Don't Miss!
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- News
ಸರ್ಕಾರದ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ: ಜೆಡಿಎಸ್ ಕಿಡಿ
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕತ್ರಿನಾ ಕೈಫ್ ಸಪೂರ ಸೊಂಟಕ್ಕೆ ಬಾಬಾ ರಾಮ್ ದೇವ್ ಸವಾಲ್
ಬಾಬಾ ರಾಮ್ ದೇವ್ ಅವರ ಯೋಗ ಅಂದ್ರೆ ನಿಮಗೆಲ್ಲಾ ಗೊತ್ತು, ಬಹಳ ಭಿನ್ನ-ವಿಭಿನ್ನ ಭಾವ-ಭಂಗಿಯಲ್ಲಿ ಬಾಬಾ ರಾಮ್ ದೇವ್ ಅವರು ಯೋಗ ಮಾಡುತ್ತಾರೆ. ಈಗಾಗಲೇ ಇವರ ಯೋಗದ ಬಗ್ಗೆ ಹಲವಾರು ಜೋಕ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಇದೀಗ ಕತ್ರಿನಾ ಕೈಫ್ ಅವರ ಸೊಂಟಕ್ಕೂ ಬಾಬಾ ರಾಮ್ ದೇವ್ ಅವರು ಸವಾಲೊಡ್ಡಿದ್ದಾರೆ. ಕತ್ರಿನಾ ಅವರು ಕೊರಿಯೋಗ್ರಾಫರ್ ಹೇಳಿದಂತೆ ತಮ್ಮ ಸಪೂರ ಸೊಂಟ ಬಳುಕಿಸಿದರೆ, ಬಾಬಾ ರಾಮ್ ದೇವ್ ಅವರು ತಮ್ಮದೇ ಆದ ಶೈಲಿಯಲ್ಲಿ ಯೋಗ ಮಾಡುವ ಮೂಲಕ ಸೊಂಟ ಬಳುಕಿಸುತ್ತಾರೆ.[ಬಾಬಾ ರಾಮದೇವ್ ಯೋಗ: ಕುಂದಾಪ್ರ ಕನ್ನಡದ ಜೋಕ್ಸ್]
ಇತ್ತೀಚೆಗಷ್ಟೇ ತೆರೆಕಂಡ ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಬಾರ್ ಬಾರ್ ದೇಖೋ' ಚಿತ್ರದ 'ಕಾಲಾ ಚಷ್ಮಾ' ಹಾಡನ್ನು ಬಾಬಾ ರಾಮ್ ದೇವ್ ಅವರ ಯೋಗಕ್ಕೆ ಹೋಲಿಸಿ, ಕೆಲವು ಕಿಡಿಗೇಡಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.[ಮಾಡೋಕ್ ಬೇರೆ ಕೆಲ್ಸ ಇಲ್ಲ: ಯೂಟ್ಯೂಬ್ ನಲ್ಲಿ ಕಬಾಲಿ 'ತಿಥಿ']

ಬಾಲಿವುಡ್ ಬಾರ್ಬಿ ಡಾಲ್ ಕತ್ರಿನಾ ಕೈಫ್ ತರ ಬಾಬಾ ರಾಮ್ ದೇವ್ ಸೊಂಟ ಬಳುಕಿಸಿದರೆ ಹೇಗಿರುತ್ತೆ, ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ..ಒಮ್ಮೆ ನೋಡಿ ಮನಸಾರೆ ನಕ್ಕು ಬಿಡಿ....
ಇನ್ನು ಬರೀ ರಾಮ್ ದೇವ್ ಮಾತ್ರವಲ್ಲದೇ, ಬಾಲಿವುಡ್ ನ ಖ್ಯಾತ ನಟ ಸನ್ನಿ ಡಿಯೋಲ್ ಅವರಿಗೂ 'ಕಾಲಾ ಚಷ್ಮಾ' ಹಾಡನ್ನು ಹೋಲಿಸಿದ್ದಾರೆ. ಸನ್ನಿ ಡಿಯೋಲ್ ಅವರ ಫನ್ನಿ ಡ್ಯಾನ್ಸ್ ನೋಡಲು ಈ ವಿಡಿಯೋ ನೋಡಿ...
ಇದೆಲ್ಲಾ ಓಕೆ ಬಹುಭಾಷಾ ನಟ ಕಮ್ ನಿರ್ದೇಶಕ ನಾನಾ ಪಾಟೇಕರ್ ಅವರ ಸ್ಟೈಲ್ ನಲ್ಲಿ ಒಮ್ಮೆ ಹಾಗೆ 'ಕಾಲಾ ಚಷ್ಮಾ' ನೋಡಿ...
ಇದೆಲ್ಲಾ ನೋಡ್ತಾ-ನೋಡ್ತಾ ಕೊಂಚ ಅತೀ ಆಯ್ತು ಅಂತ ಅನಿಸಿದ್ರೂ, ಬೇಜಾರಾಗಿದ್ದಾಗ ಒಮ್ಮೆ ನೋಡಿ ಮನಸಾರೆ ನಗಬಹುದು. ಅಸಲಿ ಕಾಲಾ ಚಷ್ಮಾ ವಿಡಿಯೋ ಇಲ್ಲಿದೆ ನೋಡಿ....
ನಿತ್ಯಾ ಮೆಹ್ರಾ ನಿರ್ದೇಶನ ಮಾಡಿರುವ 'ಬಾರ್ ಬಾರ್ ದೇಖೋ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಅದಕ್ಕಿಂತಲೂ ಹೆಚ್ಚಾಗಿ ಈ 'ಕಾಲಾ ಚಷ್ಮಾ' ಹಾಡು ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಬಾರ್ ಬಾರ್ ದೇಖೋ ಟ್ರೈಲರ್ ಇಲ್ಲಿದೆ ನೋಡಿ...