For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಮದುವೆಗೆ ಬರುವ ಅತಿಥಿಗಳಿಗೆ ಪೀಕಲಾಟ

  |

  ಡಿಸೆಂಬರ್ ಮೊದಲ ವಾರದಲ್ಲಿ ಬಾಲಿವುಡ್‌ ಜೋಡಿ ಹಕ್ಕಿಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ಈಗಾಗಲೇ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಆದರೆ ಈ ಜೋಡಿ ಮಾತ್ರ ಇನ್ನೂ ತಮ್ಮ ಮದುವೆ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ, ಬಾಲಿವುಡ್‌ನ ದಿಗ್ಗಜರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ.

  ಈಗಾಗಲೇ ರಾಜಸ್ಥಾನದ ಸವಾಯ್ ಮಾದೊಪುರ ಜಿಲ್ಲೆಯಲ್ಲಿ ಈ ಸ್ಟಾರ್ ಹೊಟೇಲ್ ಬಾಲಿವುಡ್ ಜೋಡಿ ಹಕ್ಕಿಗಳ ಮದುವೆಗೆ ಸಿಂಗಾರಗೊಂಡು ಅತಿಥಿಗಳನ್ನು ಸ್ವಾಗತಿಸಲಿದೆ. ಇದೇ ಹೋಟೆಲ್‌ಗೆ ಈಗಾಗಲೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಟಿಕಾಣಿ ಹೂಡಿವೆ. ಒಂದೊಂದು ಕೆಲಸಕ್ಕೆ ಒಂದೊಂದು ಕಂಪನಿಗೆ ಕಾಂಟ್ರಾಕ್ಟ್ ಕೊಟ್ಟಿದು, ಸಿದ್ದತೆಗಳು ಈಗಲೇ ಆರಂಭ ಆಗಿದೆ ಎನ್ನಲಾಗಿದೆ. ಆದರೆ, ಇದೇ ಖುಷಿಯಲ್ಲಿ ಮದುವೆ ಆಗಮಿಸುವ ಅತಿಥಿಗಳಿಗೆ ಪೀಕಲಾಟಕ್ಕೆ ಸಿಲುಕಿದ್ದಾರಂತೆ.

  ಮದುವೆ ಬರುವ ಅತಿಥಿಗಳಿಗೆ ಕತ್ರಿನಾ- ವಿಕ್ಕಿ ಹಾಕಿದ ಕಂಡಿಷನ್

  ಮದುವೆ ಬರುವ ಅತಿಥಿಗಳಿಗೆ ಕತ್ರಿನಾ- ವಿಕ್ಕಿ ಹಾಕಿದ ಕಂಡಿಷನ್

  ಕಳೆದೊಂದು ವಾರದಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ರೂಮರ್ ಮದುವೆ ಬಗ್ಗೆ ನೂರೆಂಟು ಚರ್ಚೆಗಳು ಆಗುತ್ತಿದ್ದರೂ, ಕತ್ರಿನಾ-ವಿಕ್ಕಿ ಕೌಶಲ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಇದೂವರೆಗೂ ಯಾವೊಬ್ಬ ಬಾಲಿವುಡ್ ಸೆಲೆಬ್ರೆಟಿ ಕೂಡ ಈ ಮದುವೆ ಬಗ್ಗೆ ಮಾತಾಡುತ್ತಿಲ್ಲ. ಹೀಗಿದ್ದರೂ, ಇವರ ವಿವಾಹದ ಬಗ್ಗೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದೇನಪ್ಪಾ ಅಂದ್ರೆ, ಮದುವೆ ಬರುವ ಅತಿಥಿಗಳಿಗೆ ಈ ಜೋಡಿ ಒಂದು ಕಂಡೀಷನ್ ಹಾಕಿದ್ಯಂತೆ. ಮದುವೆ ನಡೆಯುವ ಸ್ಥಳಕ್ಕೆ ತಮ್ಮ ಮೊಬೈಲ್ ಫೋನ್ ತರುವಂತಿಲ್ಲ ಎಂದು ಮೊದಲೇ ತಿಳಿಸಲಾಗಿದ್ಯಂತೆ.

  ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಕತ್ರಿನಾ ತಾಕೀತು

  ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಕತ್ರಿನಾ ತಾಕೀತು

  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಜೊತೆ ಈಗಾಗಲೇ ಮಾತಾಡಿದ್ದಾರೆ. ಮದುವೆ ಸಂದರ್ಭದಲ್ಲಿ ಯಾವುದೇ ಅತಿಥಿಯೊಂದಿಗೆ ಮೊಬೈಲ್ ಫೋನ್ ಒಳಗೆ ಬರಬಾರದು. ಒಂದೇ ಒಂದು ಫೋಟೊ ಹಾಗೂ ವಿಡಿಯೋ ಲೀಕ್ ಆಗಬಾರದು ಎಂದು ಸಹಿ ಹಾಕಿಸಿಕೊಂಡಿದ್ದಾರಂತೆ. ಈ ಮಾಹಿತಿಯನ್ನು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಕತ್ರಿನಾ ಕೈಫ್ ಮದುವೆ ಜವಾಬ್ದಾರಿ ವಹಿಸಿಕೊಂಡಿರುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹೇಳಿದೆ.

  ಕತ್ರಿನಾ ಕೈಫ್-ವಿಕ್ಕಿಗೆ ಮರೆಯಲಾಗದ ದಿನ

  ಕತ್ರಿನಾ ಕೈಫ್-ವಿಕ್ಕಿಗೆ ಮರೆಯಲಾಗದ ದಿನ

  ಡಿಸೆಂಬರ್ 7 ರಿಂದ 12ರೊಳಗೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಮದುವೆ ದಿನ ಕತ್ರಿನಾ ಹಾಗೂ ವಿಕ್ಕಿ ಇಬ್ಬರಿಗೂ ವಿಶೇಷ ದಿನವಾಗಿದ್ದು, ಅಂದು ಅವರ ವಿವಾಹದ ಒಂದೇ ಒಂದು ಫೋಟೊ ಲೀಕ್ ಆಗದಂತೆ ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಲೀಕ್ ಆಗಿ ಅವರ ಖಾಸಗಿತನಕ್ಕೆ ತೊಂದರೆ ಆಗದೆ ಇರಲಿ ಅನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತಿದೆ ಬಾಲಿವುಡ್.

  ಪಿಗ್ಗಿ - ನಿಕ್ ಮದುವೆಯಲ್ಲೂ ಮೊಬೈಲ್ ಬ್ಯಾನ್

  ಪಿಗ್ಗಿ - ನಿಕ್ ಮದುವೆಯಲ್ಲೂ ಮೊಬೈಲ್ ಬ್ಯಾನ್

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಮದುವೆ ಕೂಡ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಕೂಡ ಇಬ್ಬರೂ ತಮ್ಮ ಮದುವೆ ಬರುವ ಅತಿಥಿಗಳು ಮೊಬೈಲ್ ತರುವಂತಿಲ್ಲವೆಂದು ತಿಳಿಸಿದ್ದರು. ಈಗ ಅದೇ ದಾರಿಯನ್ನು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕೂಡ ಹಿಡಿದಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದೆ ಬಾಲಿವುಡ್.

  English summary
  Vicky Kaushal and Katrina Kaif banned guests mobile phones at the wedding venue. To ensure safety and security and avoid any leakage of photos from the intimate wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X