For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಭಟ್, ಮಹೇಶ್ ಭಟ್ ಸಿನಿಮಾ ಬಹಿಷ್ಕಾರಕ್ಕೆ ಒತ್ತಾಯ

  |

  ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್‌ನಲ್ಲಿ ಸಾಕಷ್ಟು ಬದಲಾಗಿದೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳು ಎಂದು ನೀಡಲಾಗುತ್ತಿದ್ದ ಗೌರವವನ್ನು ಹಲವರು ಕಳೆದುಕೊಂಡಿದ್ದಾರೆ.

  Rachita Ram ಇತ್ತೀಚಿನ ಫೋಟೋಶೂಟ್‌ನ ತೆರೆ ಹಿಂದಿನ ದೃಶ್ಯ | Filmibeat Kannada

  ಅಲ್ಲಲ್ಲಿ, ಆಗೊಮ್ಮೆ-ಈಗೊಮ್ಮೆ ಕೇಳಿಬರುತ್ತಿದ್ದ ಸ್ವಜನಪಕ್ಷಪಾತದ ವಿರುದ್ಧ ಧ್ವನಿ ಸುಶಾಂತ್ ಸಿಂಗ್ ಸಾವಿನ ಬಳಿಕ ಬಹಳ ಗಟ್ಟಿಯಾಗಿದೆ. ಸ್ವಜನಪಕ್ಷಪಾತದ ವಿರುದ್ಧ ಸಂತ್ರಸ್ತ ನಟ-ನಟಿಯರು ಮಾತ್ರವಲ್ಲದೆ ಪ್ರೇಕ್ಷಕರು ಸಹ ದನಿ ಎತ್ತಿದ್ದಾರೆ.

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಮಹೇಶ್ ಭಟ್‌ ವಿಚಾರಣೆಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಮಹೇಶ್ ಭಟ್‌ ವಿಚಾರಣೆ

  ಸ್ವಜನಪಕ್ಷಪಾತದಿಂದಲೇ ಚಿತ್ರರಂಗಕ್ಕೆ ಬಂದು ಸ್ಟಾರ್ ಆದ, ಆಗುತ್ತಿರುವ ನಟ-ನಟಿಯರು ಹಿಂದೆಂದೂ ಎದುರಿಸದ ಅಭದ್ರತೆ ಎದುರಿಸುತ್ತಿದ್ದು. 'ನೆಪೊಟಿಸಮ್‌ ಸ್ಟಾರ್‌' ಗಳ ಸಿನಿಮಾಗಳು ಅಡಕತ್ತರಿಯಲ್ಲಿ ಸಿಲುಕಿವೆ. ಸುಶಾಂತ್ ಸಿಂಗ್ ಪ್ರಕರಣದ ಅನುಮಾನಿತರಲ್ಲಿ ಒಬ್ಬರಾದ ಮಹೇಶ್ ಭಟ್ ನಿರ್ದೇಶನದ, ಆಲಿಯಾ ಭಟ್ ಅಭಿನಯದ ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ.

  ಸಿನಿಮಾ ಬಹಿಷ್ಕರಿಸುವಂತೆ ಕರೆ

  ಸಿನಿಮಾ ಬಹಿಷ್ಕರಿಸುವಂತೆ ಕರೆ

  ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಸಂಜಯ್ ದತ್, ಪೂಜಾ ಭಟ್ ನಟನೆಯ ಸಡಕ್ 2 ಸಿನಿಮಾ ಕೆಲವೇ ದಿನಗಳಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಲಾಗಿದೆ. ಐಎಂಬಿಡಿ ರೇಟಿಂಗ್ಸ್ ತಗ್ಗಿಸುವಂತೆ ಸಹ ಕರೆ ನೀಡಲಾಗಿದೆ.

  ಬಾಲಿವುಡ್‌ ಅನ್ನು ಮೋಸದ ಲೋಕ ಎಂದ ಸಲ್ಮಾನ್ ಖಾನ್ ಗೆಳತಿಬಾಲಿವುಡ್‌ ಅನ್ನು ಮೋಸದ ಲೋಕ ಎಂದ ಸಲ್ಮಾನ್ ಖಾನ್ ಗೆಳತಿ

  ಸಡಕ್ 2 ನ ಎಲ್ಲರೂ ಸ್ವಜನಪಕ್ಷಪಾತದ ಉತ್ಪನ್ನಗಳೇ!

  ಸಡಕ್ 2 ನ ಎಲ್ಲರೂ ಸ್ವಜನಪಕ್ಷಪಾತದ ಉತ್ಪನ್ನಗಳೇ!

  ಇಡೀಯ ಸಿನಿಮಾವೇ ಸ್ವಜನಪಕ್ಷಪಾತದ ಕಾರ್ಖಾನೆ. ಸಿನಿಮಾದಲ್ಲಿರುವ ನಟರೆಲ್ಲಾ ನೆಪೊಟಿಸಮ್ (ಸ್ವಜನಪಕ್ಷಪಾತ)ದ ಉತ್ಪನ್ನಗಳೇ. ಮಹೇಶ್ ಭಟ್ ಮಕ್ಕಳಾದ ಆಲಿಯಾ, ಪೂಜಾ. ಸುನಿಲ್ ದತ್, ನರ್ಗಿಸ್ ಮಗನಾದ ಸಂಜಯ್ ದತ್, ನಟ ರಾಯ್ ಕಪೂರ್, ನಟಿ ಸಲೋಮೆ ರಾಯ್ ಕಪೂರ್ ಪುತ್ರ ಆದಿತ್ಯ ರಾಯ್ ಕಪೂರ್ ಇವರೆಲ್ಲರೂ ಮುಖ್ಯ ಭೂಮಿಕೆಯಲ್ಲಿದ್ದಾರೆ.

  ಸುಶಾಂತ್ ಪ್ರಕರಣದಲ್ಲಿ ಮಹೇಶ್ ಭಟ್ ಅನ್ನು ವಿಚಾರಣೆ ಮಾಡಲಾಗಿದೆ

  ಸುಶಾಂತ್ ಪ್ರಕರಣದಲ್ಲಿ ಮಹೇಶ್ ಭಟ್ ಅನ್ನು ವಿಚಾರಣೆ ಮಾಡಲಾಗಿದೆ

  ಬಾಲಿವುಡ್ ಸ್ವಜನಪಕ್ಷಪಾತದ ಪಿತಾಮಹರಲ್ಲಿ ಮಹೇಶ್ ಭಟ್ ಸಹ ಒಬ್ಬರು ಎಂದು ಆರೋಪಿಸಲಾಗಿದ್ದು. ಸುಶಾಂತ್ ಸಿಂಗ್ ಸಾವಿನ ಮುಖ್ಯ ಆರೋಪಿ ರಿಯಾ ಚಕ್ರವರ್ತಿ ಜೊತೆಗೆ ಆಪ್ತ ಸಂಬಂಧವನ್ನು ಅವರು ಹೊಂದಿದ್ದಾರೆ. ಹಾಗಾಗಿ ಅವರನ್ನೂ ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಹಾಗಾಗಿ ಅವರ ನಿರ್ದೇಶನದ ಸಡಕ್ 2 ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದೆ.

  ಕನ್ನಡ ಚಿತ್ರರಂಗದಲ್ಲಿ ಹೊಸಬರನ್ನು ತುಳಿಯುವವರಿದ್ದಾರೆ: ಜೆಕೆ ಗಂಭೀರ ಆರೋಪಕನ್ನಡ ಚಿತ್ರರಂಗದಲ್ಲಿ ಹೊಸಬರನ್ನು ತುಳಿಯುವವರಿದ್ದಾರೆ: ಜೆಕೆ ಗಂಭೀರ ಆರೋಪ

  ಸಡಕ್ ಸಿನಮಾದ ಮುಂದುವರೆದ ಭಾಗ

  ಸಡಕ್ ಸಿನಮಾದ ಮುಂದುವರೆದ ಭಾಗ

  1991 ರಲ್ಲಿ ಸಡಕ್ ಸಿನಿಮಾವನ್ನು ಮಹೇಶ್ ಭಟ್ ನಿರ್ದೇಶಿಸಿದ್ದರು. ಸಂಜಯ್ ದತ್ ಹಾಗೂ ಮಹೇಶ್ ಭಟ್ ಪುತ್ರಿ ಪೂಜಾ ಭಟ್ ಆ ಸಿನಿಮಾದಲ್ಲಿ ನಟಿಸಿದ್ದರು. ಸಡಕ್ 2 ಅದೇ ಸಿನಿಮಾದ ಮುಂದುವರೆದ ಭಾಗ. ಸಡಕ್ 2 ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 28 ರಂದು ಬಿಡುಗಡೆ ಆಗಲಿದೆ.

  ಬಾಲಿವುಡ್‌ನಲ್ಲಿ ಕೆಲಸ ಮಾಡಿದರೆ ಮಾತ್ರವೇ ನಾವು ಕಲಾವಿದರೇ?: ಶ್ರುತಿ ಹಾಸನ್ ಪ್ರಶ್ನೆಬಾಲಿವುಡ್‌ನಲ್ಲಿ ಕೆಲಸ ಮಾಡಿದರೆ ಮಾತ್ರವೇ ನಾವು ಕಲಾವಿದರೇ?: ಶ್ರುತಿ ಹಾಸನ್ ಪ್ರಶ್ನೆ

  English summary
  Netizen asks to ban Alia Bhatt, Sanjay Dutt, Aditya Roy Kapoor, Pooja Bhatt starer Sadak 2 movie, directed by Mahesh Bhatt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X