»   » ಮೋಹನ್ ಲಾಲ್ ಮನೆಗೆ ಅಮೀರ್ ಖಾನ್ ಭೇಟಿ

ಮೋಹನ್ ಲಾಲ್ ಮನೆಗೆ ಅಮೀರ್ ಖಾನ್ ಭೇಟಿ

Posted By:
Subscribe to Filmibeat Kannada

ಬಾಲಿವುಡ್ ಮೆಗಾ ಸ್ಟಾರ್ ಅಮೀರ್ ಖಾನ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮನೆಗೆ ಭೇಟಿ ನೀಡಿದ್ದರು. ಕೊಚ್ಚಿಯ ತೆವಾರಾದಲ್ಲಿರುವ ಮೋಹನ್ ಲಾಲ್ ಮನೆಗೆ ಅಮೀರ್ ಖಾನ್ ತಮ್ಮ 'ಸತ್ಯಮೇವ ಜಯತೇ' ಕಾರ್ಯಕ್ರಮದ ಪ್ರಚಾರಕ್ಕಾಗಿ ತೆರಳಿದ್ದರು. ಅಮೀರ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೋಹನ್ ಲಾಲ್ ಮನೆ ಮುಂದೆ ಜಮಾಯಿಸಿದ್ದರು ಎನ್ನಲಾಗಿದೆ.

ಅಮೀರ್ ತಮ್ಮ ಕಿರಿತೆರೆ ಟಾಕ್ ಶೊ ಸತ್ಯಮೇವ ಜಯತೇ ಪ್ರಚಾರಕ್ಕಾಗಿ ಮೋಹನ್ ಲಾಲ್ ರನ್ನು ಭೇಟಿ ಮಾಡಿದ್ದರು. ಅಮೀರ್ ಬ್ಲೂ ಜೀನ್ಸ್ ಹಾಗೂ ತಿಳಿಬಣ್ಣದ ಟೀ ಶರ್ಟ್ ತೊಟ್ಟಿದ್ದರೆ ಮೋಹನ್ ಲಾಲ್ ಕೇರಳದ ಸಾಂಪ್ರದಾಯಿಕ ಉಡುಗೆ ಮಂಡು ಮತ್ತು ಶರ್ಟ್ ನಲ್ಲಿದ್ದರು. ಅಮೀರ್ ಖಾನ್ ಮಹಾ ಅಭಿಮಾನಿಯಾಗಿರುವ ನಟ ದಿಲೀಪ್ ಸಹ ಅಲ್ಲಿ ಹಾಜರಾಗಿ ಅಮೀರ್ ರನ್ನು ಭೇಟಿಯಾದರು. ಅಮೀರ್ ಭೇಟಿಯಿಂದ ಕೊಚ್ಚಿಯ ಜನರು ಪುಳಕಿತಗೊಂಡರು.

ವೆಬ್ ಸೈಟ್ ಒಂದರ ವರದಿಯ ಪ್ರಕಾರ, ಮೋಹನ್ ಲಾಲ್ ತಾವು ಸಂಗ್ರಹಿಸಿದ ಅಪೂರ್ವ ಕಲಾಕೃತಿಗಳನ್ನು ಅಮೀರ್ ಖಾನ್ ಅವರಿಗೆ ತೋರಿಸಿದ್ದಾರೆ. ಅದನ್ನು ಅಮೀರ್ ಕೂಡ ಸಾಕಷ್ಟು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಅಮೀರ್ ಖಾನ್ ಅವರಿಗೆ 'ಅರುಮುಲ್ಲಾ ಕನ್ನಡಿ' ಹಾಗೂ ಕೇರಳದ ಬಹು ಅಪರೂಪದ ಕೆಲವು ಮೆಮೆಂಟೋಸ್ ಗಳನ್ನು ಕಾಣಿಕೆಯಾಗಿ ಮೋಹನ್ ಲಾಲ್ ನೀಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

English summary
Bollywoods mega-star Aamir Khan dropped by at superstar Mohanlals villa in Thevara in Kochi. Dileep also visited Aamir Khan in Mohanlals house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada