»   » ಮಲ್ಲಿಕಾ ನಡುರಾತ್ರಿ ಪ್ರೋಗ್ರಾಂಗೆ 1.5 ಕೋಟಿ

ಮಲ್ಲಿಕಾ ನಡುರಾತ್ರಿ ಪ್ರೋಗ್ರಾಂಗೆ 1.5 ಕೋಟಿ

By: ಉದಯರವಿ
Subscribe to Filmibeat Kannada

ಇದು ಒಂದು ರೀತಿ 'ನಡು'ವಿಗೆ ಸಂಬಂಧಿಸಿದ ವಿಚಾರ. ಬಾಲಿವುಡ್ ಬಳುಕುವ ಚೆಲುವೆಯರೆಲ್ಲಾ ಈಗಾಗಲೆ 'ನಡು'ರಾತ್ರಿ ಕಾರ್ಯಕ್ರಮಗಳಿಗೆ ಬುಕ್ ಆಗಿದ್ದಾರೆ. ನಡುಕುಣಿಸಲು ಸಾಧ್ಯವಾಗದಿದ್ದವರು ನೆಲ ಡೊಂಕು ಎನ್ನುತ್ತಿದ್ದಾರೆ.

ಅಸಲಿ ವಿಷಯ ಏನೆಂದರೆ 2013ರ ಹೊಸವರ್ಷದ ಸ್ವಾಗತಕ್ಕೆ ಬಾಲಿವುಡ್ ನಟಿಯರು ಟೊಂಕ ಕಟ್ಟಿ ನಿಂತಿದ್ದಾರೆ. ಕೆಲವರು ನಮ್ಮ ದೇಶದಲ್ಲೇ ಝಣ ಝಣ ಕಾಂಚಾಣ ಎಣಿಸುತ್ತಿದ್ದರೆ. ಪಂಚತಾರಾ, ಸಪ್ತತಾರಾ ಹೋಟೆಲ್ ಗಳೆಲ್ಲಾ ಬಾಲಿವುಡ್ ತಾರೆಗಳ ಹಿಂದೆ ಬಿದ್ದಿವೆ. ಆದರೆ ಮಲ್ಲಿಕಾ ಶೆರಾವತ್ ಮಾತ್ರ ಲಾಸ್ ಏಂಜಲೀಸ್ ನಲ್ಲಿ ಕುಣಿಯಲು ಮುಂಗಡ ಬುಕ್ ಆಗಿದ್ದಾರೆ.


ಇದಕ್ಕಾಗಿ ಅವರು ರು.1.5 ಕೋಟಿ ರುಪಾಯಿಯನ್ನೂ ಪಡೆದಿದ್ದಾರಂತೆ. ಇದಕ್ಕೆ ಮನರಂಜನಾ ತೆರಿಗೆ, ಆದಾಯ ತೆರಿಗೆ, ಪ್ರೊಫೆಷನಲ್ ಟ್ಯಾಕ್ಸ್ ಕಳೆದರೆ ಆಕೆಯ ಕೈಯಲ್ಲಿ ಕಡೆಗೆ ಎಷ್ಟು ಉಳಿಯುತ್ತದೋ ಏನೋ? ಬಾಲಿವುಡ್ ಮತ್ತು ಹಾಲಿವುಡ್ ಟ್ರ್ಯಾಕ್ ಗಳಿಗೆ ಮಲ್ಲಿಕಾ ತಮ್ಮ ನಡು ಕುಣಿಸಲಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ, ಹೊಸ ವರ್ಷಕ್ಕೆ ಕುಣಿಯಲು ಅತಿಹೆಚ್ಚು ದುಡ್ಡು ಎಣಿಸುತ್ತಿರುವ ತಾರೆಯಾಗಿ ಮಲ್ಲಿಕಾ ಶೆರಾವತ್ ಇನ್ನೊಂದು ದಾಖಲೆಗೂ ಕಾರಣರಾಗಿದ್ದಾರೆ. ಕಳೆದ ವರ್ಷ ಕೇವಲ ಒಂದೇ ಒಂದು ನಿಮಿಷಕ್ಕೆ ಕುಣಿಯಲು ರು.4 ಲಕ್ಷ ಫಿಕ್ಸ್ ಮಾಡಿಕೊಂಡಿದ್ದರು.

ಮುಂಬೈ, ದೆಹಲಿಯ ಹಲವಾರು ಪಂಚತಾರಾ ಹೋಟೆಲ್ ಗಳಲ್ಲಿ ಕುಣಿದು ಒಂದು ವರ್ಷಕ್ಕಾಗುವಷ್ಟು ಸಂಪಾದನೆಯನ್ನು ಒಂದೇ ರಾತ್ರಿ ಎಣಿಸಿದ್ದರು ಜಿಲೇಬಿ ಗರ್ಲ್. ಈಗಾಗಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಸಿದ್ಧವಾಗಿದ್ದಾರೆ. (ಏಜೆನ್ಸೀಸ್)

English summary
'Jalebi Bai' girl Mallika Sherawat will be performing at a New Year's Eve gala in Los Angeles. According to reports, the actress is apparently being paid a whopping Rs1.5 crore for her gig to usher in 2013.
Please Wait while comments are loading...