For Quick Alerts
  ALLOW NOTIFICATIONS  
  For Daily Alerts

  ರಜತ್ ಬೇಡಿ ಕಾರು ಅಪಘಾತ: ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವು, ನಟನಿಗೆ ಕಂಟಕ

  |

  ಬಾಲಿವುಡ್ ಖ್ಯಾತ ನಟ ರಜತ್ ಬೇಡಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಬುಧವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

  ಮುಂಬೈನ ಅಂಧೇರಿ ಉಪನಗರದಲ್ಲಿ ಸೋಮವಾರ ರಜತ್ ಬೇಡಿ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

  ದರ್ಶನ್ 'ಜಗ್ಗು ದಾದಾ' ಚಿತ್ರದ ನಟ ರಜತ್ ಬೇಡಿ ವಿರುದ್ಧ FIR ದಾಖಲುದರ್ಶನ್ 'ಜಗ್ಗು ದಾದಾ' ಚಿತ್ರದ ನಟ ರಜತ್ ಬೇಡಿ ವಿರುದ್ಧ FIR ದಾಖಲು

  ಈ ಘಟನೆ ಹಿನ್ನೆಲೆ ನಟನ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 279 (ವೇಗದ ಚಾಲನೆ) ಮತ್ತು 338 (ಜೀವಕ್ಕೆ ಅಪಾಯ ಉಂಟುಮಾಡುವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಘಾಸಿ ಉಂಟುಮಾಡುವ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ, ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಎಫ್‌ಐಆರ್‌ನಲ್ಲಿ ಸೆಕ್ಷನ್ 304A (ನಿರ್ಲಕ್ಷ್ಯದಿಂದ ಸಾವು) ಸೇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  ''ಅಪಘಾತಕ್ಕೀಡಾದ ಕೂಲಿ ಕಾರ್ಮಿಕ ರಾಜೇಶ್ ಬೌದ್ ಕೂಪರ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ನಿಧನರಾಗಿದ್ದಾರೆ" ಎಂದು ಅಧಿಕಾರಿ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಈ ಕೇಸ್‌ನಲ್ಲಿ ನಟ ರಜತ್ ಬೇಡಿ ಇನ್ನು ಬಂಧನವಾಗಿಲ್ಲ ಎನ್ನುವುದು ಟೀಕೆಗೆ ಗುರಿಯಾಗಿದೆ. ಈಗ ಸೆಕ್ಷನ್ 304A ಸೇರಿಸಿರುವುದರಿಂದ ನಟನಿಗೆ ಸಹಜವಾಗಿ ಕಂಟಕ ಎದುರಾಗಿದೆ.

  ಘಟನೆಯ ವಿವರ

  ಸೋಮವಾರ (ಸೆಪ್ಟೆಂಬರ್ 6) ಸಂಜೆ ನಟ ಮನೆಗೆ ಹೋಗುತ್ತಿದ್ದಾಗ ಸಮಯದಲ್ಲಿ ಅಂಧೇರಿಯ ದೇವಾಲಯದ ಬಳಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಪಾದಚಾರಿ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯಕ್ಕೆ ಬಂದ ಹಿನ್ನೆಲೆ ಅಪಘಾತ ಆಗಿದೆ. ಪಾದಚಾರಿಯನ್ನು ಕಂಡ ಕೂಡಲೇ ನಟ ಬ್ರೇಕ್ ಹಾಕುವ ಪ್ರಯತ್ನ ಮಾಡಿದರಾದರೂ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲಾಗಲಿಲ್ಲ ಎಂದು ವರದಿಯಾಗಿದೆ.

  ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಸ್ಥಿತಿ ಗಂಭೀರವಾಗಿತ್ತು. ತಲೆಗೆ ಬಲವಾದ ಏಟು ಬಿದ್ದಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೃತಕ ಉಸಿರಾಟದ ಸಹಾಯದಲ್ಲಿ ವ್ಯಕ್ತಿ ಇದ್ದರು.

  ಗಾಯಕಗೊಂಡ ವ್ಯಕ್ತಿಯ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ ಕಾರಿನಲ್ಲಿ ಡಿಕ್ಕಿ ಹೊಡೆದ ಬಳಿಕ ನಟ ರಜತ್ ಗಾಯಳು ವ್ಯಕ್ತಿಯನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ವ್ಯಕ್ತಿಯ ಆಸ್ಪತ್ರೆಯ ಖರ್ಚನ್ನು ಭರಿಸುವುದಾಗಿ ಹೇಳಿದ್ದರು. ಆದರೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಮೃತ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದಾರೆ. 13 ವರ್ಷದ ಮಗಳು ಅಂಶಿಕಾ ಮತ್ತು 7 ವರ್ಷದ ಮಗ ತೇಜಸ್ವಿ. ಈ ಕುಟುಂಬ ಡಿ ಎನ್ ನಗರದ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಹೃತಿಕ್ ರೋಷನ್ ಅಭಿನಯದ 'ಕೋಯಿ ಮಿಲ್ ಗಯಾ' ಮತ್ತು ಸಲ್ಮಾನ್ ಖಾನ್ ನಟಿಸಿದ 'ಪಾಟ್ನರ್' ಸೇರಿದಂತೆ ಹಲವು ಚಿತ್ರಗಳಲ್ಲಿ ರಜತ್ ಬೇಡಿ ನಟಿಸಿದ್ದಾರೆ.

  English summary
  Man hit by actor Rajat Bedi's car dies; Police add 'causing death by negligence' section in FIR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X