»   » ಪದ್ಮ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ಮಿಂಚುವ ತಾರೆಗಳು

ಪದ್ಮ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ಮಿಂಚುವ ತಾರೆಗಳು

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಾಳೆ (ಜನವರಿ 26) ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವರ್ಷದ ಪ್ರಸಕ್ತ ಸಾಲಿನ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ.

  ಈ ಬಾರಿ ಸಿನಿಮಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಕೆಲವಾರು ಸಾಧಕರು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿಯನ್ನು ನಮ್ಮ ಹೆಮ್ಮೆಯ ರಾ‍ಷ್ಟ್ರಪತಿಗಳು ನಾಳೆ ಗಣರಾಜ್ಯೋತ್ಸವ(ಜನವರಿ 26) ದಿನದಂದು ಪ್ರದಾನ ಮಾಡಲಿದ್ದಾರೆ.[ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ ]

  ಈ ವರ್ಷ 8 'ಪದ್ಮ ವಿಭೂಷಣ', 19 'ಪದ್ಮ ಭೂಷಣ' ಮತ್ತು 87 'ಪದ್ಮಶ್ರೀ' ಪ್ರಶಸ್ತಿಗಳನ್ನು ಅರ್ಹರಿಗೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಲಿದ್ದಾರೆ.

  ಕ್ರೀಡಾ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಉದ್ಯಮ ಕ್ಷೇತ್ರ ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಗಳು ಸಂದಿವೆ. ವಿಶೇಷವಾಗಿ ಸಿನಿಮಾ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಸಂದಿದ್ದು, ಯಾರು ಅಂತಹ ಮಹಾನ್ ವ್ಯಕ್ತಿಗಳು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್

  ಸುಮಾರು 65ರ ಹರೆಯದ ಆಸು-ಪಾಸಿನಲ್ಲಿರುವ ವಿಶಾಲ ಹೃದಯಿ, ಸಮಾಜ ಸೇವಕ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿ ಕೋಟ್ಯಾನುಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿರುವ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿ 'ಪದ್ಮ ವಿಭೂಷಣ' ಪ್ರಶಸ್ತಿ ಲಭಿಸಿದೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಸ್ತುತ 'ಕಬಾಲಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಜನಿ ಅವರು ಕನ್ನಡ ಮತ್ತು ಹಿಂದಿ ಭಾಷೆ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2000ನೇ ಇಸವಿಯಲ್ಲಿ ರಜನಿಕಾಂತ್ ಅವರಿಗೆ 'ಪದ್ಮ ಭೂಷಣ' ಪ್ರಶಸ್ತಿ ಲಭಿಸಿತ್ತು ಇದೀಗ ಎರಡನೇ ಬಾರಿ ಕೇಂದ್ರ ಸರ್ಕಾರ 'ಪದ್ಮ ವಿಭೂಷಣ' ಪ್ರಶಸ್ತಿ ಪ್ರದಾನ ಮಾಡಿದೆ.[ಪದ್ಮ ಪ್ರಶಸ್ತಿ : ತೂರಿಬಂದ ವಿಡಂಬನೆಯ ಟ್ವೀಕಾಸ್ತ್ರಗಳು ]

  ತೆಲುಗು ನಿರ್ದೇಶಕ ಎಸ್.ಎಸ್ ರಾಜಮೌಳಿ

  ಇತ್ತೀಚೆಗೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಬಿಗ್ ಬಜೆಟ್ ನ ಸಿನಿಮಾ 'ಬಾಹುಬಲಿ' ಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಕೇಂದ್ರ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಲಿದೆ. ಸುಮಾರು 42 ವರ್ಷ ವಯಸ್ಸಿನ ನಿರ್ದೇಶಕ ರಾಜ ಮೌಳಿ ಅವರು 'ಮಗಧೀರ' 'ಈಗ' ನಂತರ 'ಬಾಹುಬಲಿ' ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಸದ್ಯಕ್ಕೆ 'ಬಾಹುಬಲಿ 2' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕರು ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿಗಳ ಅಮೃತ ಹಸ್ತದಿಂದ 'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಲಿದ್ದಾರೆ.

  ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ

  ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಪ್ರಿಯಾಂಕ ಛೋಪ್ರಾ ಅವರು 'ಕ್ವಾಂಟಿಕೋ' ಸೀರಿಯಲ್ ಮೂಲಕ ಹಾಲಿವುಡ್ ಕ್ಷೇತ್ರದಲ್ಲೂ ಮಿಂಚಿದ್ದರು. ಅಲ್ಲದೇ ಅಮೇರಿಕದಲ್ಲಿ ಅವರಿಗೆ ಹಲವಾರು ಪ್ರಶಸ್ತಿ ಸಂದಿವೆ. 'ಬಾಜೀರಾವ್ ಮಸ್ತಾನಿ' ಸಿನಿಮಾದಲ್ಲಿ ಕಾಶೀಭಾಯಿಯಾಗಿ ಮಿಂಚಿದ್ದ ನಟಿಗೆ ಈ ಬಾರಿಯ ಫಿಲ್ಮ್ ಫೇರ್ ಆವಾರ್ಡ್ ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು. 33 ವರ್ಷದ ಈ ಚೆಲುವೆ ನಾಳೆ ರಾಷ್ಟ್ರಪತಿಗಳ ಕೈಯಿಂದ 'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಲಿದ್ದಾರೆ.

  ಬಾಲಿವುಡ್ ನಟ ಅನುಪಮ್ ಖೇರ್

  ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರು ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಈ ನಟನಿಗೆ ಕೇಂದ್ರ ಸರ್ಕಾರ ಕೊಡಮಾಡುವ ಅಪರೂಪದ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಭೂಷಣ' ಪ್ರಶಸ್ತಿ ಲಭಿಸಿದೆ. ಸುಮಾರು 63 ವರ್ಷ ವಯಸ್ಸಿನ ಹಿರಿಯ ನಟ, ನಿರ್ದೇಶಕ ಕಮ್ ನಿರ್ಮಾಪಕ ಅನುಪಮ ಖೇರ್ ಅವರು ನಾಳೆ ರಾಷ್ಟ್ರಪತಿಗಳ ಹಸ್ತದಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಭಾರತೀಯ ಸಿನಿಮಾದಲ್ಲಿ ಅನುಪಮ್ ಅವರ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ 2004 ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ 'ಪದ್ಮ ಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಈ ಅಪರೂಪದ ನಟ ಕೊನೆಯದಾಗಿ ನಟಿಸಿದ ಚಿತ್ರ 'ಪ್ರೇಮ್ ರತನ್ ಧನ್ ಪಾಯೋ'. ಅಸಹಿಷ್ಣುತೆ ಬಗ್ಗೆ ಮಾತನಾಡಿದ ನಟ ಅನುಪಮ್ ಖೇರ್ ಅವರಿಗೆ 'ಪದ್ಮ ಭೂಷಣ' ಪ್ರಶಸ್ತಿ ನೀಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

  ಬಾಲಿವುಡ್ ನಟ ಅಜಯ್ ದೇವಗನ್

  ಸುಮಾರು 46 ವರ್ಷ ವಯಸ್ಸಿನ ಬಾಲಿವುಡ್ ನಟ ಅಜಯ್ ದೇವಗನ್ ಅವರು ಭಾರತ ಸರ್ಕಾರ ನೀಡುವ 'ಪದ್ಮಶ್ರೀ' ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿದ್ದು, ಜನವರಿ 26 ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪಂಜಾಬಿ ಕುಟುಂಬದ ಕುಡಿ ಅಜಯ್ ಅವರು ನಟಿ ಕಾಜೋಲ್ ಅವರನ್ನು ವರಿಸಿದ್ದಾರೆ. ಬಾಲಿವುಡ್ ನಲ್ಲಿ ಸಾಧನೆ ಮಾಡಿದ್ದಕ್ಕೆ ಮತ್ತು 'ಸಿಂಗಂ' ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಇವರಿಗೆ ರಾಜೀವ್ ಗಾಂಧಿ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಬಾಲಿವುಡ್ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ನಟ ಅಜಯ್ ದೇವಗನ್ ಅವರು ನಟಿಸಿದ ಕೊನೆಯ ಚಿತ್ರ 'ದೃಶ್ಯಂ'.

  ಗಾಯಕ ಉದಿತ್ ನಾರಾಯಣ್

  ನೇಪಾಳಿ ಪ್ರಾಂತ್ಯದ ಹಿನ್ನಲೆ ಗಾಯಕ ಉದಿತ್ ನಾರಾಯಣ್ ಅವರು ನೇಪಾಳಿ, ಭೋಜ್ ಪುರಿ, ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ,ಪಂಜಾಬಿ, ಸಿಂಧಿ, ಮಣಿಪುರಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಹಿನ್ನಲೆ ಗಾಯಕ ಉದಿತ್ ಅವರು ಮಾಡಿದ ಸಾಧನೆಗೆ 2009ರಲ್ಲಿ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಮತ್ತೊಮ್ಮೆ 'ಪದ್ಮಭೂಷಣ' ಪ್ರಶಸ್ತಿ ನೀಡಿ ನಾಳೆ ಗೌರವಿಸಲಿದೆ. ಸುಮಾರು 60 ವರ್ಷ ವಯಸ್ಸಿನ ಗಾಯಕರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಕನ್ನಡದಲ್ಲಿ ಉದಿತ್ ನಾರಾಯಣ್ ಅವರು ಹಾಡಿದ 'ಆಪ್ತಮಿತ್ರ' ಚಿತ್ರದ 'ಪಟ ಪಟ ಹಾರೋ ಗಾಳಿಪಟ' ಹಾಡು ಈಗಲೂ ಎಲ್ಲರ ಹಾಟ್ ಫೇವರಿಟ್ ಸಾಂಗ್ ಆಗಿದೆ

  ನಿರ್ದೇಶಕ ಮಧುರ್ ಭಂಡಾರ್ಕರ್

  ಹಿಂದಿ ಚಿತ್ರರಂಗ ಕ್ಷೇತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ ಭಾರತ ಸರ್ಕಾರ ನೀಡುವ 'ಪದ್ಮಶ್ರೀ' ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಬಾಚಿಕೊಂಡಿರುವ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ನಾಳೆ ಪ್ರಶಸ್ತಿ 'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಲಿದ್ದಾರೆ. 'ಹೀರೋಯಿನ್' ಮತ್ತು 'ಫ್ಯಾಶನ್' ಸಿನಿಮಾ ಮಾಡಿ ಸುದ್ದಿ ಮಾಡಿದ್ದ ನಿರ್ದೇಶಕರು ಇತ್ತೀಚೆಗೆ 'ಕ್ಯಾಲೆಂಡರ್ ಗರ್ಲ್ಸ್' ಎಂಬ ವಿಭಿನ್ನ ಸಿನಿಮಾ ಮಾಡಿ ಸಾಕಷ್ಟು ಸುದ್ದಿಯಾದರು. ಇನ್ನು ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ನೀಡಿದ್ದಕ್ಕಾಗಿ ಟ್ವಿಟ್ಟರ್ ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದೆ. ಅತ್ಯಾಚಾರ ಆರೋಪಿಗೆ 'ಪದ್ಮಶ್ರೀ' ಕೊಟ್ಟಿದ್ದಾಗಿ ಟ್ವಿಟ್ಟರ್ ನಲ್ಲಿ ಆರೋಪ ವ್ಯಕ್ತವಾಗಿದೆ.

  English summary
  Superstar Rajinikanth awarded Padma Vibhushan. While Bollywood actors Ajay Devgn and Priyanka Chopra have got Padma Shri. Veterana actor Anupam Kher and singer Udit Narayan have been awarded Padma Bhushan. Here is the complete details Check out.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more