For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಬೆಂಬಲಕ್ಕೆ ಬಂದ ಶತ್ರುಘ್ನ ಸಿನ್ಹಾ, ಸ್ವರ ಭಾಸ್ಕರ್: ನೆಟ್ಟಿಗರ ಛೀಮಾರಿ

  |

  ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿಚಾರದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವುದು ನಿರ್ಮಾಪಕ ಕರಣ್ ಜೋಹರ್. ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಚರ್ಚೆಯಾಗುತ್ತಿರುವ ಸ್ವಜನಪಕ್ಷಪಾತ ಆರೋಪದ ಕೇಂದ್ರ ಬಿಂದು ಕರಣ್. ಕರಣ್ ಜೋಹರ್ ಸುತ್ತ ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ ಕೆಲವರು ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ಅದರಿಂದ ನೆಟ್ಟಿಗರ ಕೆಂಗಣ್ಣಿಗೂ ತುತ್ತಾಗಿದ್ದಾರೆ.

  ನೀನಾಸಂ ಸತೀಶ್ ಅವರ ವಿನೂತನ ಕಥೆ ಹೇಳುವ ಸರಣಿ | Sathish Neenasam start new venture on YouTube channel

  ಕರಣ್ ಜೋಹರ್ ಪರವಾಗಿ ಇತ್ತೀಚೆಗೆ ಹಿರಿಯ ನಟ ಶತ್ರುಘ್ನ ಸಿನ್ಹಾ ಮತ್ತು ನಟಿ ಸ್ವರ ಭಾಸ್ಕರ್ ಕಾಮೆಂಟ್ ಮಾಡಿದ್ದಾರೆ. ಸುಶಾಂತ್ ಸಾವಿಗೂ ಕರಣ್ ಜೋಹರ್‌ಗೂ ಸಂಬಂಧವಿಲ್ಲ. ಕರಣ್ ಜೋಹರ್ ನೆಪೋಟಿಸಿಂ ಮಾಡಿದವರಲ್ಲ. ಅವರನ್ನು ವಿನಾಕಾರಣ ಆರೋಪಿಯನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮುಂದೆ ಓದಿ...

  ಹೊರಗಿನವರನ್ನು ಸ್ವಾಗತಿಸುತ್ತದೆ

  ಹೊರಗಿನವರನ್ನು ಸ್ವಾಗತಿಸುತ್ತದೆ

  ಸುಶಾಂತ್ ಸಿಂಗ್ ವೃತ್ತಿಗೆ ಸ್ವಜನಪಕ್ಷಪಾತದ ಚರ್ಚೆಯನ್ನು ಜೋಡಿಸಲಾಗುತ್ತಿದೆ. ಇದು ಅಸಂಬದ್ಧ. ಆ ಯುವಕ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿದ್ದ. ಉದ್ಯಮದ ಹೊರಗಿನಿಂದ ಬಂದವನು ಎಂದು ಆತನಿಗೆ ಅನಿಸುವ ಸಂದರ್ಭವೇ ಬಂದಿರಲಿಲ್ಲ. ಉತ್ತರ ಪ್ರದೇಶ, ಬಿಹಾರ ಹೀಗೆ ಚಿತ್ರೋದ್ಯಮ ಎಲ್ಲ ಕಡೆಗಳಿಂದಲೂ ನಟರನ್ನು ಸ್ವಾಗತಿಸುತ್ತದೆ. ಇಲ್ಲಿ ತಾರತಮ್ಯ ಇಲ್ಲ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

  ಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟು

  ಆಲಿಯಾ ಏನೂ ಕರಣ್ ಸಂಬಂಧಿಯಲ್ಲ

  ಆಲಿಯಾ ಏನೂ ಕರಣ್ ಸಂಬಂಧಿಯಲ್ಲ

  'ಕರಣ್ ಜೋಹರ್ ಅವರನ್ನು ನೆಪೋಟಿಸಂನ ಆರೋಪಿಯನ್ನಾಗಿಸಲಾಗಿದೆ. ಆದರೆ ಸಿದ್ಧಾರ್ಥ್ ಮಲ್ಹೋತ್ರಾ ಉದ್ಯಮದ ಯಾವುದೇ ವ್ಯಕ್ತಿಯ ಮಗನಲ್ಲ. ಆಲಿಯಾ ಭಟ್ ಏನೂ ಕರಣ್ ಸಂಬಂಧಿಯಲ್ಲ. ಹಾಗಾದರೆ ಈ ನೆಪೋಟಿಸಂ ಎಲ್ಲಿದೆ? ಈ ಅಸಂಬದ್ಧ ವಿವಾದಕ್ಕೆ ಅಂತ್ಯಹಾಡುವ ಸಮಯ ಇದು ಎನಿಸುತ್ತದೆ. ಏಕೆಂದರೆ ಇಲ್ಲಿ ಹೊರಗಿನಿಂದ ಬಂದ ಆಯುಷ್ಮಾನ್ ಖುರಾನಾ ಅವರನ್ನು ಸ್ವಾಗತಿಸಲಾಗಿದೆ. ಅವರ ಸಹೋದರನನ್ನೂ ಸ್ವಾಗತಿಸಲಾಗುತ್ತಿದೆ. ಭಾರತದ ಯಾವುದೇ ಚಿತ್ರೋದ್ಯಮ ಹೀಗೆ ಹೊರಗಿನವರನ್ನು ಸ್ವಾಗತಿಸುತ್ತದೆ ಎನಿಸುವುದಿಲ್ಲ' ಎಂದಿದ್ದಾರೆ.

  ಪ್ರಾಮಾಣಿಕ ಉತ್ತರ ನೀಡಿದ್ದರು

  ಪ್ರಾಮಾಣಿಕ ಉತ್ತರ ನೀಡಿದ್ದರು

  ಕರಣ್ ಜೋಹರ್‌ಗೆ ಒಮ್ಮೆ ನೆಪೋಟಿಸಂ ಬಗ್ಗೆ ಪ್ರಶ್ನಿಸಿದಾಗ ಅವರು ತಕ್ಷಣವೇ ಪ್ರಾಮಾಣಿಕವಾಗಿ ಉತ್ತರ ನೀಡಿದ್ದರು. ಇದನ್ನು ಅವರು ವೈಯಕ್ತಿಕವಾಗಿ ತೆಗೆದುಕೊಂಡಿರಲಿಲ್ಲ. ನೆಪೋಟಿಸಂಗೆ ಕರಣ್ ಬೆಂಬಲ ನೀಡುವುದಾಗಿದ್ದರೆ ಅವರ ಕಾರ್ಯಕ್ರಮದಲ್ಲಿ ಸ್ವಜನಪಕ್ಷಪಾತಕ್ಕೆ ಸಂಬಂಧಿಸಿದಂತಹ ಮಾತುಗಳಿರುವ ವಿಡಿಯೋಗಳನ್ನು ಡಿಲೀಟ್ ಮಾಡಿಸಬಹುದಾಗಿತ್ತಲ್ಲವೇ? ಎಂದು ಸ್ವರ ಭಾಸ್ಕರ್ ಹೇಳಿದ್ದಾರೆ.

  ನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪ

  ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

  ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

  ಈ ರೀತಿ ಹೇಳಿಕೆ ನೀಡಿರುವ ಶತ್ರುಘ್ನ ಸಿನ್ಹಾ ಮತ್ತು ಸ್ವರ ಭಾಸ್ಕರ್ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ. ಕರಣ್ ಜೋಹರ್ ಸ್ವಜನಪಕ್ಷಪಾತ ಮಾಡಿರುವುದು ಸುಶಾಂತ್ ಅವರನ್ನು ಲೇವಡಿ ಮಾಡಿರುವುದಕ್ಕೆ ಸಾಕ್ಷಿಗಳು ಕಣ್ಣೆದುರೇ ಇವೆ. ಅಂಗೈ ಹುಣ್ಣಿಗೆ ಕನ್ನಡ ಬೇಕೇ? ಮಗಳು ಸೋನಾಕ್ಷಿ ಸಿನ್ಹಾ ಸ್ವತಃ ಸ್ವಜನಪಕ್ಷಪಾತದ ಕುಡಿ. ಅವಕಾಶ ಸಿಗಬೇಕೆಂದು ಶತ್ರುಘ್ನ ಸಿನ್ಹಾ, ಕರಣ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

  ಕಂಗನಾಗೆ ಕರಣ್ ಅವಶ್ಯಕತೆ ಇಲ್ಲ

  ಕಂಗನಾಗೆ ಕರಣ್ ಅವಶ್ಯಕತೆ ಇಲ್ಲ

  ಕಂಗನಾ ರಣಾವತ್ ಅವರ ಸಾಮಾಜಿಕ ಜಾಲತಾಣದ ಖಾತೆ ನಿರ್ವಹಿಸುತ್ತಿರುವ ತಂಡ ಕೂಡ ಸ್ವರ ಭಾಸ್ಕರ್ ವಿರುದ್ಧ ಕಿಡಿಕಾರಿದೆ. 'ಅನೇಕ ಬಾರಿ ಮನವಿ ಮಾಡಿದ ಬಳಿಕ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಂಗನಾ ಭಾಗವಹಿಸಿದ್ದರು ಎನ್ನುವುದನ್ನು ಮುಖಸ್ತುತಿ ಮಾಡುವಾಗ ಮರೆಯಬೇಡಿ ಸ್ವರ. ಕಂಗನಾ ಆಗ ಸೂಪರ್ ಸ್ಟಾರ್ ಆಗಿದ್ದರು, ಕರಣ್ ದುಡ್ಡು ಪಡೆದು ನಿರೂಪಣೆ ಮಾಡುವವರು. ಬಯಸಿದ್ದನ್ನು ತೆಗೆದುಹಾಕುವ ಹಕ್ಕು ಚಾನೆಲ್‌ಗೆ ಇರುತ್ತದೆಯೇ ಹೊರತು ಕರಣ್‌ಗೆ ಅಲ್ಲ. ಜನರನ್ನು ತಲುಪಲು ಕಂಗನಾಗೆ ಕರಣ್ ಅಗತ್ಯವೇ ಇಲ್ಲ ಎಂದು ತಿರುಗೇಟು ನೀಡಿದೆ.

  ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

  English summary
  Netizens and team Kangana Ranaut slams Shatrughan Sinha and Swara Bhaskar for defending Karan Johar on nepotism debate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X