇಖ್ ಅಭಿನಯಿಸಲಿದ್ದಾರೆ. ಅಮೀರ್ ಪ್ರೀತಿಯಲ್ಲಿ ಬೀಳುವ ಬ್ರಿಟಿಷ್ ಗರ್ಲ್ ಪಾತ್ರದಲ್ಲಿ ಬ್ಯೂಟಿಫುಲ್ ಲೇಡಿ ಕತ್ರಿನಾ ಬಣ್ಣ ಹಚ್ಚಲಿದ್ದಾರೆ" ಎಂದು 'ದಿ ಡೈಲಿ' ವರದಿ ಮಾಡಿದೆ.

  ಫಾತಿಮಾ 'ಆಕ್ಷನ್ ದೃಶ್ಯಕ್ಕೆ ಸಿಕ್ಕ ಉಡುಗೊರೆ'

  ಫಾತಿಮಾ 'ಆಕ್ಷನ್ ದೃಶ್ಯಕ್ಕೆ ಸಿಕ್ಕ ಉಡುಗೊರೆ'

  ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಚಿತ್ರ ನಿರ್ದೇಶನ ಮಾಡುತ್ತಿರುವ ವಿಜಯ್ ಕೃಷ್ಣ ಆಚಾರ್ಯ ರವರು, "ಫಾತಿಮಾ ಪಾತ್ರ ಚಿತ್ರದಲ್ಲಿ ಪ್ರಮುಖವಾಗಿದೆ. ಅವರು 'ಚಿತ್ರದ ಆಕ್ಷನ್ ದೃಶ್ಯಗಳಿಗೆ ಸಿಕ್ಕ ಪ್ರತಿಭಾನ್ವಿತ ಉಡುಗೊರೆ'" ಎಂದು ಹೇಳಿದ್ದಾರೆ.

  ಪ್ರಮುಖ ಪಾತ್ರದಲ್ಲಿ ಫಾತಿಮಾ ಸನಾ ಶೈಖ್

  ಪ್ರಮುಖ ಪಾತ್ರದಲ್ಲಿ ಫಾತಿಮಾ ಸನಾ ಶೈಖ್

  ಇತ್ತೀಚೆಗೆ ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ನಟಿ ಫಾತಿಮಾ ಸನಾ ಶೇಖ್, " ನಾನು 'ದಂಗಲ್' ಚಿತ್ರದಲ್ಲಿ ನಟಿಸದೇ, ಅಮೀರ್ ಖಾನ್ ಸರ್ ಎದುರು ನಟಿಸಲು ಅವಕಾಶ ಸಿಕ್ಕಿದರು ಓಕೆ ಎನ್ನುತ್ತಿದ್ದೆ. ಅಲ್ಲದೇ ಇಂದು ಶಾರುಖ್ ಖಾನ್ ಜೊತೆ ನಟಿಸಲು ಅವಕಾಶ ಬಂದರೂ ಆ ಕ್ಷಣದಲ್ಲಿ ಕ್ಯಾಮೆರಾ ಮುಂದೆ ನಿಲ್ಲಲು ರೆಡಿಯಾಗಿರುತ್ತೇನೆ" ಎಂದಿದ್ದರು.

  English summary
  Superstar Aamir Khan took to micro-blogging site Twitter to confirm leading lady of Bollywood Katrina Kaif’s inclusion to the ‘Thugs of Hindostan’ cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X