»   » ಶಾರುಖ್ ಖಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ

ಶಾರುಖ್ ಖಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ

Posted By:
Subscribe to Filmibeat Kannada

ನಟ ಸೈಫ್ ಆಲಿ ಖಾನ್ ಅವರ 'ಏಜೆಂಟ್ ವಿನೋದ್' ಹಾಗೂ ಸಲ್ಮಾನ್ ಖಾನ್ 'ಏಕ್ ಥಾ ಟೈಗರ್' ಚಿತ್ರಗಳ ಬಳಿಕ ಪಾಕಿಸ್ತಾನ ಈಗ ಮತ್ತೊಂದು ಭಾರತೀಯ ಚಿತ್ರಕ್ಕೆ ನಿಷೇಧ ಹೇರಿದೆ. ಕಿಂಗ್ ಖಾನ್ ಶಾರುಖ್ ಖಾನ್ ಹೊಚ್ಚಹೊಸ 'ಜಬ್ ತಕ್ ಹೈ ಜಾನ್' ಚಿತ್ರವನ್ನು ಪಾಕಿಸ್ತಾನ ನಿಷೇಧಿಸಿದೆ.

ಇತ್ತೀಚೆಗಷ್ಟೇ ಡೆಂಘಿ ಜ್ವರಕ್ಕೆ ಬಲಿಯಾದ ಯಶ್ ಚೋಪ್ರಾ ನಿರ್ದೇಶನದ ಕಟ್ಟಕಡೆಯ ಚಿತ್ರವಿದು. ಶಾರುಖ್ ಖಾನ್, ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನುತ್ತವೆ ಮೂಲಗಳು.

ಚಿತ್ರದಲ್ಲಿ ಕಾಶ್ಮೀರದ ಬಗ್ಗೆ ಪ್ರಸ್ತಾಪವಿದ್ದು, ಸೈನಿಕ ಕಾರ್ಯಾಚರಣೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳುತ್ತಾನೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರಕ್ಕೆ ಪಾಕಿಸ್ತಾನ ನಿಷೇಧಿಸಿದೆ ಎನ್ನಲಾಗಿದೆ. ನವೆಂಬರ್ 13ರಂದು 'ಜಬ್ ತಕ್ ಹೈ ಜಾನ್' ಚಿತ್ರ ಬಿಡುಗಡೆಯಾಗುತ್ತಿದೆ.

'ಜಬ್ ತಕ್ ಹೈ ಜಾನ್' ಚಿತ್ರದ ಟ್ರೇಲರ್ ಗಳ ಪ್ರಸಾರವನ್ನೂ ಅಲ್ಲಿನ ಟಿವಿ ವಾಹಿನಿಗಳು ನಿಲ್ಲಿಸಿವೆ. ಚಿತ್ರದಲ್ಲಿ ಶಾರುಖ್ ಅವರು ಭಾರತೀಯ ಭೂಸೇಯ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಯಾಗಿ ಕಾಣಿಸಲಿದ್ದಾರೆ. ಕಾಶ್ಮೀರದ ಪ್ರಚಲಿತ ಸಮಸ್ಯೆ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ಹಾಗಾಗಿಯೇ ಪಾಕ್ ಈ ಚಿತ್ರಕ್ಕೆ ನಿಷೇಧ ಹೇರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಾಲಿವುಡ್ ಚಿತ್ರರಂಗದ 'ಪ್ರಣಯ ರಾಜ' ಯಶ್ ಚೋಪ್ರಾ ನಿರ್ದೇಶನದ ಕೊನೆಯ ಚಿತ್ರ ಇದಾಗಿದೆ. ತಮ್ಮ 80ನೇ ಹುಟ್ಟುಹಬ್ಬ ಸಮಯದಲ್ಲಿ ಅವರು ಇದೇ ತಮ್ಮ ಕೊನೆಯ ಚಿತ್ರ. 'ಜಬ್ ತಕ್ ಹೈ ಜಾನ್' ಚಿತ್ರದ ಬಳಿಕ ತಾವು ನಿವೃತ್ತಿಯಾಗುತ್ತಿರುವುದಾಗಿ ಘೋಷಿಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

English summary
After banning Saif Ali Khan's Agent Vinod and Salman Khan's Ek Tha Tiger, now its Jab Tak Hai Jaan's turn to get banned in Pakistan. Rumour has it that Yash Chopra's Jab Tak Hai Jaan might not get clearance from the Pakistani censor board.
Please Wait while comments are loading...