Don't Miss!
- News
Republic Day: ಗಣರಾಜ್ಯೋತ್ಸವ ಪರೇಡ್ಗೆ ಹಾಜರಾಗುವುದು, ಟಿಕೆಟ್ ಖರೀದಿಸುವುದು ಹೇಗೆ; ವಿವರಗಳು ಇಲ್ಲಿವೆ
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pathaan Box Office Day 1: ಮೊದಲ ದಿನ 62 ಕೋಟಿ ರೂ. ಕಲೆಕ್ಷನ್.. 'ಕೆಜಿಎಫ್ 2' ದಾಖಲೆ ಮುರಿದ್ರಾ ಕಿಂಗ್!
'ಪಠಾಣ್' ಸಿನಿಮಾ ವಿಶ್ವದಾದ್ಯಂತ ಇಂದು (ಜನವರಿ 25) ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಅಂದುಕೊಂಡಂತೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಕಿಂಗ್ ಖಾನ್ ಸಿನಿಮಾಗೆ ಹಿಂದಿ ಬೆಲ್ಟ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್‌ನಿಂದ್ಲೇ ಸಿನಿಮಾ ಕೋಟಿ ಕೋಟಿ ಕಲೆ ಹಾಕಿತ್ತು. ಟಿಕೆಟ್ ಖರೀದಿ ವಿಚಾರದಲ್ಲೂ ರಾಕಿ ಭಾಯಿಯ 'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು ಮುರಿದಿತ್ತು. ಈ ಕಾರಣಕ್ಕೆ 'ಪಠಾಣ್' ಯಶ್ ಪ್ಯಾನ್ ಇಂಡಿಯಾ ಸಿನಿಮಾದ 'ಕೆಜಿಎಫ್ 2' ಕಲೆಕ್ಷನ್ ರೆಕಾರ್ಡ್ ಅನ್ನು ಬ್ರೇಕ್ ಮಾಡುತ್ತೆ ಅಂದಾಜಿಸಲಾಗಿತ್ತು.
Pathaan
Movie
Release
Live:
ಹೊರಬಿತ್ತು
'ಪಠಾಣ್'
ಟ್ವಿಟ್ಟರ್
ವಿಮರ್ಶೆ,
ಹೇಗಿದೆಯಂತೆ
ಸಿನಿಮಾ?
ಮೊದಲ ದಿನ ಅಂತ್ಯದ ವೇಳೆ 'ಪಠಾಣ್' ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಿರಬಹುದು ಎಂದು ಟ್ರೇಡ್ ಅನಲಿಸ್ಟ್ ಲೆಕ್ಕಾಚಾರ ಹಾಕಿದ್ದಾರೆ. ವಿಶ್ವದಾದ್ಯಂತ 'ಪಠಾಣ್' ಸಿನಿಮಾ ಬರೋಬ್ಬರಿ 62 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಅನಲಿಸ್ಟ್ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ನಾಳೆ ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಹೊರಬೀಳುವ ಸಾಧ್ಯತೆಯಿದೆ.

'ಪಠಾಣ್' ಫಸ್ಟ್ ಡೇ ರೆಸ್ಪಾನ್ಸ್ ಹೇಗಿದೆ?
ಶಾರುಖ್ ಖಾನ್ ಕಮ್ ಬ್ಯಾಕ್ ಸಿನಿಮಾ 'ಪಠಾಣ್' ಮೊದಲ ದಿನವೇ ಅದ್ಭುತ ಗಳಿಕೆ ಕಂಡಿದೆ. ಹಿಂದಿ ಬೆಲ್ಟ್‌ಗಳಲ್ಲಿ ಸಿನಿಮಾ ಸಖತ್ ಕಲೆಕ್ಷನ್ ಮಾಡಿದೆ. ಎಲ್ಲಾ ಭಾಷೆಯಿಂದಲೂ ಭಾರತದಾದ್ಯಂತ ಸರಿ ಸುಮಾರು 62 ಕೋಟಿ ರೂ.ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜು ಹಾಕಲಾಗಿದೆ. ಅನ್‌ಲೈನ್‌ನಿಂದ 50 ಕೋಟಿ ರೂ. ಆಫ್ ಲೈನ್‌ನಿಂದ 12 ಕೋಟಿ ರೂ. ಎಂದು ಹೇಳಲಾಗುತ್ತಿದೆ.

'ಪಠಾಣ್' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?
'ಪಠಾಣ್' ಸಿನಿಮಾ ವಿಶ್ವದಾದ್ಯಂತ ಸುಮಾರು 8 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಬಾಲಿವುಡ್ ಸಿನಿಮಾವೊಂದು ದೊಡ್ಡ ಮೊತ್ತವನ್ನು ಕಲೆ ಹಾಕುವ ಸಾಧ್ಯತೆ ಎನ್ನಲಾಗುತ್ತಿದೆ. ಸದ್ಯ ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ ಸಿಕ್ಕಿದ್ದು, ವಿಶ್ವದಾದ್ಯಂತ ಎಷ್ಟಾಗಿದೆ ಅನ್ನೋದು ಇನ್ನಷ್ಟೇ ಹೊರಬೀಳಬೇಕಿದೆ. ಹೀಗಾಗಿ ರಾಕಿ ಬಾಯ್ ಸಿನಿಮಾ 'ಕೆಜಿಎಫ್ 2' ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುರಿಯುತ್ತಾ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಂಡಿದೆ.

ಇಂಡಿಯಾದಲ್ಲಿ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?
ರಾಕಿ ಬಾಯ್ ಸಿನಿಮಾ 'ಕೆಜಿಎಫ್ 2' ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಭಾರತದಾದ್ಯಂತ 'ಕೆಜಿಎಫ್ 2' ಮೊದಲ ದಿನ 138 ಕೋಟಿ ರೂ. (Gross) ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ಶಾರುಖ್ ಖಾನ್ ಸಿನಿಮಾ ಹಿಂದಿಕ್ಕುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಮೂಲಕ 'ಕೆಜಿಎಫ್ 2' ದಾಖಲೆಯನ್ನು ಮುರಿಯುವಲ್ಲಿ ಶಾರುಖ್ ಸಿನಿಮಾ ಹಿಂದೆ ಬಿದ್ದಿದೆ ಅನ್ನೋ ಸ್ಪಷ್ಟ.

ವಿಶ್ವದಾದ್ಯಂತ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?
ಯಶ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಭಾರತದಲ್ಲಿ 138 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ವಿದೇಶದಾದ್ಯಂತ ಸುಮಾರು 26 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಮೂಲಕ ವಿಶ್ವದಾದ್ಯಂತ 164 ಕೋಟಿ ರೂ. ಲೂಟಿ ಮಾಡಿತ್ತು. ಈ ದಾಖಲೆಯನ್ನು ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ಹಿಂದಕ್ಕೆ ಹಾಕುವಲ್ಲಿ ಹಿಂದೆ ಬಿದ್ದಿದೆ.