For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶಾರುಖ್ ಖಾನ್ ಜೊತೆ ಸಿನಿಮಾ: ಮಣಿರತ್ನಂ ಹೇಳಿದ್ದೇನು?

  |

  ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಮಣಿರತ್ನಂ ಪ್ರಮುಖರು. ಅವರ ಸಿನಿಮಾಗಳು ಮಾಡಿರುವ ಮ್ಯಾಜಿಕ್ ಅನ್ನು ಮರೆಯುವಂತಿಲ್ಲ. 'ರೋಜಾ', 'ಗೀತಾಂಜಲಿ', 'ಬಾಂಬೆ', 'ಅಲೆಪಾಯುತೇನ್', 'ನಾಯಗನ್' ಮಣಿರತ್ನಂ ಸೃಷ್ಟಿಸಿರುವ ಅದ್ಭುತ ದೃಶ್ಯಗಳಿಗೆ ಕೆಲವು ಉದಾಹರಣೆಗಳು.

  ಮಣಿರತ್ನಂ ಸಿನಿಮೋಗ್ರಫಿಯಲ್ಲಿ 'ದಿಲ್ ಸೇ' ಸಹ ಒಂದು. ಶಾರುಖ್ ಖಾನ್ ಹಾಗೂ ಮಣಿರತ್ನಂ ಒಂದಾಗಿದ್ದ ಈ ಸಿನಿಮಾ ಆ ಕಾಲಕ್ಕೆ ಭಾರಿ ನಿರೀಕ್ಷೆ ಕೆರಳಿಸಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಓಡಲಿಲ್ಲವಾದರೂ ಈಗ ಅದೊಂದು ಕಲ್ಟ್ ಸಿನಿಮಾ. ಆ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ, ಇನ್ನು ನೂರು ವರ್ಷವಾದರು ಹಾಡುಗಳು ಕೇಳುಗರಿಂದ ಮರೆಯಾಗದು.

  ಇದೀಗ ಮಣಿರತ್ನಂ ತಮ್ಮ ಹೊಸ ಸಿನಿಮಾವನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮಣಿರತ್ನಂ ನಿರ್ದೇಶಿಸಿರುವ ಮೊದಲ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ. ಸಿನಿಮಾದ ತಾರಾಗಣದೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಮಣಿರತ್ನಂ ಅವರಿಗೆ, 'ನೀವು ಮತ್ತೊಮ್ಮೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತೀರ?' ಎಂಬ ಪ್ರಶ್ನೆ ಎದುರಾಗಿದೆ.

  ''ಅದನ್ನು ನೀವು ಶಾರುಖ್ ಖಾನ್ ಬಳಿಯೇ ಕೇಳಬೇಕು'' ಎಂದು ನಕ್ಕಿದ್ದಾರೆ ಮಣಿರತ್ನಂ. ಬಳಿಕ ಮುಂದುವರೆದು, ''ಚಿತ್ರಕತೆ ಇದ್ದರಷ್ಟೆ ನಾನು ಹಾಗೂ ಶಾರುಖ್ ಖಾನ್ ಒಟ್ಟಿಗೆ ಕೆಲಸ ಮಾಡಲು ಸಾಧ್ಯ. ನನ್ನ ಬಳಿ ಅವರಿಗೆ ಹೊಂದುವಂಥಹಾ ಕತೆ ಸದ್ಯಕ್ಕೆ ಇಲ್ಲ. ಶಾರುಖ್ ಖಾನ್‌ಗೆ ಹೊಂದುವ ಚಿತ್ರಕತೆ ಬಂದರೆ ಖಂಡಿತ ನಾನು ಅವರೊಟ್ಟಿಗೆ ಕೆಲಸ ಮಾಡುತ್ತೇನೆ. 'ದಿಲ್ ಸೇ' ಬಳಿಕ ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಷ್ಟೆ ನಾನು ಶಾರುಖ್ ಖಾನ್ ಅನ್ನು ಭೇಟಿಯಾಗಿದ್ದೆ'' ಎಂದಿದ್ದಾರೆ ಮಣಿರತ್ನಂ.

  ಶಾರುಖ್ ಖಾನ್ ನಟಿಸಿ ಮಣಿರತ್ನಂ ನಿರ್ದೇಶಿಸಿದ್ದ 'ದಿಲ್ ಸೇ' ಸಿನಿಮಾ 1998 ರಲ್ಲಿ ಬಿಡುಗಡೆ ಆಗಿತ್ತು. ಭಯೋತ್ಪಾದಕಿಯೊಬ್ಬಳ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿತ್ತು. ಸಿನಿಮಾದಲ್ಲಿ ಮನಿಷಾ ಕೊಯಿರಾಲ ನಾಯಕಿಯಾಗಿದ್ದರು. ಸಿನಿಮಾದಲ್ಲಿ ಪ್ರೀತಿ ಝಿಂಟಾ ಸಹ ನಟಿಸಿದ್ದರು. ಅದು ಅವರ ಮೊದಲ ಸಿನಿಮಾ ಆಗಿತ್ತು. ಆ ನಂತರ ಬಾಲಿವುಡ್‌ನ ಟಾಪ್ ನಟಿಯಾಗಿ ಪ್ರೀತಿ ಬೆಳೆದರು.

  ಇದೀಗ ಮಣಿರತ್ನಂ ನಿರ್ದೇಶಿಸಿರುವ 'ಪೊನ್ನಿಯಿನ್ ಸೆಲ್ವನ್ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ಜಯಂ ರವಿ, ತ್ರಿಶಾ, ಪ್ರಕಾಶ್ ರೈ, ಕಿಶೋರ್, ನಾಸರ್, ಶೋಭಿತಾ ಧುಲಿಪಾಲ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ಸೆಪ್ಟೆಂಬರ್ 30 ರಂದು ತೆರೆಗೆ ಬರುತ್ತಿದ್ದು, ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ನನ್ನ ಕನಸು ಎಂದು ಮಣಿರತ್ನಂ ಹೇಳಿಕೊಂಡಿದ್ದಾರೆ. 'ನಾನು ಚಿತ್ರರಂಗಕ್ಕೆ ಕಾಲಿಡುವ ಮುಂಚೆಯೇ ಈ ಸಿನಿಮಾವನ್ನು ಮಾಡಬೇಕು ಎಂದುಕೊಂಡಿದ್ದೆ'' ಎಂದಿದ್ದಾರೆ ಮಣಿರತ್ನಂ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗುತ್ತಿದೆ.

  English summary
  Mani Rathnam talks about his re collaboration witht Shah Rukh Khan. He said now he does not have script that suits Shah Rukh Khan.
  Tuesday, September 27, 2022, 21:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X