»   » ಧೂಮ್ 3 ದಾಖಲೆ ಧೂಳಿಪಟ, ಪಿಕೆ 600+ ಕೋಟಿ ರು ಗಳಿಕೆ

ಧೂಮ್ 3 ದಾಖಲೆ ಧೂಳಿಪಟ, ಪಿಕೆ 600+ ಕೋಟಿ ರು ಗಳಿಕೆ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಾರುಕಟ್ಟೆ ತಜ್ಞರ ಲೆಕ್ಕಾಚಾರ ತಲೆ ಕೆಳಗು ಮಾಡಿದ್ದ ಅಮೀರ್ ಖಾನ್ ಅವರ ಪಿಕೆ ಚಿತ್ರ ಎಲ್ಲರಿಗೂ ಅಚ್ಚರಿಯಾಗುವಂತೆ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ 17 ದಿನಕ್ಕೆ 300 ಕೋಟಿ ರು ಕ್ಲಬ್ ಅಕೌಂಟ್ ಓಪನ್ ಮಾಡಿ ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ ಎಂಬ ಪಟ್ಟ ಗಳಿಸಿದ ಬಳಿಕ ಈಗ ವಿಶ್ವದಾದ್ಯಂತ ಗಳಿಕೆ ಲೆಕ್ಕಾಚಾರದಂತೆ 600 ಕೋಟಿ ರು ದಾಟಿ ಧೂಮ್ 3 ದಾಖಲೆಯನ್ನು ಧೂಳಿಪಟ ಮಾಡಿದೆ.

ಅಮೀರ್ ಖಾನ್ ಅಭಿನಯದ ಧೂಮ್ 3 ಚಿತ್ರ 542 ಕೋಟಿ ರು ದೋಚಿ ಜಗತ್ತಿನಾದ್ಯಂತದ ಬಾಕ್ಸಾಫೀಸ್ ಗಳಿಕೆ ಲೆಕ್ಕಾಚಾರದಂತೆ ಹೊಸ ದಾಖಲೆ ನಿರ್ಮಿಸಿತ್ತು. ಈಗ ಅಮೀರ್ ಖಾನ್ ಅಭಿನಯದ ರಾಜ ಕುಮಾರ್ ಹಿರಾನಿ ನಿರ್ದೇಶನದ ಪಿಕೆ ಚಿತ್ರ ಈ ದಾಖಲೆಯನ್ನು ಮುರಿದಿದ್ದು 19 ದಿನದ ಅಂತ್ಯಕ್ಕೆ 601 ಕೋಟಿ ರು ಗಳಿಕೆ ಮಾಡಿದೆ. [ಪಿಕೆ 'ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ']

ಪಿಕೆ ಚಿತ್ರದ ಸಾಗರೋತ್ತರ ದೇಶಗಳಲ್ಲಿನ ಗಳಿಕೆ ಪ್ರಮಾಣವೂ ಹಿಗ್ಗುತ್ತಿದ್ದು ಇಲ್ಲಿ ತನಕ 23.42 ಮಿಲಿಯನ್ ಯುಎಸ್ ಡಾಲರ್ [148.54 ಕೋಟಿ ರು] ಗಳಿಸಿದೆ. ಸಾಗರೋತ್ತರ ದೇಶಗಳ ಗಳಿಕೆಯಲ್ಲಿ 150 ಕೋಟಿ ರು ಗಡಿ ಸುಲಭವಾಗಿ ದಾಟಲಿದೆ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

PK (Peekay) 19 Days Worldwide Box Office Collection

ಡಿಸೆಂಬರ್ 19ರಂದು ತೆರೆಕಂಡ 'ಪಿಕೆ' ಆ ಚಿತ್ರ ಹಾಗೂ ಹೀಗೂ ನಾಲ್ಕು ದಿನಗಳಲ್ಲಿ ನೂರು ಕೋಟಿ ಗಳಿಕೆ ದಾಟುವ ಮೂಲಕ ಮತ್ತೊಮ್ಮೆ ಆಮೀರ್ ಖಾನ್ ಯಶಸ್ವಿ ಚಿತ್ರಗಳ ಸರದಾರ ಎನಿಸಿಕೊಂಡಿದ್ದರು. ಅದರೆ, ದೇಶಿ ಮಾರುಕಟ್ಟೆಯಲ್ಲಿ 300 ಕೋಟಿ ರು ಗಡಿ ದಾಟುವುದು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದರು.


ಆದರೆ, ದೇಶಿ ಮಾರುಕಟ್ಟೆಯಲ್ಲಿ 17 ದಿನಕ್ಕೆ 300 ಕೋಟಿ ರು ಕ್ಲಬ್ ಅಕೌಂಟ್ ಓಪನ್ ಮಾಡಿ ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ ಎಂಬ ಪಟ್ಟ ಗಳಿಸಿತ್ತು. ಈಗ 317.17 ಕೋಟಿ ರು ನಿವ್ವಳ ಆದಾಯ ಪಡೆದುಕೊಂಡಿದೆ. ದೇಶಿ ಹಾಗೂ ವಿದೇಶಿ ಚಿತ್ರಮಂದಿರಗಳ ಗಳಿಕೆ ಲೆಕ್ಕ ಹಾಕಿದರೆ 601 ಕೋಟಿ ರು ಗಳಿಕೆ ದಾಟುತ್ತದೆ.

2013ರಲ್ಲಿ ಧೂಮ್-3 ಚಿತ್ರ 265 ಕೋಟಿ ಗಳಿಸಿತ್ತು, ಚೆನ್ನೈ ಎಕ್ಸ್ ಪ್ರೆಸ್ 258 ಕೋಟಿ ಹಾಗೂ ಸಲ್ಮಾನ್ ಖಾನ್‌ನ ಕಿಕ್ 2014ರಲ್ಲಿ 200 ಕೋಟಿ ರೂ. ಗಳಿಸಿತ್ತು. ಈಗ ಪಿಕೆ ಎಲ್ಲಾ ದಾಖಲೆಗಳನ್ನು ಅಳಿಸಿ ಮುನ್ನುಗ್ಗಿದೆ.

English summary
Aamir Khan's PK seems to breaking one record after the other and is setting astonishing Box Office records as well. After crossing Dhoom 3's lifetime collections PK has gone on to gross over Rs 600 crores worldwide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada