»   » ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

Posted By:
Subscribe to Filmibeat Kannada
ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? | Filmibeat Kannada

ಶ್ರೀದೇವಿ ಅವರು ಫೆಬ್ರವರಿ 24 ರಂದು ದುಬೈನ ಹೋಟೆಲ್ ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದರು. ಈ ಸಾವು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿತ್ತು. ಸಂಬಂಧಿಕರ ಮದುವೆಗೆ ಹೋಗಿದ್ದ ಶ್ರೀದೇವಿ ಮದುವೆ ಬಳಿಕವೂ ಅಲ್ಲೇ ಉಳಿದುಕೊಂಡಿದ್ದೇಕೆ.?

ಮದುವೆ ಮುಗಿಸಿಕೊಂಡು ಬಂದಿದ್ದ ಬೋನಿ ಕಪೂರ್ ಮತ್ತೆ ದುಬೈಗೆ ಹೋಗಿದ್ದು ಯಾಕೆ.? ಆ ದಿನ ಹೋಟೆಲ್ ನಲ್ಲಿ ಏನಾಯ್ತು.? ಬೋನಿ ಕಪೂರ್ ಮತ್ತು ಶ್ರೀದೇವಿ ಮಧ್ಯೆ ಆ ದಿನ ನಡೆದಿದ್ದಾರೂ ಏನು ಎಂಬ ಹಲವು ಪ್ರಶ್ನೆಗಳು, ಕುತೂಹಲಗಳು ಜನಸಾಮಾನ್ಯರ ಕಾಡಿದೆ.

ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.!

ಈ ಬಗ್ಗೆ ಈಗ ಸ್ವತಃ ಬೋನಿ ಕಪೂರ್ ಮಾತನಾಡಿದ್ದು, ಶ್ರೀದೇವಿ ಸಾವಿನ ದಿನ ಸಂಪೂರ್ಣ ಘಟನೆಯನ್ನ ಬಹಿರಂಗಪಡಿಸಿದ್ದಾರೆ. ಇದನ್ನ ಚಿತ್ರ ವಿಶ್ಲೇಷಕ ಕೋಮಲ್ ನೆಹ್ತಾ ತಮ್ಮ ಬ್ಕ್ಯಾಗ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ರೆ, ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಹೇಳಿದ್ದೇನು.? ಮುಂದೆ ಓದಿ....

ಮಗಳು ಆತಂಕ ವ್ಯಕ್ತಪಡಿಸಿದ್ದಳು

ಶ್ರೀದೇವಿ ಇದೇ ಮೊದಲ ಬಾರಿಗೆ ದುಬೈನಲ್ಲಿ ಒಬ್ಬಂಟಿಯಾಗಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದು, ಅವರ ಮರೆವಿನ ಅರಿವಿದ್ದ ಪುತ್ರಿ ಜಾಹ್ನವಿ ಪಾಸ್ಪೋರ್ಟ್ ಸೇರಿದಂತೆ ಮುಖ್ಯ ದಾಖಲೆಗಳನ್ನು ಕಳೆದುಕೊಂಡು ಬಿಟ್ಟಾರೂ ಎಂದು ತಂದೆ ಬಳಿ ಆತಂಕ ವ್ಯಕ್ತಪಡಿಸಿದ್ದರು.

ಶ್ರೀದೇವಿಗೆ ಸರ್ಪ್ರೈಸ್ ನೀಡಲು ದುಬೈಗೆ ಹೋದ ಬೋನಿ

ಫೆಬ್ರವರಿ 24 ರಂದು ಬೆಳಿಗ್ಗೆ ಬೋನಿ ಕಪೂರ್ ಶ್ರೀದೇವಿಯವರಿಗೆ ಕರೆ ಮಾಡಿದ್ದು, ಅವರು ''ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ. ಬೋನಿ ಕಪೂರ್ ಮುಂಬೈನಲ್ಲಿನ ಕೆಲ ಕೆಲಸಗಳನ್ನು ಪೂರೈಸಿದ ಬಳಿಕ ಪತ್ನಿಗೆ ಸರ್ಪ್ರೈಸ್ ನೀಡಲೆಂದು 3-30 ರ ಫ್ಲೈಟ್ ಗೆ ದುಬೈ ಟಿಕೆಟ್ ಬುಕ್ ಮಾಡಿಸಿದ್ದು, ಅಲ್ಲಿಗೆ ತೆರಳಿದ್ದಾರೆ. ದುಬೈ ಕಾಲಮಾನ 6-20 ರ ಸುಮಾರಿಗೆ ಶ್ರೀದೇವಿಯವರ ಹೋಟೆಲ್ ರೂಮಿಗೆ ಬೋನಿ ಕಪೂರ್ ಹೋಗಿದ್ದಾರೆ.

ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

ಬೋನಿ ನೋಡಿ ಖುಷಿಯಾದ ಶ್ರೀದೇವಿ

ಪತಿಯನ್ನು ಕಾಣುತ್ತಲೇ ಶ್ರೀದೇವಿಯವರ ಸಂಭ್ರಮ ಇಮ್ಮಡಿಸಿದೆ. ಪತಿ-ಪತ್ನಿ ಲಿವಿಂಗ್ ರೂಮಿನಲ್ಲಿ ಕುಳಿತು ಮಾತನಾಡಿದ್ದು, ಬಳಿಕ ಡಿನ್ನರ್ ಗೆ ಹೊರಗೆ ಹೋಗಲು ನಿರ್ಧರಿಸಿದ್ದಾರೆ. ಸ್ನಾನ ಮಾಡಿ ಬರುವುದಾಗಿ ಹೇಳಿದ ಶ್ರೀದೇವಿ ಬಾತ್ ರೂಮಿಗೆ ಹೋದರೆ ಬೋನಿ ಕಪೂರ್ ಭಾರತ- ದಕ್ಷಿಣ ಅಫ್ರಿಕಾ ತಂಡದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಾ ಕುಳಿತಿದ್ದಾರೆ.

ಎಷ್ಟು ಸಮಯವಾದರೂ ಬರಲಿಲ್ಲ

ಎಷ್ಟು ಹೊತ್ತಾದರೂ ಶ್ರೀದೇವಿ ಹೊರ ಬಾರದ ಕಾರಣ ಲಿವಿಂಗ್ ರೂಮಿನಿಂದಲೇ ಜೋರಾಗಿ ಕೂಗಿದ್ದಾರೆ. ಆದರೆ ಯಾವುದೇ ಉತ್ತರ ಬಂದಿಲ್ಲ. ಟಿವಿ ಸೌಂಡ್ ಕಮ್ಮಿ ಮಾಡಿ ಮತ್ತೊಮ್ಮೆ ಬೋನಿ ಕಪೂರ್ ಕೂಗಿದರೂ ಪ್ರಯೋಜನವಾಗಿಲ್ಲ. ಕಡೆಗೆ ಬೋನಿ ಕಪೂರ್ ಬಾತ್ ರೂಂ ಬಳಿ ತೆರಳಿ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರೂಂ ಬಾಗಿಲು ಹಾಕಿರಲಿಲ್ಲ

ಇದರಿಂದ ಆತಂಕಗೊಂಡ ಬೋನಿ ಕಪೂರ್ ಬಾತ್ ರೂಂ ಬಾಗಿಲು ತಳ್ಳಲು ಯತ್ನಿಸಿದ್ದು, ಒಳಗಿನಿಂದ ಲಾಕ್ ಆಗಿರದ ಕಾರಣ ಸುಲಭವಾಗಿ ತೆರೆದುಕೊಂಡಿದೆ. ಒಳ ನೋಡಿದ ಬೋನಿ ಕಪೂರ್ ಬೆಚ್ಚಿ ಬಿದ್ದಿದ್ದಾರೆ. ಬಾತ್ ಟಬ್ ನೀರಿನಲ್ಲಿ ಶ್ರೀದೇವಿ ಸಂಪೂರ್ಣವಾಗಿ ಮುಳುಗಿರುವುದು ಕಂಡು ಬಂದಿದೆ.

ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

ಬಾತ್ ಟಬ್ ನಲ್ಲಿ ಮುಳುಗಿದ್ದರು

ಗಾಬರಿಗೊಂಡ ಬೋನಿ ಕಪೂರ್ ಆಕೆಯನ್ನು ಮೇಲೆ ಎತ್ತಿ ಎಚ್ಚರಿಸಲು ಯತ್ನಿಸಿದರೂ ಯಾವುದೇ ಚಲನೆ ಕಂಡು ಬಂದಿಲ್ಲ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆದರೆ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಎಲ್ಲ ವಿವರವನ್ನು ಕೋಮಲ್ ನೆಹ್ತಾ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರು

English summary
Film trade analyst Komal Nahta has claimed that Bollywood diva Sridevi's filmmaker husband Boney Kapoor has opened up to him about his final meeting with his wife, a surprise that turned into a tragedy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada