»   » ಶಾರುಖ್ -ಕಾಜೋಲ್ ಜೋಡಿಗೆ 19 ವರ್ಷ

ಶಾರುಖ್ -ಕಾಜೋಲ್ ಜೋಡಿಗೆ 19 ವರ್ಷ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಹಾಗೂ ಮೋಹಕ ಕಂಗಳ ಚೆಲುವೆ ಕಾಜೋಲ್ ಯಶಸ್ವಿ ಜೋಡಿಯ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಒಂದೇ ಚಿತ್ರಮಂದಿರದಲ್ಲಿ 19ನೇ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 20ಕ್ಕೆ ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಈ ಪ್ರೇಮಕಾವ್ಯಕ್ಕೆ 19ರ ಹರೆಯ ಪ್ರಾಪ್ತಿಯಾಗಲಿದೆ. ಡಿಡಿಎಲ್ ಜೆ ಚಿತ್ರಮಂದಿರದಿಂದ ತೆಗೆಯಲಾಗುತ್ತದೆ ಎಂಬ ಸುದ್ದಿಯನ್ನು ಮರಾಠಾ ಮಂದಿರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ದೇಸಾಯಿ ಅಲ್ಲಗೆಳೆದಿದ್ದಾರೆ.

20 ಅಕ್ಟೋಬರ್ 1995 ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಭಾರತದಲ್ಲಿ 580 ಮಿಲಿಯನ್ ಹಾಗೂ ಸಾಗರೋತ್ತರ ದೇಶಗಳಲ್ಲಿ 175 ಮಿಲಿಯನ್ ಹಣ ದೋಚಿತ್ತು. 2010ರಲ್ಲಿ ಸತತವಾಗಿ 750ನೇ ವಾರಗಳ ಕಾಲ ಪ್ರದರ್ಶನಗೊಂಡ ದಾಖಲೆ ಬರೆಯಿತು.ಶೋಲೆ ಚಿತ್ರ ಸತತ ಏಳು ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಈ ದಾಖಲೆಯನ್ನೂ ಆದಿತ್ಯಾ ಛೋಪ್ರಾ ನಿರ್ದೇಶನದ ಡಿಡಿಎಲ್ ಜೆ ಮುರಿದು ಹಾಕಿದೆ.

1000 ವಾರಗಳ ತನಕ ಓಟ: ಡಿಡಿಎಲ್ ಜೆ ಚಿತ್ರದ ಉತ್ತಮ ಪ್ರಿಂಟ್ ಇರುವ ಡಿವಿಡಿಗಳು ಬಂದಿರಬಹುದು, ಟಿವಿ ಚಾನೆಲ್ ಗಳಲ್ಲಿ ಜನ ಅನೇಕ ಬಾರಿ ನೋಡಿರಬಹುದು ಆದ್ರೆ, ಮರಾಠಾ ಮಂದಿರದಲ್ಲಿ ಒಮ್ಮೆಯಾದರೂ ಚಿತ್ರವನ್ನು ನೋಡದ ಸಿನಿಪ್ರೇಮಿ ಇರಲಾರ ಎಂಬ ಮಾತಿದೆ.ಮುಂದಿನ ಡಿಸೆಂಬರ್ ತಿಂಗಳಿನಲ್ಲಿ 1000 ವಾರಗಳನ್ನು ಡಿಡಿಎಲ್ ಜೆ ಪೂರೈಸುವುದನ್ನು ಕಾಣಬೇಕು ಎಂದು ದೇಸಾಯಿ ಹೇಳಿದ್ದಾರೆ.

Believe It: Shahrukh Khan's 'DDLJ' Running Over 19 Years In Maratha Mandir

ಮರಾಠಾ ಮಂದಿರ್ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಬೇರೆ ಚಿತ್ರಗಳು ಬಂದು ಹೋದರೂ ಮ್ಯಾಟ್ನಿ ಮಾತ್ರ ಡಿಡಿಎಲ್ ಜೆಗೆ ಮೀಸಲು. ಬೆಳಗ್ಗೆ 11.30ಕ್ಕೆ ಶುರುವಾಗುವ ಚಿತ್ರ ನೋಡಲು ಜನ ತಪ್ಪದೇ ಬರುತ್ತಿದ್ದಾರೆ. ವಾರದ ದಿನಗಳಲ್ಲಿ ಶೇ 40 ರಿಂದ 50 ರಷ್ಟು ಪ್ರೇಕ್ಷಕರಿದ್ದರೆ ವೀಕೆಂಡ್ ನಲ್ಲಿ ಹೌಸ್ ಫುಲ್ ಬೋರ್ಡ್ ಕಾಣಬಹುದು.

ಶಾರುಖ್ -ಕಾಜೋಲ್ ನೋಡುವುದಕ್ಕೆ ಜನ ಮತ್ತೆ ಮತ್ತೆ ಬರುತ್ತಾರೆ. ಜೊತೆ ಚಿತ್ರದ ಮ್ಯೂಸಿಕೆ ಪ್ಲಸ್ ಪಾಯಿಂಟ್, ಅದಿತ್ಯಾ ಛೋಪ್ರಾ ಹಾಗೂ ನಾನು ನಮಗೆ ಬೇಕೆನಿಸುವಷ್ಟು ವಾರ ಚಿತ್ರವನ್ನು ಪ್ರದರ್ಶಿಸುತ್ತೇವೆ ಎಂದು ದೇಸಾಯಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಎನ್ನಾರೈ ಯುವಕನೊಬ್ಬ ಸಹಪಯಣಿಗಳಾದ ಯುವತಿಯೊಂದಿಗೆ ಮೋಹಗೊಂಡು ಆಕೆಯನ್ನು ಹಿಂಬಾಳಿಸಿಕೊಂಡು ಆಕೆಯ ಊರು ತಲುಪಿ, ಆಕೆಯ ಮನೆ ಹಾಗೂ ಮನ ಗೆಲ್ಲುವ ಸರಳ ಪ್ರೇಮಕಥೆಯನ್ನು ಡಿಡಿಎಲ್ ಜೆ ಚಿತ್ರ ಹೊಂದಿದೆ. ಈ ಚಿತ್ರದ ನಂತರ ಶಾರುಖ್ ಹಾಗೂ ಕಾಜೋಲ್ ಅವರು ತೆರೆಯ ಮೇಲಿನ ಅತ್ಯುತ್ತಮ ಪ್ರಣಯ ಜೋಡಿಗಳು ಎಂದು ಹೆಸರುವಾಸಿಯಾದರು.

English summary
Quashing reports that Dilwale Duhania Le Jayenge (DDLJ) will be removed from Maratha Mandir in December after running for 19 years, its managing director Manoj Desai said that the news is "false".Myself and Aditya Chopra will continue to show the film in Maratha Mandir as long as we want to," he added.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada