For Quick Alerts
  ALLOW NOTIFICATIONS  
  For Daily Alerts

  ಕೆ.ಎಲ್.ರಾಹುಲ್-ಅಥಿಯಾ ಮದುವೆ ಎಲ್ಲಿ? ಯಾವಾಗ? ಅತಿಥಿಗಳಾರು? ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

  |

  ಕಳೆದ ಕೆಲ ವರ್ಷಗಳಿಂದ ಪ್ರೇಮಿಗಳಾಗಿದ್ದ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.

  ಇವರಿಬ್ಬರ ವಿವಾಹದ ಸುದ್ದಿ ಕಳೆದ ಕೆಲ ತಿಂಗಳಿನಿಂದಲೂ ಗಟ್ಟಿಯಾಗಿ ಕೇಳಿ ಬರುತ್ತಿದೆ. ಇದೀಗ ಇವರ ಮದುವೆ ಸುದ್ದಿ ಖಾತ್ರಿಯಾಗಿದೆ. ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿ ಜನವರಿ 23 ರಂದು ಅದ್ಧೂರಿಯಾಗಿ ವಿವಾಹವಾಗುತ್ತಿದ್ದು, ಇವರ ಮದುವೆಯಲ್ಲಿ ಹಲವು ವಿಶೇಷತೆಗಳು ಇರಲಿವೆ.

  ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರುಗಳ ವಿವಾಹವು ಮುಂಬೈ ಬಳಿಕ ಕಂಡಾಲದ ಫಾರ್ಮ್‌ ಹೌಸ್‌ನಲ್ಲಿ ನಡೆಯಲಿದೆ. ಇದು ಸುನಿಲ್ ಶೆಟ್ಟಿಯವರದ್ದೇ ಫಾರಂ ಹೌಸ್ ಆಗಿದೆ. ನಿನ್ನೆಯಿಂದಲೇ ಅಂದರೆ ಜನವರಿ 21 ರಿಂದಲೇ ಮದುವೆ ಕಾರ್ಯಕ್ರಮಗಳು ಪ್ರಾರಂಭವಾಗಿವೆ.

  ಮೊದಲ ದಿನ ಕಾಕ್‌ಟೇಲ್ ಪಾರ್ಟಿ ಆಯೋಜನೆಗೊಂಡಿತ್ತು. ಈ ಪಾರ್ಟಿಯಲ್ಲಿ ಕುಟುಂಬದ ಆಪ್ತೇಷ್ಟರು, ರಾಹುಲ್‌ರ ಆಪ್ತ ಗೆಳೆಯರು, ಬಾಲಿವುಡ್‌ನ ಕೆಲವು ಗೆಳೆಯರು ಭಾಗಿಯಾಗಿದ್ದರು. ಇಂದು ಅಂದರೆ ಜನವರಿ 22 ರಂದು ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಕೆಲವು ಪ್ರಮುಖ ಗಾಯಕರ-ಗಾಯಕಿಯರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾಡು-ಕುಣಿತ ಜೋರಾಗಿರಲಿದೆ.

  ಜನವರಿ 23 ಅಂದರೆ ನಾಳೆ ವಿವಾಹ ಕಾರ್ಯಕ್ರಮ ನಡೆಯಲಿದ್ದು, ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರ ವಿವಾಹ ನಡೆಯಲಿದೆ. ವಿವಾಹ ಕಾರ್ಯಕ್ರಮಕ್ಕೆ ರಾಹುಲ್‌ರ ಕುಟುಂಬ, ಸುನಿಲ್ ಶೆಟ್ಟಿ ಕುಟುಂಬ, ಎರಡೂ ಕುಟುಂಬಗಳ ಆಪ್ತೇಷ್ಟರು ಹಾಗೂ ಗೆಳೆಯರು ಭಾಗಿಯಾಗಲಿದ್ದಾರೆ.

  ಆ ನಂತರ ಮುಂಬೈನ ಐಶಾರಾಮಿ ಹೋಟೆಲ್ ಒಂದರಲ್ಲಿ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರ ರಿಸೆಪ್ಷನ್ ನಡೆಯಲಿದೆ. ಮುಂಬೈ ಮಾತ್ರವೇ ಅಲ್ಲದೆ ಬೆಂಗಳೂರಿನಲ್ಲಿಯೂ ರಿಸೆಪ್ಷನ್ ನಡೆಯಲಿದೆ. ರಾಹುಲ್-ಅಥಿಯಾ ಶೆಟ್ಟಿ ಆರತಕ್ಷತೆಯಲ್ಲಿ ಕರ್ನಾಟಕದ ಕ್ರಿಕೆಟಿಗರು ಹಾಗೂ ಸುದೀಪ್, ಅಭಿಷೇಕ್ ಅಂಬರೀಶ್ ಇನ್ನಿತರೆ ಸಿನಿಮಾ ತಾರೆಯರು ಸಹ ಭಾಗಿಯಾಗಲಿದ್ದಾರೆ.

  ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರುಗಳು ಕಳೆದ ನಾಲ್ಕು ವರ್ಷಗಳಿಂದಲೂ ಪ್ರೇಮಿಗಳಾಗಿದ್ದಾರೆ. ಇಬ್ಬರ ಮನೆಯವರು ಒಪ್ಪಿ ಮದುವೆ ಮಾಡುತ್ತಿದ್ದು, ಕೆಎಲ್ ರಾಹುಲ್ ಈಗಾಗಲೇ ಮುಂಬೈನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ಅಲ್ಲಿಯೇ ಅಥಿಯಾ ಜೊತೆ ವಾಸಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  KL Rahul and Athiya Shetty marriage. Here is the details. marriage venu, date, time, guests other information is here.
  Sunday, January 22, 2023, 19:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X