For Quick Alerts
  ALLOW NOTIFICATIONS  
  For Daily Alerts

  "ಇದಕ್ಕೆ ನೀವು ದಳಪತಿ ಆಗಿರೋದು.. ಬೇಗ ಪಾರ್ಟಿಯಲ್ಲಿ ಸಿಗೋಣ": ವಿಜಯ್‌ ಬಗ್ಗೆ ಶಾರುಕ್ ಟ್ವೀಟ್

  |

  ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಹಿಂದಿಯಲ್ಲಿ ಮಾತ್ರವಲ್ಲದೇ ತಮಿಳು, ತೆಲುಗಿಗೂ ಸಿನಿಮಾ ಡಬ್ ಆಗಿ ತೆರೆಗೆ ಬರ್ತಿದೆ. 2 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೆಲ್ಲದರ ನಡುವೆ ತಮಿಳು ನಟ ದಳಪತಿ ವಿಜಯ್ ಕುರಿತು ನಟ ಶಾರುಕ್ ಆಸಕ್ತಿಕರ ಟ್ವೀಟ್ ಮಾಡಿದ್ದಾರೆ. ಇಂಗ್ಲೀಷ್ ಮಾತ್ರವಲ್ಲದೇ ತಮಿಳಿನಲ್ಲೂ ಅದನ್ನು ಬರೆದಿದ್ದಾರೆ.

  Pathaan Trailer: 'ವನವಾಸ' ಮುಗಿಸಿದ ಶಾರುಕ್: ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕ 'ಪಠಾಣ್'Pathaan Trailer: 'ವನವಾಸ' ಮುಗಿಸಿದ ಶಾರುಕ್: ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕ 'ಪಠಾಣ್'

  'ಪಠಾಣ್' ನಂತರ ಕಿಂಗ್ ಖಾನ್ ಜವಾನ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ಚಿತ್ರಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇದೆಲ್ಲದರ ನಡುವೆ ನಟ ಶಾರುಕ್ ಖಾನ್ ದಕ್ಷಿಣದ ಕಲಾವಿದರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಅದನ್ನು ಮತ್ತಷ್ಟು ವೃದ್ಧಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್, ಶಾರುಕ್ ಭೇಟಿ ಆಗಿದ್ದ ಫೋಟೊಗಳು ಕೂಡ ವೈರಲ್ ಆಗಿತ್ತು.

  ಅಂದಹಾಗೆ 'ಪಠಾಣ್' ಚಿತ್ರದ ತಮಿಳು ವರ್ಷನ್ ಟ್ರೈಲರ್‌ನ ದಳಪತಿ ವಿಜಯ್ ರಿಲೀಸ್ ಮಾಡಿದ್ದಾರೆ. ಅದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಬಾಲಿವುಡ್ ಬಾದ್‌ಶಾ, "ಧನ್ಯವಾದ ಗೆಳೆಯಾ ವಿಜಯ್. ಈ ವಿನಮ್ರತೆಯ ಕಾರಣಕ್ಕೆ ನೀವು ದಳಪತಿ ಎನಿಸಿಕೊಂಡಿರುವುದು. ಆದಷ್ಟು ಬೇಗ ಭೇಟಿ ಆಗೋಣ. ಪಾರ್ಟಿ ಮಾಡೋಣ" ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  Lets meet for delicious feast: Shahrukh Khan gives a Sweet reply to Thalapathy Vijay

  ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಸಿನಿಮಾ ಜನವರಿ 25ಕ್ಕೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಸೈನಿಕನಾಗಿ ಕಾಣಿಸಿಕೊಂಡಿರುವ ಶಾರುಕ್, ದೇಶದ ವಿರುದ್ಧ ಭಯೋತ್ಪಾದಕರ ದಾಳಿಯನ್ನು ತಡೆಯುವ ಸಾಹಸ ಮಾಡಲಿದ್ದಾರೆ. ಯಶ್‌ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಇನ್ನು ಚಿತ್ರದ ತೆಲುಗು ಟ್ರೈಲರ್‌ನ ರಾಮ್‌ಚರಣ್ ತೇಜಾ ರಿಲೀಸ್ ಮಾಡಿದ್ದಾರೆ.

  English summary
  Let's meet for delicious feast: Shahrukh Khan gives a Sweet reply to Thalapathy Vijay. Pathaan Tamil version trailer was shared By Vijay. Soon, Shah Rukh Khan thanked Tamil Actor. know more.
  Tuesday, January 10, 2023, 18:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X