For Quick Alerts
  ALLOW NOTIFICATIONS  
  For Daily Alerts

  ಮಳೆಗಾಗಿ ತಾರೆ ಮಾಧುರಿ ದೀಕ್ಷಿತ್ ಧಕ್ ಧಕ್ ಹಾಡು

  By Rajendra
  |

  ಮಳೆಗಾಗಿ ರಾಜ್ಯದ 34 ಸಾವಿರ ದೇವಸ್ಥಾನಗಳಲ್ಲಿ ಹೋಮ ಹವನ ವಿಶೇಷ ಪೂಜೆಗಾಗಿ ಸರ್ಕಾರ ಆದೇಶಿದೆ. ಆದರೂ ವರುಣದೇವ ಕೃಪೆ ತೋರುತ್ತಿಲ್ಲ. ಕಪ್ಪೆ, ಕತ್ತೆ, ನಾಯಿಗಳ ಮದುವೆ ಮಾಡಿದ್ದಾಯಿತು. ಮಳೆ ಬರುವ ಸೂಚನೆಗಳು ಕಾಣಿಸುತ್ತಿಲ್ಲ. ಮೋಡಗಳು ಮಾತ್ರ ಕಣ್ಣಾಮುಚ್ಚಾಲೆ ಆಡುತ್ತಲೇ ಇವೆ.

  ಇನ್ನೇನು ಮಾಡುವುದು ಎಂದು ಅನ್ನದಾತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಇಂತಹ ಕಡುಕಷ್ಟ ಕಾಲದಲ್ಲಿ ಬಾಲಿವುಡ್ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ವಿಭಿನ್ನವಾಗಿ ವರುಣ ದೇವನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 1997ರಲ್ಲಿ ತೆರೆಕಂಡ 'ದಿಲ್ ತೋ ಫಾಗಲ್ ಹೈ' ಚಿತ್ರದ ಹಿಟ್ ಸಾಂಗನ್ನು ಹಾಡುವ ಮೂಲಕ ವರುಣ ದೇವನನ್ನು ಪ್ರಾರ್ಥಿಸಿದ್ದಾರೆ.

  ಇತ್ತೀಚೆಗೆ ಪುಣೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ತಮ್ಮ ಪತಿ ಡಾ.ಶ್ರೀರಾಮ್ ನೆನೆ ಜೊತೆ ಪಾಲ್ಗೊಂಡಿದ್ದರು. ಪುಣೆಯ ಜನ ನೀರಿಲ್ಲದೆ ಒದ್ದಾಡುತ್ತಿದ್ದಾರೆ. ಒಬ್ಬ ತಾರೆಯಾಗಿ ತಾವೇನು ಮಾಡಲು ಸಾಧ್ಯ. ತಮ್ಮದೇ ಜನಪ್ರಿಯ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಮಳೆ ದೇವರನ್ನು ಪ್ರಾರ್ಥಿಸಿದ್ದಾರೆ.

  ಮಾಧುರಿ ಹಾಡಿಗೆ ವರುಣ ದೇವ ಕನಿಕರಿಸುತ್ತಾನೋ ಇಲ್ಲವೋ ಗೊತ್ತಿಲ್ಲ. ಒಟ್ನಲ್ಲಿ 'ದಿಲ್ ತೋ ಪಾಗಲ್ ಹೈ' ಚಿತ್ರದ "ಚಕ್ ಧೂಮ್ ಧೂಮ್" ಹಾಡನ್ನು ಹಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, "ನಾನು ವೈದ್ಯರೊಬ್ಬರ ಪತ್ನಿಯಾಗಿರುವ ಕಾರಣ ರಕ್ತದಾನದ ಮಹತ್ವವನ್ನು ಸಂಪೂರ್ಣವಾಗಿ ಅರಿತಿದ್ದೇನೆ..." ಎಂದರು.

  ಈ ರಕ್ತದಾನ ಶಿಬಿರದಲ್ಲಿ ಒಟ್ಟು 8,000 ದಾನಿಗಳು ಪಾಲ್ಗೊಂಡಿದ್ದರು. ಸಂಗ್ರಹವಾದ ರಕ್ತವನ್ನು ಮಹಾರಾಷ್ಟ್ರದ ಗ್ರಾಮೀಣ ಭಾಗದ ರಕ್ತದ ಬ್ಯಾಂಕ್ ಗಳಿಗೆ ನೀಡಲಾಗಿದೆ. ಒಟ್ಟಿನಲ್ಲಿ ಮಾಧುರಿ ಹಾಡಿಗೆ ವರುಣ ದೇವ ಕೃಪೆ ತೋರುತ್ತಾನೆ ಎಂದು ಭಾವಿಸೋಣ.

  ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಹೋಮ- ಹವನ ಮತ್ತು ವಿಶೇಷ ಪೂಜೆಗೆ ರಾಜ್ಯ ಸರ್ಕಾರ ಆದೇಶಿಸಿರುವುದು ಗೊತ್ತೇ ಇದೆ. ಸರ್ಕಾರ ಈ ಆದೇಶಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲವಾಗಿದ್ದು ಮೂಢನಂಬಿಕೆ ಪ್ರೋತ್ಸಾಹಿಸಿದಂತೆ ಎಂದು ಟೀಕಿಸಿವೆ.

  ಪ್ರತಿಯೊಂದು ದೇವಸ್ಥಾನದಲ್ಲಿನ ಪೂಜೆಗೆ ಐದು ಸಾವಿರ ರೂಪಾಯಿ ಅಂತ ಲೆಕ್ಕ ಹಾಕಿದರೆ 17 ಕೋಟಿ ರೂ. ಬೇಕಾಗುತ್ತದೆ. ಈ ಹಣವನ್ನು ಜಾನುವಾರುಗಳಿಗೆ ಮೇವು ಖರೀದಿಸಲು ಬಳಸಿದರೆ ಉಪಕಾರ ಮಾಡಿದಂತಾಗುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವೆ. (ಪಿಟಿಐ)

  English summary
  Bollywood diva Madhuri Dixit joined Punekars in their prayers to God for more rains to the water-starved city when she recited a few lines of a 'rain song' from one of her earlier movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X