For Quick Alerts
  ALLOW NOTIFICATIONS  
  For Daily Alerts

  ಬಂದಳು ಮತ್ತೊಬ್ಬ ಐಶ್ವರ್ಯಾ ರೈ!: ಇಂಟರ್ನೆಟ್‌ನಲ್ಲಿ ಈಕೆಯದ್ದೇ ಹವಾ

  |

  ತಿಳಿಸಿ ಹಸಿರು ಬಣ್ಣದ ಐಶ್ವರ್ಯಾ ರೈ ಸೌಂದರ್ಯಕ್ಕೆ ಮತ್ತೊಬ್ಬರು ಸರಿಸಾಟಿಯಾಗಲಾರರು. ಹಾಗೆಂದು ಜನರು ಬೇರೆಯವರಲ್ಲಿ ಐಶ್ವರ್ಯಾ ರೈ ಅವರನ್ನು ಕಾಣುವುದು ಹೊಸದೇನಲ್ಲ. 'ನೀನೇನು ಐಶ್ವರ್ಯಾ ರೈ ಆಆ?' ಎಂದು ಕೆಣಕುವವರು ಆ ಜಾಗದಲ್ಲಿ ಬೇರೆ ನಟಿಯ ಹೆಸರನ್ನು ಬಳಸುವುದಿಲ್ಲ. ಅಷ್ಟರಮಟ್ಟಿಗೆ ಐಶ್ ಬೇಬಿ ಜನಮಾನಸದಲ್ಲಿ ಹೊಕ್ಕಿದ್ದಾರೆ.

  ಐಶ್ವರ್ಯಾ ಮೇಲೆ ಸಿಟ್ಟಿನಿಂದ ಸಲ್ಮಾನ್ ಖಾನ್, ಆಕೆಯನ್ನೇ ಹೋಲುವ ಕನ್ನಡತಿ ಸ್ನೇಹಾ ಉಳ್ಳಾಲ್ ಅವರನ್ನು ಬಾಲಿವುಡ್‌ಗೆ ಕರೆದೊಯ್ದಿದ್ದು ಇತಿಹಾಸ. ಐಶ್ವರ್ಯಾ ಸ್ಥಾನವನ್ನು ಆಕ್ರಮಿಸುವ ಸಾಮರ್ಥ್ಯ ಬೇರೊಬ್ಬ ನಟಿಗೆ ಇಲ್ಲವೇ ಇಲ್ಲ ಎನ್ನುವಂತಿದೆ. ಅವರನ್ನು ಅನುಕರಿಸಲು, ಅವರಂತೆಯೇ ಆಗಲು ಪ್ರಯತ್ನಿಸಿ ಸೋತವರ ಸಂಖ್ಯೆಯೇನೂ ಕಡಿಮೆ ಇಲ್ಲ. ಈ ನಡುವೆ ಐಶ್ವರ್ಯಾರನ್ನು ಹೋಲುವ ಮತ್ತೊಬ್ಬ ನಟಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಐಶ್ವರ್ಯಾರ ಹಳೆಯ ಫೋಟೊಗಳನ್ನು ಪಕ್ಕದಲ್ಲಿರಿಸಿ ಈ ನಟಿಗೆ ಹೋಲಿಕೆ ಮಾಡುತ್ತಿದ್ದಾರೆ.

  ಐಶ್ವರ್ಯಾರನ್ನು ಹೋಲುವ ಮಾನಸಿ

  ಐಶ್ವರ್ಯಾರನ್ನು ಹೋಲುವ ಮಾನಸಿ

  ಹೀಗೆ 'ಐಶ್ವರ್ಯಾ' ಹೋಲಿಕೆಯ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವವರು ನಟಿ ಮಾನಸಿ ನಾಯ್ಕ್. ಮರಾಠಿಯಲ್ಲಿ ಜನಪ್ರಿಯ ನಟಿಯಾಗಿರುವ ಮಾನಸಿಯಲ್ಲಿ ಐಶ್ವರ್ಯಾ ಅವರಂತೆ ಕಾಣುವ ಮುಖ ಹಾಗೂ ಕಣ್ಣನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

  ವಿವೇಕ್ ಪ್ರೀತಿ ಐಶ್ವರ್ಯಾ ತಿರಸ್ಕರಿಸಲು ನೈಜ ಕಾರಣವೇನು? ಸಲ್ಮಾನ್ ಖಾನ್ ಪಾತ್ರವೇನು?ವಿವೇಕ್ ಪ್ರೀತಿ ಐಶ್ವರ್ಯಾ ತಿರಸ್ಕರಿಸಲು ನೈಜ ಕಾರಣವೇನು? ಸಲ್ಮಾನ್ ಖಾನ್ ಪಾತ್ರವೇನು?

  ಜೋಧಾ ಅಕ್ಬರ್ ಲುಕ್

  ಜೋಧಾ ಅಕ್ಬರ್ ಲುಕ್

  ಇತ್ತೀಚೆಗೆ ಮಾನಸಿ ಅವರು 'ಜೋಧಾ ಅಕ್ಬರ್' ಚಿತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಂಡ ಐಕಾನಿಕ್ ಲುಕ್‌ಗಳನ್ನು ಮರುಸೃಷ್ಟಿಸಿದ್ದಾರೆ. ಮಾಜಿ ವಿಶ್ವಸುಂದರಿಯ ಸಹೋದರಿಯಂತೆ ಕಾಣುವ ಮಾನಸಿಯ ಸೌಂದರ್ಯಕ್ಕೆ ಜನರು ಬೆರಗಾಗಿದ್ದಾರೆ.

  ಐಶ್ವರ್ಯಾ ಕಾರ್ಬನ್ ಕಾಪಿ

  ಐಶ್ವರ್ಯಾ ಕಾರ್ಬನ್ ಕಾಪಿ

  ಐಶ್ವರ್ಯಾರನ್ನು ಹೋಲುವವರು ಅನೇಕರು ಸಿಗಬಹುದು, ಆದರೆ ಐಶ್ವರ್ಯಾ ಅವರಂತೆಯೇ ಕಾಣಿಸುವವರು ಇರುವುದು ಕಷ್ಟ. ಆದರೆ ಮಾನಸಿ ಅವರ ಫೋಟೊಗಳನ್ನು ಕಂಡವರು ಇದು 'ಜೋಧಾ ಅಕ್ಬರ್' ನಟಿಯ ನಕಲು ಮತ್ತು ಕಾರ್ಬನ್ ಕಾಪಿ ಎನ್ನುತ್ತಿದ್ದಾರೆ.

  ಮಾಜಿ ವಿಶ್ವ ಸುಂದರಿಯ ನಯಾ ಲುಕ್ ಗೆ ಅಭಿಮಾನಿಗಳು ಫಿದಾಮಾಜಿ ವಿಶ್ವ ಸುಂದರಿಯ ನಯಾ ಲುಕ್ ಗೆ ಅಭಿಮಾನಿಗಳು ಫಿದಾ

  ನಿಜವಾದ ರಾಜಕುಮಾರಿ

  ನಿಜವಾದ ರಾಜಕುಮಾರಿ

  ಜೋಧಾ ಅಕ್ಬರ್ ಲುಕ್ ಮಾತ್ರವಲ್ಲದೆ, ಐಶ್ವರ್ಯಾ ನಟಿಸಿದ್ದ 'ದೇವದಾಸ್' ಚಿತ್ರದ ಆಕರ್ಷಕ ಉಡುಗೆಯಲ್ಲಿಯೂ ಮಾನಸಿ ಕಾಣಿಸಿಕೊಂಡಿದ್ದಾರೆ. ನವಿಲು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಅನೇಕರು ಆಕೆಯನ್ನು ಮರಾಠಿಯ ಐಶ್ವರ್ಯಾ ರೈ ಎಂದು ಹೊಗಳಿದ್ದಾರೆ. ಇನ್ನು ಕೆಲವರು ನಿಜವಾದ ರಾಜಕುಮಾರಿಯಂತೆ ಕಾಣಿಸುತ್ತೀರಿ ಎಂದು ಕೊಂಡಾಡಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯ

  ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯ

  ಮಾನಸಿ ನಾಯ್ಕ್ ಮರಾಠಿಯಲ್ಲಿ ಜನಪ್ರಿಯತೆ ಪಡೆದಿರುವ ನಟಿ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 943 ಸಾವಿರ ಫ್ಯಾನ್ಸ್ ಪಡೆದಿರುವ ಅವರಿಗೆ ಟಿಕ್‌ಟಾಕ್‌ನಲ್ಲಿ 4 ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಐಶ್ವರ್ಯಾ ಅವರನ್ನು ಹೋಲುವ ಚಿತ್ರಗಳನ್ನು ಹಂಚಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

  ಸಿನಿಮಾಗಳಲ್ಲಿ ಅಭಿನಯ

  ಸಿನಿಮಾಗಳಲ್ಲಿ ಅಭಿನಯ

  'ಜಬರ್‌ದಸ್ತ್', 'ಟಾರ್ಗೆಟ್', 'ತುಕ್ಯಾ ತುಕ್ವಿಲ್ಲಾ ನಗ್ಯಾ ನಚ್ವಿಲಾ, ಕುಟುಂಬ್ ಮತ್ತು ಟೀನ್ ಬೇಯ್ಕಾ ಫಾಜಿತಿ ಐಕಾ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಅವರು, ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

  English summary
  Marathi actress Manasi Naik is in the news at social media for her stunning photos as she look alike Aishwarya Rai's duplicate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X