ಫುಟ್ ಬಾಲ್ ಕೋಚ್ ಆದ ಅಜಯ್ ದೇವಗನ್ : ಬಾಲಿವುಡ್ ಪ್ರವೇಶಿಸಿದ ಮಹಾನಟಿ

'ಸೂಪರ್ 30' ಹಾಗೂ 'ಮಿಷನ್ ಮಂಗಲ್' ಚಿತ್ರಗಳ ಬಳಿಕ ಬಾಲಿವುಡ್ ನಲ್ಲಿ ಇದೀಗ ಮತ್ತೊಂದು ರಿಯಲ್ ಸ್ಟೋರಿ ಸಿನಿಮಾ ಶುರುವಾಗಿದೆ. 1952 - 1962 ರವರೆಗಿನ ಭಾರತದ ಫುಟ್ ಬಾಲ್ ಆಟದ ಬಂಗಾರದ ಕಥೆಯನ್ನು ಸಿನಿಮಾ ಹೇಳುತ್ತಿದೆ.

ಅಜಯ್ ದೇವಗನ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಂದಿನ ಫುಟ್ ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ 'ಮೈದಾನ್' ಎನ್ನುವ ಹೆಸರು ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ವಿಶೇಷ ಅಂದರೆ, ಸೌತ್ ನಟಿ ಕೀರ್ತಿ ಸುರೇಶ್ ಸಿನಿಮಾದ ನಾಯಕಿಯಾಗಿದ್ದಾರೆ. ಇತ್ತೀಚಿಗಷ್ಟೆ ರಾಷ್ಟ್ರ ಪ್ರಶಸ್ತಿ ಪಡೆದ ಈ ಮಹಾನಟಿ ಈಗ ಬಾಲಿವುಡ್ ಪ್ರವೇಶಿಸಿದ್ದಾರೆ. ಈಗಾಗಲೇ ತೆಲುಗಿನ ಅನೇಕ ನಟಿಯರು ಹಿಂದಿ ಸಿನಿಮಾ ಮಾಡುವ ಅವಕಾಶ ಪಡೆದಿದ್ದು, ಈಗ ಕೀರ್ತಿ ಸುರೇಶ್ ಗೆ ಕಾಲ ಕೂಡಿ ಬಂದಿದೆ.

Maidaan Hindi Movie First Look Out

1951 ಮತ್ತು 1962 ರ ವೇಳೆ ಏಷಿಯನ್ ಗೇಮ್ಸ್ ನಲ್ಲಿ ಭಾರತ ಫುಟ್ ಬಾಲ್ ತಂಡ ವಿಜಯ ಸಾಧಿಸಿತ್ತು. ಇದಕ್ಕೆ ಪ್ರಮುಖ ಕಾರಣ ಆಗಿದ್ದವರು ಕೋಚ್ ಸೈಯದ್ ಅಬ್ದುಲ್ ರಹೀಮ್. ಇದೇ ಕಥೆಯನ್ನು ಸಿನಿಮಾ ಹೊಂದಿದೆ.

Maidaan Hindi Movie First Look Out

ಅಮಿತ್ ಶರ್ಮ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಬೋನಿ ಕಪೂರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. 2020ರಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. 2018 ರಲ್ಲಿ ಶುರುವಾಗಿದ್ದ ಸಿನಿಮಾಗೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

More from Filmibeat

English summary
Actor Ajay Devgn and Keerthy Suresh's 'Maidaan' hindi movie first look out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X