»   » ಕತ್ರಿನಾ ಕೈಫ್ ನನಗೆ ಅತ್ತಿಗೆ ಇದ್ದಂತೆ, ಸಲ್ಮಾನ್ ಖಾನ್!

ಕತ್ರಿನಾ ಕೈಫ್ ನನಗೆ ಅತ್ತಿಗೆ ಇದ್ದಂತೆ, ಸಲ್ಮಾನ್ ಖಾನ್!

Posted By:
Subscribe to Filmibeat Kannada

ಅರೆ ಇಸ್ಕಿ.. ಏ ಸಲ್ಲು ಮಿಯಾಕೋ ಕ್ಯಾ ಹೋಗಯಾರೇ.. ಎಂದು ಬಾಲಿವುಡ್ ಜಗಲಿ ಗೊಣಗುಟ್ಟುತ್ತಿದೆಯಂತೆ. ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್ ಹಿಂದೆ ಒಂದು ಕಾಲದಲ್ಲಿ ಗಿರಗಿಟ್ಲೆ ಹೊಡೆಯುತ್ತಿದ್ದ ಸಲ್ಮಾನ್ ಖಾನ್ ಇದ್ದಕ್ಕಿದ್ದಂತೆ ಕತ್ರಿನಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅದು ಏನೂಂದ್ರೆ, ಕತ್ರಿನಾ is just like my sister-in-law (ಅತ್ತಿಗೆ) ಎಂದು ಹೇಳಿಕೆ ನೀಡಿರುವ ಸಲ್ಲೂ, ಬಾಲಿವುಡ್ ನವರು ಮೂಗಿಗೆ ಅಥವಾ ಇನ್ನೆಲ್ಲಾದರೂ ಬೆರಳು ಇಟ್ಟುಕೊಳ್ಳುವ ಹೇಳಿಕೆ ನೀಡಿ ಎಲ್ಲರನ್ನೂ ತಬ್ಬಿಬ್ಬಾಗಿಸಿದ್ದಾರೆ.

ಅದೆನೋಪ್ಪಾ..ಕತ್ರಿನಾ ಇತ್ತೀಚಿನ ದಿನಗಳಲ್ಲಿ ರಣಬೀರ್ ಜೊತೆ ವಿದೇಶದ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿರುವ ಹಸಿಬಿಸಿ ದೃಶ್ಯಗಳು ಬಹಿರಂಗವಾಗುತ್ತಿದ್ದಂತೆ, ಸಲ್ಮಾನ್ ನಾನು ಇದುವರೆಗೆ ಯಾವುದೇ ನಟಿ ಜೊತೆ ಸೆಕ್ಸ್ ನಡೆಸಿಲ್ಲ ಎಂದು ವೈರಾಗ್ಯದ ಹೇಳಿಕೆ ನೀಡಿದ್ದರು.

ಕೆಲವು ದಿನಗಳ ಹಿಂದೆ 'ಕಾಫಿ ವಿದ್ ಕರಣ್'ಟಿವಿ ಶೋನಲ್ಲಿ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ಭಾಗವಹಿಸಿದ್ದರು. ಆ ಸಮಯದಲ್ಲಿ ತನ್ನ ಸೋದರ ಸಂಬಂಧಿ ರಣಬೀರ್ ಕಪೂರ್ ನನ್ನು ಛೇಡಿಸುತ್ತಾ, ರಣಬೀರ್ ಪ್ರೇಯಸಿ ಕತ್ರಿನಾ ಕೈಫ್ ಳನ್ನು ಕರೀನಾ 'ತನ್ನ ಅತ್ತಿಗೆ'ಎಂದಿದ್ದರು.

ಜೈ ಹೋ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನಿಗೆ ಮಾಧ್ಯಮದವರು ಕರೀನಾ ಕಪೂರ್ ಹೇಳಿದ್ದನ್ನು ತಿಳಿಸಿದಾಗ ಖಾರವಾಗಿ ಪ್ರತಿಕ್ರಿಯಿಸಿದ ಸಲ್ಮಾನ್, ಕರೀನಾ ಕಪೂರ್ ನನಗೆ ಅಕ್ಕನ ಹಾಗೆ. ಆಕೆಗೆ ಕತ್ರಿನಾ ಅತ್ತಿಗೆ ಆದ ಮೇಲೆ ನನಗೂ ಕತ್ರಿನಾ ಅತ್ತಿಗೆ ಎಂದು ಹೇಳಿದ್ದಾರೆ. ಅದೀಗ ದೊಡ್ಡ ಸುದ್ದಿಯಾಗಿದೆ.

ಹಲವಾರು ವರ್ಷಗಳ ಕಾಲ ಬಾಲಿವುಡ್ಡಿನ ಹಾಟ್ ಮತ್ತು ಫೇವರೇಟ್ ಜೋಡಿಯಾಗಿದ್ದ ಸಲ್ಮಾನ್ ಮತ್ತು ಕತ್ರಿನಾ ಕೆಲವು ವರ್ಷಗಳ ಹಿಂದೆ ಬೇರ್ಪಟ್ಟಿದ್ದರು.

ರಣಬೀರ್ ಮತ್ತು ಕರೀನಾ ಕಪೂರ್ ಭಾಗವಹಿಸಿದ್ದ ಕಾಫಿ ವಿದ್ ಕರಣ್ ಕಾರ್ಯಕ್ರಮದ ಕೆಲವೊಂದು ಹೈಲೈಟ್ಸ್

ರಣಬೀರ್ ಮತ್ತು ಕರೀನಾ

ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಸ್ಟಾರ್ ವರ್ಲ್ಡ್ ನಲ್ಲಿ ನಡೆಸಿಕೊಡುತ್ತಿರುವ 'ಕಾಫಿ ವಿದ್ ಕರಣ್'ಕಾರ್ಯಕ್ರಮದಲ್ಲಿ ಕರೀನಾ ನಾಲ್ಕು ಸಲ ಭಾಗವಹಿಸಿದ್ದರೆ, ರಣಬೀರ್ ಎರಡು ಸಲ ಭಾಗವಹಿಸಿದ್ದಾರೆ.

ಸೈಫ್ ಆಲಿ ಖಾನ್

ಸೈಫ್ ಆನ್ ಸ್ಕ್ರೀನ್ ನಲ್ಲಿ ಎಂದೂ ಕಿಸ್ ಮಾಡಲಾರ, ಆದರೆ ನಾನು ಮಾಡ ಬಲ್ಲೆ. ಸೈಫ್ ಮಕ್ಕಳ ಬಗ್ಗೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ. ಯಾಕೆಂದರೆ ಮಕ್ಕಳಿಗೆ ಉತ್ತಮ ಪೋಷಕರಿದ್ದಾರೆ, ಕರೀನಾ ಕಪೂರ್

ಸಮಕಾಲೀನ ನಟಿಯರು

ನನ್ನ ಸಮಕಾಲೀನ ನಟಿಯರನ್ನು ನಾನು ದ್ವೇಷಿಸುತ್ತೇನೆ. ಮೊದಲು ದೀಪಿಕಾ ಪಡುಕೋಣೆ ನಂತರ ಮಿಕ್ಕವರು - ಕರೀನಾ ಕಪೂರ್

ಕತ್ರಿನಾ ಕೈಫ್

ನಾನು ಕತ್ರಿನಾಳನ್ನು ಪ್ರೀತಿಸುತ್ತಿದ್ದೇನೆ. ವೈಯಕ್ತಿಕವಾಗಿ ಮತ್ತು ಸಿನಿಮಾ ಜೀವನದಲ್ಲಿ ನಾವು ಸಂತೋಷದಿಂದ ಇದ್ದೇವೆ. ಸಮಯ ಕೂಡಿ ಬಂದಾಗ ಅವಳ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸುತ್ತೇನೆ - ರಣಬೀರ್ ಕಪೂರ್

ಕರೀನಾ ಕಪೂರ್

ರಣಬೀರ್ ಮತ್ತು ಕತ್ರಿನಾ ಮದುವೆಗೆ ಡ್ಯಾನ್ಸ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ. ಅದೂ ಕತ್ರಿನಾಳ ಜನಪ್ರಿಯ 'ಚಿಕ್ನೀ ಚಮೇಲಿ', 'ಶೀಲಾಕಿ ಜವಾನಿ' ಹಾಡಿಗೆ ಡ್ಯಾನ್ಸ್ ಮಾಡುತ್ತೇನೆ - ಕರೀನಾ ಕಪೂರ್

English summary
Katrina Kaif is like my Sister-in-law, Salman Khan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada