For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಪ್ರಶಸ್ತಿ ರೇಸಿನಲ್ಲಿ ಜಾನ್ 'ಮದ್ರಾಸ್ ಕೆಫೆ'

  By ಜೇಮ್ಸ್ ಮಾರ್ಟಿನ್
  |

  ಜಾನ್ ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರ ರಾಷ್ಟ್ರಪ್ರಶಸ್ತಿಗೆ ನಾಮಾಂಕಿತಗೊಂಡಿದೆ.ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಂದು ಕಡೆಯಾದರೆ, ಚಿತ್ರದ ಪ್ರಿವ್ಯೂ ನೋಡಿದ ಬಾಲಿವುಡ್ ಮಂದಿ ಬಹುಪರಾಕ್ ಎಂದಿದ್ದರು. ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರ ಈಗ ರಾಷ್ಟ್ರಪ್ರಶಸ್ತಿ ರೇಸಿನಲ್ಲಿದೆ.

  ಶೂಜಿತ್ ಸರ್ಕಾರ್ ಅವರ ಮದ್ರಾಸ್ ಕೆಫೆ ಚಿತ್ರದಲ್ಲಿ ಎಲ್ಲವೂ ಇದೆ ನೋವು, ನಲಿವು, ಹತಾಶೆ, ಸಂಚು, ದ್ರೋಹ, ದೇಶ, ಭಾಷೆ, ಗಡಿ, ಹೀರೋಯಿಸಂ ಜತೆಗೆ ಚಿತ್ರಕ್ಕೆ ಕಥೆ, ನಟನೆ, ನಿರ್ದೇಶನ ಪೂರಕವಾಗಿದೆ. ಶ್ರೀಲಂಕಾದ ನಾಗರಿಕ ಸಮರ, ರಾಜಕೀಯ ಸ್ಥಿತ್ಯಂತರ, 80 ಹಾಗೂ 90 ರ ದಶಕದಲ್ಲಿ ಶ್ರೀಲಂಕಾ ತಮಿಳರ ಅಮಾನವೀಯ ಹತ್ಯೆ ಎಲ್ಲವೂ ಸೂಕ್ತವಾಗಿ ಚಿತ್ರಿತವಾಗಿದೆ. [ವಿವಾದಗಳ ಬಗ್ಗೆ ಓದಿ]

  ಒಳ್ಳೆ ರಾಜಕೀಯ ಥ್ರಿಲ್ಲರ್ ಚಿತ್ರ, ಹಾಲಿವುಡ್ ನ ಬ್ಲಡ್ ಡೈಮಂಡ್ ನ ರೀತಿಯ ದೃಶ್ಯಗಳು, ಪಾತ್ರಕ್ಕೆ ತಕ್ಕ ನಟರ ಆಯ್ಕೆ ವಿಶೇಷವಾಗಿ ಬಾಲ ಪಾತ್ರಧಾರಿ ಪ್ರಕಾಶ್ ಬೆಳವಾಡಿ, ಜೂಹಿ ಚತುರ್ವೇದಿ ಡೈಲಾಗ್ಸ್ , ಸೂಕ್ತವಾದ ಹಿನ್ನೆಲೆ ಸಂಗೀತ, ಕೆಲವೊಮ್ಮೆ ಅನಗತ್ಯ ಎನಿಸಿದರೂ ಹಿತವಾದ ಹಾಡು ಚಿತ್ರವನ್ನು ನೋಡುವಂತೆ ಮಾಡಿತ್ತು. ಕೆಲ ಸೀನ್ ಗಳನ್ನು ಕತ್ತರಿಸಿದರೆ ಚಿತ್ರ ಇನ್ನಷ್ಟು ಟ್ರಿಮ್ ಆಗಿ ಉತ್ತಮವಾಗಿ ಕಾಣುತ್ತದೆ ಎಂದು ವಿಮರ್ಶಕರು ಹೊಗಳಿದ್ದರು. [ವಿಮರ್ಶಕರ ವಿಮರ್ಶೆ ಓದಿ]

  ಬಾಲಿವುಡ್ ಸಿದ್ದಸೂತ್ರಗಳನ್ನು ಧಿಕ್ಕರಿಸಿ ನಿಲ್ಲುವ ಇಂಥ ಚಿತ್ರಗಳಿಗೆ ಪ್ರೋತ್ಸಾಹ ನೀಡಲೇಬೇಕು. ರಾಜಕೀಯ, ಯುದ್ಧ, ಮಾನವೀಯತೆ, ಯುದ್ಧ, ನೋವು ಹಿಂಸೆ ಎಲ್ಲವೂ ಸಹ್ಯವಾಗಿ ಒಂದು ಪ್ಯಾಕೇಜ್ ನಲ್ಲಿದೆ ಉತ್ತಮ ನಟನೆ, ಚಿತ್ರಕಥೆ, ಬೋರ್ ಹೊಡೆಸದ ಡೈಲಾಗ್ಸ್ ಗಾಗಿ ಚಿತ್ರವನ್ನು ನೋಡಿ ಎಂದು ಬಾಯಿ ಮಾತಿನ ಪ್ರಚಾರದಿಂದ ಚಿತ್ರ ಏಳಿಗೆ ಕಂಡಿತ್ತು. ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ವಿವಾದಗಳ ಹೊರತಾಗಿ ಚಿತ್ರ ಜನ ಮೆಚ್ಚುಗೆ ಗಳಿಸಿತ್ತು.

  English summary
  John Abraham-Nargis Fakhri starrer Madras Cafe, directed by Shoojit Sircar has been nominated for National awards. Ever since its release on August 23rd 2013, Sircar has been receiving accolades for his honest and genuine attempt in showcasing the real political events associated with the Sri Lankan civil war and the ideas of a rebel group.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X