For Quick Alerts
  ALLOW NOTIFICATIONS  
  For Daily Alerts

  ಗುಂಡಿನ ನಶೆಯಲ್ಲೇ ಪೂನಂ ಪಾಂಡೆ ನಿಶಾ

  By Super
  |

  ರೂಪದರ್ಶಿ ಪೂನಂ ಪಾಂಡೆ ಏನೇ ಮಾಡಿದರು ವಿಭಿನ್ನವಾಗಿಯೇ ಇರುತ್ತದೆ. ಈಗಾಗಲೆ ಈಕೆ ತಮ್ಮ ಹಾಟ್ ಚಿತ್ರಗಳ ಮೂಲಕ ತನ್ನ ಅಭಿಮಾನಿಗಳಿಗೆ ವಿಭಿನ್ನ, ವಿಚಿತ್ರ ಅನುಭವನ್ನೂ ನೀಡಿದ್ದಾರೆ. ಈಗ ಬಾಲಿವುಡ್ 'ನಶಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಈ ಚಿತ್ರದಲ್ಲಿ ಒಂದು ಗುಂಡಿನ ಸನ್ನಿನವೇಶ ಇದೆಯಂತೆ. ಅದನ್ನು ಆದಷ್ಟು ಸಹಜವಾಗಿ ತೆರೆಗೆ ತರಲು ನಿರ್ದೇಶಕರು ಮುಂದಾಗಿದ್ದಾರೆ. ಅವರ ತಲೆಗೆ ಹೊಸ ಐಡಿಯಾ ಬಂದಿದೆ. ಅದೇನೆಂದರೆ ಗುಂಡಿನ ಮತ್ತಿನಲ್ಲೇ ಈ ಸನ್ನಿವೇಶಗಳನ್ನು ಚಿತ್ರೀಕರಿಸಿದರೆ ಹೇಗೆ ಎಂದು.

  ಈ ವಿಷಯವನ್ನು ಪೂನಂ ಪಾಂಡೆ ಕಿವಿಗೂ ಹಾಕಿದ್ದಾರೆ. ಆಕೆ ಕೂಡ ಇದಕ್ಕೆ ಓಕೆ ಎಂದು ತಮ್ಮ ಒಪ್ಪಿಗೆ ನೀಡಿದ್ದಾರೆ. ಗುಂಡಿನ ಮತ್ತಿನಲ್ಲಿ ಅಳತೆ ಮೀರದಂತೆ ಗಮ್ಮತ್ತಾಗಿ ಅಭಿನಯಿಸಿದ್ದಾರಂತೆ. 'ಪರಮಾತ್ಮ' ಆಡಿಸಿದಂತೆ ಆಡಿದ್ದಾರೆ. ಗುಂಡಿನ ಈ ಸನ್ನಿವೇಶವಂತೂ ಅದ್ಭುತವಾಗಿ ಮೂಡಿಬಂದಿದೆ. ಹಾಲಿವುಡ್ ಚಿತ್ರ ಹ್ಯಾಂಗೋವರ್ ನಂತೆಯೇ ಅದ್ಭುತವಾಗಿದೆ ಎನ್ನುತ್ತಾರೆ ಪೂನಂ.

  ಚಿತ್ರದ ಹೆಸರೇ ನಶಾ. ಇನ್ನು ನಶೆ ಇಲ್ಲದಿದ್ದರೆ ಹೇಗೆ? ಚಿತ್ರೀಕರಣದಲ್ಲಿ ನಾನಂತೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಸದ್ಯಕ್ಕೆ ನಾನಿನ್ನೂ ನಶಾ ಮೂಡಿನಲ್ಲೇ ಇದ್ದೇನೆ. ಇನ್ನು ಹೊಸ ವರ್ಷದ ನನ್ನ ಹೊಸ ನಿರ್ಣಯಗಳೇನು ಇಲ್ಲ ಎಂದು ಟ್ವೀಟಿಸಿದ್ದಾರೆ ಪೂನಂ ಪಾಂಡೆ.

  ಇಷ್ಟಕ್ಕೂ ನಶಾ ಚಿತ್ರದ ಕಥಾವಸ್ತು ಏನೆಂದರೆ, ಯುವಕರ ದುಶ್ಚಟಗಳ ಸುತ್ತ ಕಥೆ ತಿರುಗುತ್ತದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಜಿಸ್ಮ್' ಖ್ಯಾತಿಯ ನಿರ್ದೇಶಕ ಅಮಿತ್ ಸಕ್ಸೇನಾ. ಚಿತ್ರದ ನಿರ್ಮಾಪಕರು ಆದಿತ್ಯ ಭಾಟಿಯಾ. Addiction ಎಂಬುದು ಚಿತ್ರದ ಅಡಿಬರಹ. ಅಂದಹಾಗೆ ಈ ಚಿತ್ರದಲ್ಲಿ ತುಂಬಾ ಬೋಲ್ಡ್ ಸೀನ್ ಗಳಿವೆಯಂತೆ. ಇದು ವಯಸ್ಕರ ಚಿತ್ರವೋ ಅಥವಾ ಅದನ್ನೂ ಮೀರಿದ್ದೋ ಎಂಬ ಬಗ್ಗೆ ಸದ್ಯಕ್ಕೆ ನಿಖರವಾದ ಮಾಹಿತಿ ಇಲ್ಲ. (ಏಜೆನ್ಸೀಸ್)

  English summary
  Actress Poonam Pandey drinks to make her bollywood film 'Nasha' more real. Everyone is enjoying including the crew and I am excited about it," said Poonam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X