For Quick Alerts
  ALLOW NOTIFICATIONS  
  For Daily Alerts

  ಆದಿ ಪುರುಷ್ ಚಿತ್ರದ ಬಿಡುಗಡೆ ದಿನಾಂಕ ಕನ್ಫರ್ಮ್; ಪ್ರಭಾಸ್ ಅಭಿಮಾನಿಗಳಿಗೆ ಸಮಾಧಾನ

  |

  ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಆದಿಪುರುಷ್ ಚಿತ್ರದ ಬಿಡುಗಡೆ ಯಾವಾಗ ಎಂಬುದು ಸದ್ಯ ಭಾರೀ ಚರ್ಚೆಗೆ ಒಳಗಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಳೆದ ವಾರವಷ್ಟೇ ತೆರೆಕಂಡ ವಾರಿಸು, ತುನಿವು, ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಚಿತ್ರಗಳ ಜತೆ ಬಾಕ್ಸ್ ಆಫೀಸ್ ರೇಸ್‌ಗೆ ಇಳಿಯಬೇಕಿತ್ತು. ಹೌದು, ಆದಿಪುರುಷ್ ಚಿತ್ರವನ್ನು ಜನವರಿ 12ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಣೆ ಮಾಡಿತ್ತು.

  ನಿರ್ದೇಶಕ ಓಂ ರೌತ್ ಸಹ ಆದಿಪುರುಷ್ ಜನವರಿ 12ರಂದು ತೆರೆಕಾಣಲಿದೆ ಎಂದು ಹಲವಾರು ಬಾರಿ ಪೋಸ್ಟ್ ಮಾಡಿದ್ದರು. ಆದರೆ ಚಿತ್ರದ ಟೀಸರ್ ಕುರಿತು ಉಂಟಾದ ತೀವ್ರ ಟೀಕೆಯ ಬಳಿಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಚಿತ್ರದ ವಿಷುಯಲ್ ಅನ್ನು ನೀವು ಮತ್ತೊಂದು ಹಂತದಲ್ಲಿ ಅನುಭವಿಸಬೇಕು ಎಂಬ ಕಾರಣದಿಂದಾಗಿ ಚಿತ್ರದ ಕೆಲಸಗಳನ್ನು ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಿದೆ, ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದು, ಚಿತ್ರ 2023 ರ ಜೂನ್ 16 ರಂದು ತೆರೆಗೆ ಬರಲಿದೆ ಎಂದು ಓಂ ರೌತ್ ತಿಳಿಸಿದ್ದರು.

  ಹೀಗೆ ತಮ್ಮ ನೆಚ್ಚಿನ ನಟನ ಚಿತ್ರ ಆರು ತಿಂಗಳು ಮುಂದೂಡಿಕೆಯಾಗಿದ್ದನ್ನು ಕಂಡ ಪ್ರಭಾಸ್ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಹೀಗೆ ಮೊದಲೇ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ ಎಂಬ ಬೇಸರದಲ್ಲಿದ್ದ ಪ್ರಭಾಸ್ ಅಭಿಮಾನಿಗಳಿಗೆ ಚಿತ್ರ ಜೂನ್ ತಿಂಗಳಿನಲ್ಲೂ ಸಹ ಬಿಡುಗಡೆಯಾಗುವುದಿಲ್ಲ ಎಂದು ಹರಿದಾಡಿದ ಸುದ್ದಿಗಳು ಮತ್ತಷ್ಟು ಬೇಸರವನ್ನು ತಂದೊಡ್ಡಿತ್ತು.

  ಹೌದು, ಕಳೆದ ಕೆಲ ದಿನಗಳಿಂದ ಆದಿಪುರುಷ್ ಜೂನ್ 16 ರಂದು ಸಹ ಬಿಡುಗಡೆಯಾಗುವುದು ಅನುಮಾನ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸಲುವಾಗಿ ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16 ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಹೌದು, ನಿನ್ನೆ ( ಜನವರಿ 17 ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ ಆದಿಪುರುಷ್ ಬಿಡುಗಡೆಗೆ ಇನ್ನು 150 ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

  English summary
  Om Raut reconfirms the release date of Adipurush
  Wednesday, January 18, 2023, 8:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X