For Quick Alerts
  ALLOW NOTIFICATIONS  
  For Daily Alerts

  ಬೆತ್ತಲೆ ತಿರುಗುವುದು ತಪ್ಪು ಎನ್ನುವುದಾದರೆ ನಾಗಾ ಸಾಧುಗಳನ್ನು ಬಂಧಿಸಿ: ಪೂಜಾ ಬೇಡಿ

  |

  ಗೋವಾ ಬೀಚ್‌ನಲ್ಲಿ ನಟ ಮಿಲಿಂದ್ ಸೊಮನ್ ಬೆತ್ತಲಾಗಿ ಓಡಿದ್ದರು. ಆ ಚಿತ್ರವನ್ನು ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದ್ದರು. ಮಿಲಿಂದ್ ಅವರ ಬೆತ್ತಲೆ ಓಟ ಗೋವಾ ಪೊಲೀಸರ ಕಣ್ಣು ಕೆಂಪಗೆ ಮಾಡಿದ್ದು, ಮಿಲಿಂದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  ಆದರೆ ನಟ ಮಿಲಿಂದ್ ಸೊಮನ್ ಬೆಂಬಲಕ್ಕೆ ಬಂದಿರುವ ನಟಿ ಪೂಜಾ ಬೇಡಿ, ಮಿಲಿಂದ್ ಸೊಮನ್ ಮಾಡಿದ್ದು ತಪ್ಪಲ್ಲ ಎಂದಿದ್ದಾರೆ.

  ಮಿಲಿಂದ್ ಸೊಮನ್ ಹಂಚಿಕೊಂಡಿರುವ ಚಿತ್ರದಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಚಿತ್ರವನ್ನು ನೋಡುವವರ ಮೆದುಳಲ್ಲಿ ಸಮಸ್ಯೆ ಇದೆ. ಹಾಗಾಗಿ ಚಿತ್ರವೂ ಸಮಸ್ಯೆಯಾಗಿ, ಅಶ್ಲೀಲವಾಗಿ, ಅಸಹವ್ಯವಾಗಿ ಕಾಣುತ್ತಿದೆ ಎಂದಿದ್ದಾರೆ ಪೂಜಾ ಬೇಡಿ.

  ಮಿಲಿಂದ್ ಸೋಮನ್ ಬೆತ್ತಲೆ ಓಡಿದ್ದು ತಪ್ಪಲ್ಲ: ಪೂಜಾ ಬೇಡಿ

  ಮಿಲಿಂದ್ ಸೋಮನ್ ಬೆತ್ತಲೆ ಓಡಿದ್ದು ತಪ್ಪಲ್ಲ: ಪೂಜಾ ಬೇಡಿ

  ಮಿಲಿಂದ್ ಸೊಮನ್ ನಗ್ನವಾಗಿ ಬೀಚ್‌ನಲ್ಲಿ ಓಡಿದ್ದು ತಪ್ಪಲ್ಲ ಎಂದಿರುವ ಪೂಜಾ ಬೇಡಿ, 'ಆತ ಸುಂದರಾಗಿರುವುದು, ನಟನಾಗಿರುವುದು, ಫಿಟ್‌ನೆಸ್‌ನಲ್ಲಿ ಯುವಜನರಿಗೆ ಮಾದರಿಯಾಗಿರುವುದರಿಂದ ಆತ ಇಂದು ಸಮಸ್ಯೆ ಎದುರಿಸಬೇಕಾಗಿ ಬಂದಿದೆ' ಎಂದಿದ್ದಾರೆ ಪೂಜಾ.

  ಮೊದಲು ನಾಗಾ ಸಾಧುಗಳನ್ನು ಬಂಧಿಸಿ

  ಮೊದಲು ನಾಗಾ ಸಾಧುಗಳನ್ನು ಬಂಧಿಸಿ

  ಬೆತ್ತಲಾಗುವುದು ಅಪರಾಧ ಎನ್ನುವುದಾದರೆ, ಬೆತ್ತಲೆ ತಿರುಗುವ ನಾಗಾ ಸಾಧುಗಳನ್ನು ಮೊದಲು ಬಂಧಿಸಿ. ದೇಹದ ಮೇಲೆ ಬೂದಿ ಹಚ್ಚಿಕೊಂಡ ತಕ್ಷಣ ಬೆತ್ತಲೆಯನ್ನು ಸಹಿಸಿಕೊಳ್ಳಲಾಗುತ್ತದೆ ಎಂದರ್ಥವಲ್ಲ' ಎಂದಿದ್ದಾರೆ ಪೂಜಾ ಬೇಡಿ.

  ಪೂಜಾ ಬೇಡಿ ಹೇಳಿಕೆಗೆ ಪರ-ವಿರೋಧ ಚರ್ಚೆ

  ಪೂಜಾ ಬೇಡಿ ಹೇಳಿಕೆಗೆ ಪರ-ವಿರೋಧ ಚರ್ಚೆ

  ಪೂಜಾ ಬೇಡಿ ಟ್ವಿಟ್ಟರ್ ಹೇಳಿಕೆಗೆ ಹಲವರು ಪರ-ವಿರೋಧ ಹೇಳಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಾಗಾ ಸಾಧುಗಳನ್ನು ಮಿಲಿಂದ್ ಸೊಮನ್ ಜೊತೆಗೆ ಹೋಲಿಸುವುದು ಸರಿಯಲ್ಲ. ನಾಗಾ ಸಾಧುಗಳು ಹೇಗೆ ಆಗುತ್ತಾರೆ ಎಂದು ತಿಳಿದು ಮಾತನಾಡಿ ಎಂದು ಒಬ್ಬಾತ ಆಕ್ರೋಶ ಹೊರಹಾಕಿದ್ದಾನೆ.

  ಹೊಸ ಚಿತ್ರ ಘೋಷಿಸಿ ಮಾಧ್ಯಮಗಳಿಗೆ ಖಡಕ್ ಸಂದೇಶ ಕೊಟ್ಟ ಧ್ರುವ ಸರ್ಜಾ | Dhruva Sarja | Dubari | Nanda Kishore
  ಪೂಜಾ ಹೇಳಿಕೆಗೆ ಬೆಂಬಲವೂ ವ್ಯಕ್ತವಾಗಿದೆ

  ಪೂಜಾ ಹೇಳಿಕೆಗೆ ಬೆಂಬಲವೂ ವ್ಯಕ್ತವಾಗಿದೆ

  ಪೂಜಾ ಹೇಳಿಕೆಗೆ ಪರವಾಗಿ ಬಂದಿರುವ ಒಂದು ಕಮೆಂಟ್‌ನಲ್ಲಿ, ' ಧರ್ಮದ ಹೆಸರಲ್ಲಿ ಬೆತ್ತಲೆ ತಿರುಗುವುದು, ಹಿಂಸಾತ್ಮಕ ಪ್ರವೃತ್ತಿ ಪ್ರದರ್ಶಿಸುವುದು, ಗಾಂಜಾ ಸೇದುವುದು ಇವುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.

  English summary
  Actress Pooja Bedi supports Milind Soman who booked by police for running naked on beach. She says If nudity is crime then arrest Naga Sadhus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X