For Quick Alerts
  ALLOW NOTIFICATIONS  
  For Daily Alerts

  ಚೆನ್ನಾಗಿ ಮುತ್ತು ಕೊಡುವ ಪುರುಷರು ನನಗಿಷ್ಟ: ಮಲೈಕಾ ಅರೋರ

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ಮಲೈಕಾ ಅರೋರ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದಿಂದ, ತಮ್ಮ ಗ್ಲಾಮರಸ್ ಮೈಮಾಟದಿಂದ ಸುದ್ದಿಯಾದವರು.

  ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್‌ ಜೊತೆಗೆ ವಿವಾಹವಾಗಿದ್ದ ಮಲೈಕಾ ಅರೋರಾಗೆ ಒಬ್ಬ 9 ವರ್ಷದ ಮಗನಿದ್ದಾನೆ. ಆದರೆ 2016ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರ ದೂರಾಗಿದ್ದು ವಿಚ್ಛೇಧನ ಪಡೆದಿದ್ದಾರೆ. ವಿಚ್ಛೇಧನದ ಬಳಿಕ ಮಲೈಕಾ ಅರೋರ ಯುವ ನಟ ಅರ್ಜುನ್ ಜೊತೆಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

  ಮಲೈಕಾ ಅರೋರಾಗೆ ಈಗ 47 ವರ್ಷ ವಯಸ್ಸಾದರೆ ಅರ್ಜುನ್ ಕಪೂರ್‌ಗೆ 36 ವರ್ಷ. ಇವರಿಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿಯೇ ಈ ಇಬ್ಬರ ಸಂಬಂಧ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಗೆ ಗುರಿಯಾಗಿದೆ.

  ಬಹಿರಂಗವಾಗಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮಲೈಕಾ ಅರೋರಾ ವ್ಯಕ್ತಿತ್ವವೂ ಸಹ ಬಹಳ ಬೋಲ್ಡ್. ಇದೀಗ ಸೂಪರ್‌ ಮಾಡೆಲ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಮಲೈಕಾ, ಸಹ ಜಡ್ಜ್ ಮಿಲಿಂದ್ ಸುಮನ್ ಜೊತೆಗೆ ಮಾತನಾಡುತ್ತಾ, ಯಾವ ರೀತಿಯ ಪುರುಷರು ತಮಗೆ ಇಷ್ಟವಾಗುತ್ತಾರೆ, ಯಾವ ರೀತಿಯ ಪುರುಷರು ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

  ಯಾವ ರೀತಿಯ ಪುರುಷರು ಉದ್ದೀಪನಗೊಳಿಸುತ್ತಾರೆ?

  ಯಾವ ರೀತಿಯ ಪುರುಷರು ಉದ್ದೀಪನಗೊಳಿಸುತ್ತಾರೆ?

  ಯಾವ ರೀತಿಯ ಪುರುಷರು ನಿಮ್ಮನ್ನು ಉದ್ದೀಪನಗೊಳಿಸುತ್ತಾರೆ ಎಂಬ ಮಿಲಿಂದ್ ಸುಮನ್‌ನ ಪ್ರಶ್ನೆಗೆ ಉತ್ತರಿಸಿರುವ ಮಲೈಕಾ ಅರೊರಾ, ''ರಫ್ ಆಗಿರುವ ಪುರುಷರು, ಗಂಭೀರವಾಗಿ ಫ್ಲರ್ಟ್ ಮಾಡುವ ಪುರುಷರು ಹಾಗೂ ಬಹಳ ಚೆನ್ನಾಗಿ ಕಿಸ್‌ ಮಾಡುವ ಪುರುಷರು ನನಗೆ ಇಷ್ಟವಾಗುತ್ತಾರೆ'' ಎಂದಿದ್ದಾರೆ ಮಲೈಕಾ. ''ಬೇರೊಬ್ಬರ ಬಗ್ಗೆ ಗಾಸಿಪ್ ಮಾಡುವ ಪುರುಷರು ನನಗೆ ಇಷ್ಟವಾಗುವುದಿಲ್ಲ'' ಎಂದಿದ್ದಾರೆ ಮಲೈಕಾ.

  ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು ಯಾರು?

  ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು ಯಾರು?

  ಯಾರು ನಿಮ್ಮನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಲೈಕಾ, 'ಅರ್ಜುನ್ ಕಪೂರ್ ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆತನಿಗೆ ನನ್ನ ಒಳಗು, ಹೊರಗುಗಳೆಲ್ಲವೂ ಗೊತ್ತು. ನನ್ನ ಮನಸ್ಸನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದಾನೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ, ನನ್ನೊಂದಿಗೆ ಚೆನ್ನಾಗಿ ಹುಡುಗಾಟವೂ ಆಡುತ್ತಾನೆ'' ಎಂದಿದ್ದಾರೆ ಮಲೈಕಾ.

  ಅರ್ಜುನ್ ಕಪೂರ್‌ಗೆ ಕಳಿಸಿದ ಕೊನೆಯ ಸಂದೇಶ ಯಾವುದು?

  ಅರ್ಜುನ್ ಕಪೂರ್‌ಗೆ ಕಳಿಸಿದ ಕೊನೆಯ ಸಂದೇಶ ಯಾವುದು?

  ಅರ್ಜುನ್ ಕಪೂರ್‌ಗೆ ಕಳಿಸಿದ ಕೊನೆಯ ಮೊಬೈಲ್ ಸಂದೇಶ ಯಾವುದು ಎಂಬ ಪ್ರಶ್ನೆಗೆ, 'ಐ ಲವ್ ಯು ಟೂ' ಎಂದು ಕಳಿಸಿದ್ದೇನೆ ಎಂದಿದ್ದಾರೆ ಮಲೈಕಾ ಅರೋರ. ಯಾವ ನಟ ಹಾಗೂ ನಟಿ ಮೇಲೆ ನಿಮಗೆ ಕ್ರಶ್ ಇದೆ ಎಂಬುದಕ್ಕೆ ಉತ್ತರಿಸಿ, ಜೇಮ್ಸ್ ಬಾಂಡ್ ಪಾತ್ರಧಾರಿ ಡ್ಯಾನಿಯಲ್ ಕ್ರೇಗ್ ನನಗೆ ಬಹಳ ಇಷ್ಟ. ಮಹಿಳೆಯರಲ್ಲಿ ಮಾಡೆಲ್ ಬೆಲ್ಲಾ ಹದಿದ್ ಬಹಳ ಇಷ್ಟ ಎಂದಿದ್ದಾರೆ. ಡ್ಯಾನಿಯಲ್ ಕ್ರೇಗ್ ಚಿಕ್ಕ ಚಡ್ಡಿ ಧರಿಸಿ ಸಮುದ್ರದಿಂದ ಹೊರಗೆ ನಡೆದುಕೊಂಡು ಬರುತ್ತಿರುವ ದೃಶ್ಯವಂತೂ ನನ್ನ ಹಾಟ್ ಫೇವರೇಟ್ ಎಂದಿದ್ದಾರೆ ನಟಿ ಮಲೈಕಾ.

  ನೃತ್ಯದಿಂದಲೇ ಬಾಲಿವುಡ್‌ನಲ್ಲಿ ಹೆಚ್ಚು ಪರಿಚಿತರು

  ನೃತ್ಯದಿಂದಲೇ ಬಾಲಿವುಡ್‌ನಲ್ಲಿ ಹೆಚ್ಚು ಪರಿಚಿತರು

  ಮಲೈಕಾ ಅರೋರಾ ನಟನೆಗಿಂತಲೂ ತಮ್ಮ ನೃತ್ಯದಿಂದ ಬಾಲಿವುಡ್‌ನಲ್ಲಿ ಹೆಚ್ಚು ಪರಿಚಿತರು. ಶಾರುಖ್ ನಟನೆಯ 'ದಿಲ್ ಸೇ' ಸಿನಿಮಾದ ಚಯ್ಯಾ-ಚಯ್ಯಾ ಹಾಡಿನ ಮೂಲಕ ಸಿನಿಮಾಗಳಲ್ಲಿ ನೃತ್ಯ ಆರಂಭಿಸಿದ ಮಲೈಕಾ, ಹಲವಾರು ಸಿನಿಮಾಗಳ ಹಿಟ್ ಐಟಂ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 'ಕಾಂಟೆ', 'ಬಿಚ್ಚು', 'ಕಾಲ್', 'ಹೇ ಬೇಬಿ', 'ವೆಲ್‌ಕಮ್', 'ಹೌಸ್‌ಫುಲ್' 'ದಬಂಗ್' 'ದಬಂಗ್ 2' ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ಮಲೈಕಾ ಅರೋರಾ ನೃತ್ಯ ಮಾಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ನಟಿಸಿರುವ 'ಗಬ್ಬರ್ ಸಿಂಗ್' ಸಿನಿಮಾದಲ್ಲಿಯೂ ಐಟಂ ಹಾಡಿಗೆ ನರ್ತಿಸಿದ್ದಾರೆ ಮಲೈಕಾ. 'ದಬಂಗ್', 'ದಬಂಗ್ 2' ಹಾಗೂ 'ಡಾಲಿ ಕಿ ಡೋಲಿ' ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ ಮಲೈಕಾ ಅರೋರ.

  English summary
  Actress Malaika Arora said she likes men who kisses really well. She also told that Arjun Kapoor knows her very well and understands her very well.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X