Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
- Sports
ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇರ್ಫಾನ್ ಖಾನ್, ಶ್ರೀದೇವಿ ಸಾವಿನ ಬಗ್ಗೆ ಕುಹಕವಾಡಿದ ಪಾಕಿಸ್ತಾನಿ ನಿರೂಪಕ
ಶ್ರೀದೇವಿ ಮತ್ತು ಇರ್ಫಾನ್ ಖಾನ್ ಅವರ ಸಾವಿನ ವಿಚಾರದ ಕುರಿತು ಪಾಕಿಸ್ತಾನದ ಟಿವಿ ನಿರೂಪಕನೊಬ್ಬ ಅವಹೇಳನಾಕಾರಿ ಮಾತುಗಳನ್ನಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಟೆಲಿವಿಷನ್ ನಿರೂಪಕ ಆಮೀರ್ ಲಿಯಾಖತ್ ಹುಸೇನ್ 'ಜೀವೇ ಪಾಕಿಸ್ತಾನ್' ಕಾರ್ಯಕ್ರಮದಲ್ಲಿ ಶ್ರೀದೇವಿ ಮತ್ತು ಇರ್ಫಾನ್ ಇಬ್ಬರೊಂದಿಗೂ ಸಿನಿಮಾದಲ್ಲಿ ನಟಿಸಿರುವ ನಟ ಅದ್ನಾನ್ ಸಿದ್ದಿಕಿ ಜತೆ ಮಾತನಾಡುವಾಗ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ
ನೀವು 'ಮಾಮ್' ಚಿತ್ರದಲ್ಲಿ ಕೆಲಸ ಮಾಡಿದಿರಿ ಅದರಲ್ಲಿ ನಟಿಸಿದ್ದ ಶ್ರೀದೇವಿ ಸತ್ತು ಹೋದರು. ನೀವು ಇರ್ಫಾನ್ ಖಾನ್ ಜತೆಗೂ ನಟಿಸಿದಿರಿ. ಅವರೂ ಕೂಡ ಸತ್ತುಹೋದರು. ನಿಮಗೆ 'ಮರ್ದಾನಿ 2' ಮತ್ತು 'ಜಿಸ್ಮ್ 2' ಚಿತ್ರಗಳಿಂದ ಬಂದ ಅವಕಾಶವನ್ನು ತಿರಸ್ಕರಿಸಿದ್ದಿರಿ. ನಿಮ್ಮಿಂದಾಗಿ ಆ ಚಿತ್ರದ ಕಲಾವಿದರು ಬದುಕಿಕೊಂಡರು ಎಂದು ಲಿಯಾಖತ್ ಹುಸೇನ್, ಅದ್ನಾನ್ ಸಿದ್ದಿಕಿಗೆ ಹೇಳಿದ್ದರು. ಮುಂದೆ ಓದಿ...

ನೆಟ್ಟಿಗರಿಂದ ವಿರೋಧ
ಈ ಹೇಳಿಕೆ ನೆಟ್ಟಿಗರಲ್ಲಿ ತೀವ್ರ ಕೋಪ ತರಿಸಿತ್ತು. ಇದು ತೀರಾ ಸಂವೇದನಾರಹಿತ ಹೇಳಿಕೆ. ಸಾವಿನ ಕುರಿತು ಈ ರೀತಿ ಅವಹೇಳನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹುಸೇನ್ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಇದರ ಬಳಿಕ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಹುಸೇನ್ ಕ್ಷಮಾಪಣಾ ಹೇಳಿಕೆ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

ಹಿಡಿತ ಕಳೆದುಕೊಂಡು ಹೇಳಿದೆ, ಕ್ಷಮಿಸಿ
'ಕೆಲವೊಮ್ಮೆ ನಾವು ಮಾತಿನ ಮೇಲಿನ ಹಿಡಿತ ಕಳೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಅದು ದೊಡ್ಡ ವಿಷಯ ಎಂದೆನಿಸುವುದಿಲ್ಲ. ಆದರೆ ನಾನು ಅದರ ಬಗ್ಗೆ ಆ ನಂತರ ಯೋಚಿಸಿದೆ. ಅದು ಸೂಕ್ತವಾದ ಹೇಳಿಕೆಯಲ್ಲ ಎಂದು ನನಗೆ ಅರಿವಾಯಿತು. ಅದರಿಂದಾಗಿ ನಾನು ಕ್ಷಮಾಪಣೆ ಕೋರುತ್ತೇನೆ. ಮಾನವೀಯತೆಯನ್ನು ಮನಸಲ್ಲಿಟ್ಟುಕೊಂಡು, ನಾನು ಈ ಮಾತನ್ನು ಹೇಳಬಾರದಿತ್ತು. ನಾನು ತಪ್ಪು ಮಾಡಿದ್ದೇನೆ' ಎಂದು ಲಿಯಾಖತ್ ಹುಸೇನ್ ಹೇಳಿದ್ದಾರೆ.

ದುರದೃಷ್ಟಕರ ಘಟನೆ
ಅದ್ನಾನ್ ಸಿದ್ದಿಕಿ ಕೂಡ ಹೇಳಿಕೆ ನೀಡಿದ್ದು, 'ನನಗೆ ಈಗ ಹೇಗೆ ಅನಿಸುತ್ತಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದರ ಬಗ್ಗೆ ಬಗೆಹರಿಸಬೇಕಿದೆ. ನನಗೆ ಕಾರ್ಯಕ್ರಮಕ್ಕೆ ನಿನ್ನೆ ಆಹ್ವಾನ ಬಂದಿತ್ತು. ಆಗ ಈ ದುರದೃಷ್ಟಕರ ಘಟನೆ ನಡೆದಿದೆ. ಬಹಳ ಸಂವೇದನಾಕಾರಿ ಸಂಗತಿಯ ಬಗ್ಗೆ ಲಿಯಾಖತ್ ಅವರು ಜೋಕ್ ಮಾಡಿದ್ದರು. ಅವರಿಬ್ಬರೂ ನನಗೆ ಬಹಳ ಆತ್ಮೀಯರಾಗಿದ್ದರು ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ನನಗೆ ಇದು ಅನೇಕ ಹಂತಗಳಲ್ಲಿ ತಪ್ಪು ಎಂದು ಎನಿಸುತ್ತದೆ' ಎಂದು ಹೇಳಿದ್ದಾರೆ.
ಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವು

ಎಲ್ಲರ ಕ್ಷಮೆ ಕೋರುತ್ತೇನೆ
ಅದ್ನಾನ್ ಅವರು 2007ರಲ್ಲಿ ಇರ್ಫಾನ್ ಖಾನ್ ಜತೆ 'ಎ ಮೈಟೀ ಹಾರ್ಟ್'ನಲ್ಲಿ ಕೆಲಸ ಮಾಡಿದ್ದರು. 'ಮೃತರಾದವರ ಕುರಿತು ಜೋಕ್ ಮಾಡುವುದು ತೀರಾ ಹೀನ ಕೃತ್ಯ. ಇದು ಬಹಳ ಕೆಟ್ಟ ಅಭಿರುಚಿ. ಅಲ್ಲದೆ ಇದು ಅವರನ್ನು ಹಾಗೂ ನನ್ನನ್ನು ಮಾತ್ರವಲ್ಲ, ಇಡೀ ದೇಶಕ್ಕೆ ಕೆಟ್ಟ ಹೆಸರು ತರುತ್ತದೆ. ಹೀಗಾಗಿ ಶ್ರೀದೇವಿ ಮತ್ತು ಇರ್ಫಾನ್ ಖಾನ್ ಅವರ ಕುಟುಂಬಗಳು, ಅವರ ಪ್ರೀತಿ ಪಾತ್ರರು ಹಾಗೂ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.

ಇದರಿಂದ ನಾನು ಪಾಠ ಕಲಿಕೆ
'ಆ ಸಂದರ್ಭದಲ್ಲಿ ನೀವು ನನ್ನ ದೇಹಭಾಷೆಯನ್ನು ನೋಡಿರಬಹುದು. ಅವರು ಹೇಳಿದ ಮಾತು ನನಗೆ ಬಹಳ ಕಸಿವಿಸಿ ಉಂಟುಮಾಡಿತು. ಆದರೆ ನಾನು ಅವರ ಮಟ್ಟಕ್ಕೆ ಇಳಿಯಲು ಬಯಸಲಿಲ್ಲ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಇದರಿಂದ ನಾನು ಪಾಠ ಕಲಿತಿದ್ದೇನೆ. ಭವಿಷ್ಯದಲ್ಲಿ ಇಂತಹ ಕೃತ್ಯವನ್ನು ನಾನು ಖಂಡಿತಾ ಸಹಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಈ ತುಣಕು ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದಿಲ್ಲ ಎಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಅದು ಪ್ರಸಾರವಾಯಿತು. ಈ ತಪ್ಪಿಗಾಗಿ ಕ್ಷಮೆ ಕೋರುತ್ತೇನೆ' ಎಂದು ಹೇಳಿದ್ದಾರೆ.