For Quick Alerts
  ALLOW NOTIFICATIONS  
  For Daily Alerts

  ಹನಿಮೂನ್ ಫೋಟೊಗಳನ್ನು ಶೇರ್ ಮಾಡಿದ ಕತ್ರಿನಾ ಕೈಫ್: ವಿಕ್ಕಿ ಕೌಶಲ್ ಎಲ್ಲಿ ಎಂದ ಫ್ಯಾನ್ಸ್?

  |

  ಗುಟ್ಟು ಗುಟ್ಟಾಗಿ ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಎಂಗೇಜ್ ಆಗಿದ್ದರು. ಗುಟ್ಟಾಗಿ ಮದುವೆ ಆಗಲು ನಿರ್ಧರಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ವಿವಾಹ ಬಳಿಕ ಹನಿಮೂನ್‌ಗಾದರೂ ಹೋಗಿ ಬಂದಿದ್ದಾರಾ? ಅನ್ನುವುದು ಅವರ ಅಭಿಮಾನಿಗಳಿಗೆ ಗೊತ್ತಾಗಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಕತ್ರಿನಾ ಕೈಫ್ ಹನಿಮೂನ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

  ಬಾಲಿವುಡ್​ನ ​ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಳೆದ ವರ್ಷ ಡಿಸೆಂಬರ್‌ 9ರಂದು ವಿವಾಹವಾಗಿದ್ದರು. ವಿವಾಹದ ಬಳಿಕವೇ ವಿಕ್ಕಿ ಹಾಗೂ ಕತ್ರಿನಾ ಕೈಫ್ ಹನಿಮೂನ್ ತೆರಳಿದ್ದರು ಎಂದು ಸುದ್ದಿಯಾಗಿತ್ತು. ಆದರೆ, ವಿಕ್ಕಿ ಕೌಶಲ್ ಆಗಲಿ, ಕತ್ರಿನಾ ಕೈಫ್ ಆಗಲಿ ತಮ್ಮ ಹನಿಮೂನ್ ಬಗ್ಗೆ ಎಲ್ಲಿಯೂ ವಿಷಯಗಳನ್ನು ಶೇರ್ ಮಾಡಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಕತ್ರಿನಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಫ್ಯಾನ್ಸ್ ತಮಾಷೆಯಾಗಿ ಕತ್ರಿನಾ ಕಾಲೆಳೆದಿದ್ದಾರೆ.

  ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಫೋಟೊಗಳು

  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ತಮ್ಮ ವೈಯುಕ್ತಿಕ ಸಮಾರಂಭಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಮದುವೆ ದಿನವನ್ನೇ ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಹನಿಮೂನ್‌ಗೆ ವಿಷಯವನ್ನು ಗೌಪ್ಯವಾಗಿ ಇಡುವುದು ಸಹಜವೆನಿಸಿತ್ತು. ಈಗ ಮಾಲ್ಡೀವ್‌ಗೆ ಹನಿಮೂನ್‌ಗೆ ಹೋಗಿದ್ದು, ಅಲ್ಲಿನ ಕೆಲವು ಫೋಟೊಗಳನ್ನು ಕತ್ರಿನಾ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸದ್ಯಕ್ಕೀಗ ವೈರಲ್ ಆಗುತ್ತಿವೆ.

  ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಲ ಕಳೆದ ಸುಂದರ ಕ್ಷಣಗಳನ್ನು ಕತ್ರಿನಾ ಕೈಫ್ ಶೇರ್ ಮಾಡಿದ್ದಾರೆ. ಈ ಫೋಟೊಗಳಿಗ ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ಸದ್ದು ಮಾಡುತ್ತಿವೆ. ಫೋಟೊಗಳ ಶೇರ್ ಮಾಡುವುದರ ಜೊತೆ 'ಮೈ ಹ್ಯಾಪಿ ಪ್ಲೇಸ್' ಎಂದು ಕತ್ರಿನಾ ಕೈಫ್ ಬರೆದುಕೊಂಡಿದ್ದಾರೆ.

  ಕತ್ರಿನಾ ಜೊತೆ ಪತಿ ವಿಕ್ಕಿ ಎಲ್ಲಿ ಎಂದು ಅಭಿಮಾನಿಗಳು

  ಕತ್ರಿನಾ ಶೇರ್ ಮಾಡಿದ ಫೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕತ್ರಿನಾ ಶೇರ್ ಮಾಡಿದ ಪೋಟೊಗಳಲ್ಲಿ ವಿಕ್ಕಿ ಕೌಶಲ್ ಕಾಣಿಸುತ್ತಿಲ್ಲ. ಹೀಗಾಗಿ ಕತ್ರಿನಾ ಫ್ಯಾನ್ಸ್ ತಮಾಷೆಯಿಂದ ಪತಿ ವಿಕ್ಕಿ ಕೌಶಲ್ ಎಲ್ಲಿ ಎಂದು ಕಾಲೆಳೆಯುತ್ತಿದ್ದಾರೆ. ಇದರೊಂದಿಗೆ ಕತ್ರಿನಾಗೆ 'ಕ್ವೀನ್ ಆಫ್ ಮಿಲಿಯನ್ ಹಾರ್ಟ್ಸ್' ಹಾಗೂ 'ಕ್ವೀನ್ ಈಸ್ ಬ್ಯಾಕ್' ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ.

  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ ಸಿನಿಮಾದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ 'ಟೈಗರ್ 3' ಸಿನಿಮಾ ಮುಗಿದಿದೆ. ಫರ್ಹಾನ್ ಅಕ್ತರ್ ನಿರ್ದೇಶನದ 'ಜೀ ಲೇ ಜರಾ' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇತ್ತ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

  English summary
  Bollywood actress Katrina Kaif shares honeymoon photos of maldives. After she shared honeymoon photos, fans asking where is vicky kaushal?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion