For Quick Alerts
  ALLOW NOTIFICATIONS  
  For Daily Alerts

  ವಿಲಿಯಂ ವೈಫ್ ಆಗಬಹುದಿತ್ತು ಕತ್ರಿನಾ ಕೈಫ್!

  |

  ಬ್ರಿಟನ್ ಯುವರಾಜ ಕೇಂಬ್ರಿಜ್ ಡ್ಯೂಕ್ ವಿಲಿಯಂ ಮತ್ತು ಕೇಟ್ ಮಿಡಲ್ ಟನ್ ಮದುವೆ ಮುಗಿದಿದೆ. ಅದಕ್ಕೂ ಮುನ್ನ ವಿಲಿಯಂಗೆ ನಮ್ಮ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸರಿಯಾದ ಜೋಡಿ ಅಂತ ಸಾವಿರಾರು ಜನರು ಅಭಿಪ್ರಾಯಪಟ್ಟಿದ್ರು ಅಂದ್ರೆ ನಂಬ್ತಿರಾ? ಎಲ್ಲಿಯ ಕೈಫ್ ಎಲ್ಲಿಯ ವಿಲಿಯಂ ಅಂತ ತಲೆಕೆಡಿಸಿಕೊಳ್ಳಬೇಡಿ. ಮ್ಯಾಟ್ರಿಮೋನಿಯಲ್ ವೆಬ್ ಸೈಟೊಂದು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಎಲ್ಲರೂ ವಿಲಿಯಂಗೆ ಕತ್ರಿನಾ ಕೈಫ್ ಸೂಪರ್ ಜೋಡಿ ಅಂತ ಬಹುಪರಾಕ್ ಹಾಕಿದ್ದಾರಂತೆ!

  ಶಾದಿಡಾಟ್ ಕಾಮ್ ತಾಣವು ಕತ್ರಿನಾ ಕೈಫ್, ಪ್ರಿಯಾಂಕ ಛೋಪ್ರಾ ಮತ್ತು ಸೋನಾಕ್ಷಿ ಸಿನ್ಹಾ ಇವರಲ್ಲಿ ಯುವರಾಜ ವಿಲಿಯಂಗೆ ಒಪ್ಪುವ ಭಾರತದ ಸೆಲೆಬ್ರಿಟಿ ಯಾರಾಗಬಹುದು ಅಂತ ಸಮೀಕ್ಷೆ ನಡೆಸಿತ್ತು. ಸುಮಾರು 8 ಸಾವಿರದಷ್ಟು ಜನರು ಈ ಮೂರು ಬೆಡಗಿಯರನ್ನು ಮನಸ್ಸಿನಲ್ಲಿಯೇ ವಿಲಿಯಂ ಮುಂದೆ ನಿಲ್ಲಿಸಿ ಅಳೆದು ತೂಗಿ ನೋಡಿದರು. ಎಲ್ಲರೂ ಬ್ರಿಟನ್ ಮೂಲದ ಕತ್ರಿನಾನೇ ವಿಲಿಯಂಗೆ ಸೂಕ್ತ ಜೋಡಿ ಅಂತ ಮತಚಲಾಯಿಸಿದ್ರು.

  ಈ ಸಮೀಕ್ಷೆಯಲ್ಲಿ ಸುಮಾರು ಶೇ. 75. 3ರಷ್ಟು ಜನರ ಓಟು ಕೈಫ್ ಪರವಾಗಿಯೇ ಬಿತ್ತು. ನಮ್ಮ ದೇಶಿ ಗರ್ಲ್ ಪ್ರಿಯಾಂಕ ಮತ್ತು ಸೋನಾಕ್ಷಿಯನ್ನು ಬ್ರಿಟನ್ ಹುಡುಗನಿಗೆ ಕೊಡಲು ಯಾರಿಗೂ ಮನಸ್ಸು ಬರಲಿಲ್ವಂತೆ. ಪ್ರಿಯಾಂಕ ಛೋಪ್ರಾ ವಿಲಿಯಂಗೆ ಬೆಸ್ಟ್ ಜೋಡಿ ಅಂತ ಕೇವಲ ಶೇ. 16.7ರಷ್ಟು ಜನ ಮಾತ್ರ ಓಟ್ ಮಾಡಿದ್ರು. ಸೋನಾಕ್ಷಿ ಅಂತೂ ಬೇಡವೇ ಬೇಡ ಅಂತ ಕೇವಲ ಶೇಕಡಾ 8ರಷ್ಟು ಮಂದಿ ಮಾತ್ರ ಮತಚಲಾಯಿಸಿದ್ರು. ಸದ್ಯ ಕತ್ರಿನಾ ಕೈಫ್ ವಿಲಿಯಂನೊಂದಿಗೆ ಮದುಚಂದ್ರದ ಕನಸು ಕಾಣುತ್ತಿರಬೇಕು. ಹೊಸ ಮದುಮಗಳು ಕೇಟ್ ಕಿವಿಗೆ ಈ ಸುದ್ದಿ ಇನ್ನು ಬಿದ್ದಿಲ್ವಂತೆ!

  English summary
  British born Katrina Kaif has been voted the most ideal Indian celebrity match for Prince William in an online survey by a matrimony website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X