twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ: ಷರತ್ತುಗಳು ಅನ್ವಯ!

    |

    ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿರುವ ಸಿನಿಮಾ, ಧಾರಾವಾಹಿ ಮತ್ತು ವೆಬ್ ಸೀರೀಸ್‌ಗಳ ಚಿತ್ರೀಕರಣಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ, ತಮಿಳು ನಾಡು ಸರ್ಕಾರಗಳು ಒಂದು ವಾರದ ಹಿಂದೆಯೇ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದವು. ಆದರೆ ಸಿನಿಮಾಗಳ ಚಿತ್ರೀಕರಣಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

    ಈ ನಡುವೆ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿವೆ. ಅದಕ್ಕೆ ಕಠಿಣ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಾಗಿದೆ.

    ಸಿನಿಮಾ ಚಿತ್ರೀಕರಣ, ಪ್ರದರ್ಶನಕ್ಕೆ ಅನುಮತಿಗಾಗಿ ಮುಖ್ಯಮಂತ್ರಿಗೆ ನಿಯೋಗ ಮನವಿಸಿನಿಮಾ ಚಿತ್ರೀಕರಣ, ಪ್ರದರ್ಶನಕ್ಕೆ ಅನುಮತಿಗಾಗಿ ಮುಖ್ಯಮಂತ್ರಿಗೆ ನಿಯೋಗ ಮನವಿ

    ಮಹಾರಾಷ್ಟ್ರ ಸರ್ಕಾರವು 16 ಪುಟಗಳ ಮಾರ್ಗಸೂಚಿಯನ್ನು ನೀಡಿದೆ. ಚಿತ್ರೀಕರಣದ ಸ್ಥಳದಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು, ಸ್ವಚ್ಛತಾ ವಿಧಾನಗಳನ್ನು ಅನುಸರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮುಂದೆ ಓದಿ...

    ಜಿಲ್ಲಾಡಳಿತದ ಅನುಮತಿ ಕಡ್ಡಾಯ

    ಜಿಲ್ಲಾಡಳಿತದ ಅನುಮತಿ ಕಡ್ಡಾಯ

    ರಾಜ್ಯ ಸರ್ಕಾರ ಚಿತ್ರೀಕರಣ ಪ್ರಾರಂಭಿಸಲು ಅನುಮತಿ ನೀಡಿದ್ದರೂ, ಶೂಟಿಂಗ್ ನಡೆಸುವಾಗ ಆಯಾ ಪ್ರದೇಶದ ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯ. ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಸಲು ಸಹ ಅನುಮತಿ ಪಡೆಯಬೇಕು. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳಿಗೆ (ಎಸ್‌ಒಪಿ) ನಿರ್ಮಾಣ ಸಂಸ್ಥೆಗಳು ಬದ್ಧರಾಗಿರಬೇಕು.

    ಸಿನಿಮಾ, ವೆಬ್ ಸೀರೀಸ್ ರದ್ದು

    ಸಿನಿಮಾ, ವೆಬ್ ಸೀರೀಸ್ ರದ್ದು

    ಹಿಂದಿಯ ಸುಮಾರು 70 ಚಿತ್ರಗಳು, 40 ಮರಾಠಿ ಸಿನಿಮಾಗಳು ಮತ್ತು 10 ವೆಬ್ ಸೀರೀಸ್‌ಗಳ ಚಿತ್ರೀಕರಣ ಮಾರ್ಚ್ 17ರಿಂದ ರದ್ದುಗೊಂಡಿದ್ದವು. ಅಂದಾಜಿನ ಪ್ರಕಾರ ಹಿಂದಿ ಕಿರುತೆರೆಯಲ್ಲಿ ಪ್ರತಿ ವರ್ಷ 30,000 ಎಪಿಸೋಡ್‌ಗಳಷ್ಟು ಚಿತ್ರೀಕರಣ ನಡೆಯುತ್ತವೆ.

    ಧಾರಾವಾಹಿಗಳ ಶೂಟಿಂಗ್ ಅಷ್ಟು ಸುಲಭವಲ್ಲ: ಸವಾಲುಗಳು ಹೇಗಿವೆ ಗೊತ್ತೇ?ಧಾರಾವಾಹಿಗಳ ಶೂಟಿಂಗ್ ಅಷ್ಟು ಸುಲಭವಲ್ಲ: ಸವಾಲುಗಳು ಹೇಗಿವೆ ಗೊತ್ತೇ?

    ಸಂಕಷ್ಟದಲ್ಲಿ ಕಲಾವಿದರು, ತಂತ್ರಜ್ಞರು

    ಸಂಕಷ್ಟದಲ್ಲಿ ಕಲಾವಿದರು, ತಂತ್ರಜ್ಞರು

    ಧಾರಾವಾಹಿ, ಸಿನಿಮಾಗಳ ಚಿತ್ರೀಕರಣವಿಲ್ಲದೆ ಸಾವಿರಾರು ಕಾರ್ಮಿಕರು ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುವವರು ಮಾತ್ರವಲ್ಲ, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದ ಕಲಾವಿದರೂ ಆತಂಕಕ್ಕೆ ಒಳಗಾಗಿದ್ದಾರೆ. ಅನೇಕ ಧಾರಾವಾಹಿಗಳು ನಿಂತು ಹೋಗಿರುವುದರಿಂದ ಕೆಲಸ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಳ್ಳಲೂ ಇದೇ ಕಾರಣ ಎಂದು ಹೇಳಲಾಗಿದೆ.

    ಉದ್ಧವ್ ಠಾಕ್ರೆಗೆ ಮನವಿ

    ಉದ್ಧವ್ ಠಾಕ್ರೆಗೆ ಮನವಿ

    ಹಿಂದಿ ಟೆಲಿವಿಷನ್ ಮೇಲೆ ಸುಮಾರು 5,000 ಕೋಟಿ ರೂ, ಮರಾಠಿ ಕಿರುತೆರೆ ಮೇಲೆ ಸುಮಾರು 250 ಕೋಟಿ ರೂ ಹೂಡಿಕೆ ಮಾಡಲಾಗಿದೆ. ಹೀಗಾಗಿ ಚಿತ್ರೀಕರಣ ಪ್ರಾರಂಭಿಸಲು ಅನುಮತಿ ನೀಡುವಂತೆ ನಿಯೋಗವೊಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿತ್ತು.

    ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

    35 ಜನರಿಗೆ ಮಾತ್ರ ಅವಕಾಶ

    35 ಜನರಿಗೆ ಮಾತ್ರ ಅವಕಾಶ

    ಪಶ್ಚಿಮ ಬಂಗಾಳ ಸರ್ಕಾರವು ಜೂನ್ 1ರಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಆದರೆ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಗರಿಷ್ಠ 35 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ಸಿನಿಮಾ ಸೆಟ್‌ನಲ್ಲಿ ತಂತ್ರಜ್ಞರು, ಕಲಾವಿದರು, ಸಹಾಯಕರು ಸೇರಿದಂತೆ ಕನಿಷ್ಠ 100 ಜನರ ಅಗತ್ಯವಿರುತ್ತದೆ. ಹೀಗಾಗಿ ಈ ನಿರ್ಬಂಧದ ಮಧ್ಯೆ ಚಿತ್ರೀಕರಣ ನಡೆಸುವುದು ಕಷ್ಟ ಎಂದು ಬೆಂಗಾಳಿ ಚಿತ್ರರಂಗ ಹೇಳಿದೆ.

    English summary
    Maharashtra and West Bengal governments allowed to start film, tv and web series works and issues guidelines.
    Monday, June 1, 2020, 10:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X