For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ ತಂದೆಯಾಗುತ್ತಿದ್ದಾರಾ? ಅಭಿಮಾನಿಯ ಪ್ರಶ್ನೆಗೆ ಪರಿಣೀತಿ ಚೋಪ್ರಾ ಉತ್ತರ ಹೀಗಿತ್ತು

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್‌ನ ಸ್ಟಾರ್ ಸುಂದರ ಜೋಡಿಗಳಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಕೂಡ ಒಂದು. ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಈ ಜೋಡಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ನಟಿ ಪರಿಣೀತಿ ಚೋಪ್ರಾ. ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ 'ಆಸ್ಕ್ ಮಿ ಎನಿಥಿಂಗ್' ಸೆಶನ್ ನಡೆಸಿದ್ದರು. ಪರಿಣೀತಿಗೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ.

  ಅಭಿಮಾನಿಯೊಬ್ಬ ಪರಿಣೀತಿ ಬಳಿ ರಣ್ವೀರ್ ಸಿಂಗ್ ತಂದೆಯಾಗುತ್ತಿದ್ದಾರಾ ಎಂದು ಕೇಳಿದ್ದಾರೆ. ನಟಿ ಪರಿಣೀತಿ ಅಭಿಮಾನಿ ಕೇಳಿದ ಪ್ರಶ್ನೆಯ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿ ಉತ್ತರಿಸಿದ್ದಾರೆ. ಪರಿಣೀತಿ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಣೀತಿ 'ದಯವಿಟ್ಟು ಖಚಿತ ಪಡಿಸುತ್ತೀರಾ' ಎಂದು ರಣ್ವೀರ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಬ್ಬರು ಆಸ್ಪತ್ರೆಯಿಂದ ಹೊರ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ದಿಪೀಕಾ ಗರ್ಭಿಣಿನಾ ಎನ್ನುವ ಅನುಮಾನ ಮೂಡಿಸಿತ್ತು. ಅನೇಕರು ಕಾಮೆಂಟ್ ಮಾಡಿ ದೀಪಿಕಾ ಗರ್ಭಿಣಿ ಆಗಿದ್ದಾರ ಎನ್ನುವ ಕಾಮೆಂಟ್ ಮಾಡಿದ್ದರು. ಆದರೆ ರಣ್ವೀರ್ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

  ಅಂದಹಾಗೆ ದೀಪಿಕಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆ ಕೂಡ ಅಂದರೆ 2019ರಲ್ಲೂ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೀಪಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಆದರೆ ಕೆಲವು ತಿಂಗಳ ಬಳಿಕ ದೀಪಿಕಾ ಗರ್ಭಿಣಿ ಎನ್ನುವ ಗಾಳಿಸುದ್ದಿ ಬಗ್ಗೆ ಮೌನ ಮುರಿದಿದ್ದರು. ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ್ದರು. "ಸಂಭವಿಸಬೇಕಾದಾಗ ಅದು ಸಂಭವಿಸುತ್ತದೆ" ಎಂದು ಖಡಕ್ ಆಗಿ ಹೇಳಿದ್ದರು. ಈ ಮೂಲಕ ಗಾಳಿಸುದ್ದಿದೆ ಬ್ರೇಕ್ ಹಾಕಿದ್ದರು.

  ಅಂದಹಾಗೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಪ್ರೀತಿಸಿ ಮದುವೆಯಾದವರು. 2018ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೊದಲ ಬಾರಿಗೆ ರಣ್ವೀರ್ ಮತ್ತು ದೀಪಿಕಾ 'ಗೋಲಿಯೋನ್ ಕಿ ರಾಸ್ಲೀಲ ರಾಮ್ ಲೀಲಾ' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಪ್ರಾರಂಭವಾದ ಇಬ್ಬರ ಪ್ರೀತಿ ಬಳಿಕ ಪತಿ-ಪತ್ನಿಯರನ್ನಾಗಿ ಮಾಡಿದೆ.

   Parineeti Chopra reaction to fan question about ranveer singh become father

  2018ರಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಟಲಿಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ಏರ್ಪಡಿಸಿದ್ದರು. ಚಿತ್ರರಂಗದ ಗಣ್ಯರು ಸೇರಿದಂತೆ ಬಹುತೇಕ ಎಲ್ಲಾ ರಂಗದ ಗಣ್ಯರು ಭಾಗಿಯಾಗಿ ದೀಪಿಕಾ-ರಣ್ವೀರ್ ಜೋಡಿಗೆ ಶುಭಹಾರೈಸಿದ್ದರು.

  ದೀಪಿಕಾ ಮತ್ತು ರಣ್ವೀರ್ ರಾಮ್ ಲೀಲಾ ಬಳಿಕ ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಲ್ಲಿ ಒಟ್ಟಿಗೆನಟಿಸಿದ್ದಾರೆ. ಸದ್ಯ ಈ ಜೋಡಿ ಕ್ರಿಕೆಟ್ ಆಧಾರಿತ '83' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೆ ದೀಪಿಕಾ ತೆಲುಗು ಸ್ಟಾರ್ ನಟ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಮೊದಲ ಬಾರಿಗೆ ಪ್ರಭಾಸ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಚಿತ್ರಕ್ಕೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Actress Parineeti Chopra reaction to fan question about ranveer singh become father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X