»   » ಶಾರುಖ್ ಚಿತ್ರದ ದಾಖಲೆ ಮುರಿದ ಹೃತಿಕ್ ಕ್ರಿಶ್ 3

ಶಾರುಖ್ ಚಿತ್ರದ ದಾಖಲೆ ಮುರಿದ ಹೃತಿಕ್ ಕ್ರಿಶ್ 3

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮುಸುಕುಧಾರಿ ಮಹಾವೀರ ಮಹಾ ದುಷ್ಟ ಕಾಲ್ ನಿಂದ ಭೂಮಿಯನ್ನು ರಕ್ಷಿಸುವ ಸಿಂಪಲ್ ಕಥೆ ತೆರೆಯ ಮೇಲೆ ವಿಜೃಂಭಿಸುವಂತೆ ಮಾಡುವಲ್ಲಿ ರಾಕೇಶ್ ರೋಷನ್ ಯಶಸ್ವಿಯಾಗಿದ್ದು, ಗ್ರಾಫಿಕ್ಸ್, ಸಾಹಸಮಯ ದೃಶ್ಯಗಳ ಜತೆಗೆ ಹೃತಿಕ್ ರೋಷನ್, ವಿವೇಕ್ ಒಬೆರಾಯ್ ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೆಲ್ಲವೂ ಸಾವಿರ ಕೋಟಿ ನಿರೀಕ್ಷೆಯ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಚೆನ್ನೈ ಎಕ್ಸ್ ಪ್ರೆಸ್ ನ ಎರಡನೇ ದಾಖಲೆ ಮುರಿದಿದೆ.

ವಿಮರ್ಶಕರ ಪೂರ್ಣ ಮೆಚ್ಚುಗೆ ಪಡೆಯುವಲ್ಲಿ ವಿಫಲವಾದ. ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬ ಸೀಸನ್ ನಲ್ಲಿ ಒಂದೇ ದಿನ ಮಾಡಿದ ಗಳಿಕೆ ಚೆನ್ನೈ ಎಕ್ಸ್ ಪ್ರೆಸ್ ಒಂದು ದಿನದ ಗಳಿಕೆ ಮೀರಿಸಿತ್ತು. ಈ ವಿವರವನ್ನು ಈ ಮುಂಚೆ ಇಲ್ಲಿ ಓದಿರುತ್ತೀರಿ.

ಚೆನ್ನೈ ಎಕ್ಸ್ ಪ್ರೆಸ್ ದಾಖಲೆಗಳ ಹಿಂದೆ ಬಿದ್ದಿರುವ ಕ್ರಿಶ್ 3 ಗಳಿಕೆ 100 ಕೊಟಿ ರು ದಾಟಿ ಬೆಳೆದಿದೆಯಲ್ಲದೆ 6 ದಿನಗಳ ಗಳಿಕೆಯಲ್ಲಿ ಶಾರುಖ್ ಅವರ ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದೆ.

ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಂಡ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3, ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ. ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದಾರೆ. ಆದರೆ, ಬಹುತೇಕ ವಿಮರ್ಶಕರು ಇದು ಆವರೇಜ್ ಚಿತ್ರ ಎಂದಿದ್ದಾರೆ.

ಸ್ಕ್ರೀನ್ ಗಳ ಸಂಖ್ಯೆ

ಬಾಕ್ಸಾಫೀಸ್ ನಲ್ಲಿ ಈ ಹಿಂದೆ ಎಲ್ಲಾ ಅಮೀರ್ ಖಾನ್ 3 ಈಡಿಯಟ್ಸ್ ಚಿತ್ರ ಬೆಂಚ್ ಮಾರ್ಕ್ ಆಗಿತ್ತು. ಈಗೆಲ್ಲ ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್ ಆಧಾರವಾಗಿದೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಒಟ್ಟಾರೆ 3500 ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತ್ತು. ಈಗ ಹೃತಿಕ್ ರೋಷನ್ ಅವರ ಕ್ರಿಶ್ 3 ಚಿತ್ರ 4000 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡು ಹೊಸ ದಾಖಲೆ ಬರೆದಿದೆ.

6ನೇ ದಿನಕ್ಕೆ ಮುನ್ನಡೆ

ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ ಚೆನ್ನೈ ಎಕ್ಸ್ ಪ್ರೆಸ್ ದಾಖಲೆ ಮುರಿಯಲು ಆಗದೆ ಹಿಂದೆ ಬಿದ್ದಿದ್ದ ರಾಕೇಶ್ ರೋಷನ್ ಚಿತ್ರ ಆರು ದಿನಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಶಾರುಖ್ ಚಿತ್ರದ ಗಳಿಕೆಯನ್ನು ಹಿಂದೆ ಹಾಕಿದೆ. ಹಿಂದಿ ಚಿತ್ರಗಳ ಗಳಿಕೆ ಸಾಮಾನ್ಯವಾಗಿ ಸೋಮವಾರ ಶೇ 50 ರಷ್ಟು ಇಳಿಮುಖವಾಗುತ್ತದೆ. ಆದರೆ, ಹೃತಿಕ್ ಚಿತ್ರ ಸೋಮವಾರದ ಗಳಿಕೆ ಇಲ್ಲಿ ತನಕ ಬಂದಿರುವ ಎಲ್ಲಾ ಚಿತ್ರಗಳ ಒಂದು ದಿನದ ಗಳಿಕೆ ಮೀರಿಸಿದೆ

ಸದ್ಯದ ದಾಖಲೆಗಳು

* ಬಿಡುಗಡೆಗೊಂಡ ನಾಲ್ಕು ದಿನಗಳಲ್ಲಿ 100 ಕೋಟಿ ರು ಗಳಿಕೆ(ದೇಶಿ ಮಾರುಕಟ್ಟೆಯಲ್ಲಿ ಮಾತ್ರ) ಕಂಡ ಎರಡನೆ ಚಿತ್ರ
* ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೋಮವಾರ ಒಂದೇ ದಿನ ಅತ್ಯಧಿಕ ಮೊತ್ತ ಗಳಿಕೆ ದಾಖಲೆ
* 100 ಕೋಟಿ ರು ಕ್ಲಬ್ ಸೇರಿದ ಹೃತಿಕ್ ರೋಷನ್ ಅವರ ಎರಡನೇ ಚಿತ್ರ ಮೊದಲನೆಯದ್ದು ಅಗ್ನಿಪಥ್

150 ಕೋಟಿ ಕ್ಲಬ್

ಕ್ರಿಶ್ 3 150 ಕೋಟಿ ರು ಗಳಿಕೆ ಕ್ಲಬ್ ಸೇರಿದೆ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್

ಶೀಘ್ರವೇ 200 ಕೋಟಿ ರು

ಕ್ರಿಶ್ 3 ಚಿತ್ರ ಶೀಘ್ರವೇ 200 ಕೋಟಿ ರು ಕ್ಲಬ್ ಸೇರಲಿ. 3 ಈಡಿಯಟ್ಸ್, ಚೆನ್ನೈ ಎಕ್ಸ್ ಪ್ರೆಸ್ ನಂತರ ಮೂರನೇ ಚಿತ್ರ ಇದಾಗಲಿದೆ

ಶಾರುಖ್ ಮೀರಿಸಿದ ರೋಷನ್

ಶಾರುಖ್ -ರೋಹಿತ್ ಶೆಟ್ಟಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಏಳು ದಿನದ ಗಳಿಕೆಯನ್ನು ಆರು ದಿನಗಳಲ್ಲೇ ಕ್ರಿಶ್ 3 ಮೀರಿಸಿದೆ. ಚೆನ್ನೈ ಎಕ್ಸ್ ಪ್ರೆಸ್ ದೇಶಿ ಮಾರುಕಟ್ಟೆಯಲ್ಲಿ ಏಳು ದಿನಗಳಲ್ಲಿ 156.7 ಕೋಟಿ ರು ಗಳಿಸಿತ್ತು., ಕ್ರಿಶ್ 3 ಚಿತ್ರ 6 ದಿನಗಳಲ್ಲಿ 152.98 ಕೋಟಿ ರು ಗಳಿಸಿ ಹೊಸ ದಾಖಲೆ ಬರೆದಿದೆ.

English summary
Hrithik Roshan's Krrish 3 released in 4000 screens across Indian on November 1 and it was expected to beat all the records of Shahrukh Khan's Chennai Express, which has set several new benchmarks with its collection from 3500 screens at the Indian Box Office in the first weekend.
Please Wait while comments are loading...